ಬೆಂಗಳೂರು: 6.3 ಮೆಗಾವ್ಯಾಟ್ ಸಾಮರ್ಥ್ಯದ ವಿಶಿಷ್ಟ ಪವನ ಶಕ್ತಿ ವಿದ್ಯುತ್ ಸ್ಥಾವರಕ್ಕೆ ಹೆಚ್‌ಎಎಲ್ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಟಿ. ಸುವರ್ಣ ರಾಜು ಅವರು ಶನಿವಾರ ಚಾಲನೆ ನೀಡಿದ್ದಾರೆ.
ಪವನ ಶಕ್ತಿ ವಿದ್ಯುತ್ ಸ್ಥಾವರ ಕುರಿತಂತೆ ಮಾತನಾಡಿರುವ ಟಿ. ಸುವರ್ಣ ರಾಜು ಅವರು, ಪವನ ವಿದ್ಯುತ್ ಸ್ಥಾವರದಿಂದ ಶೇಖರಿಸಲಾದ ವಿದ್ಯುತ್ ಬೆಂಗಳೂರು ನಗರಕ್ಕೆ ಸಹಾಯಕವಾಗಲಿದೆ. ಸ್ಥಾವರ ಸ್ಥಾಪನೆಗೆ ಕರ್ನಾಟಕದಲ್ಲಿ ಮೊದಲ ಬಾರಿಗೆ ಬಿಎಇಎಲ್ ಹಸಿರು ನಿಶಾನೆ ತೋರಿದೆ. ಈ ವಿದ್ಯುತ್ ಸ್ಥಾಪರವೂ ನಗರಕ್ಕೆ ಶೇ.15 ರಷ್ಟು ವಿದ್ಯುತ್ ನ್ನು ನೀಡಲಿದೆ ಎಂದು ಹೇಳಿದ್ದಾರೆ.
ವಿದ್ಯುತ್ ಸ್ಥಾವರವನ್ನು ಸುಜ್ಲೋನ್ ಎನರ್ಜಿ ಲಿಮಿಟೆಡ್ ಕಂಪನಿ ವತಿಯಿಂದ ಸ್ಥಾಪನೆ ಮಾಡಲಾಗುತ್ತಿದ್ದು, ವಿದ್ಯುತ್ ಉತ್ಪಾದನಾ ಕೇಂದ್ರವನ್ನು ರು. 44 ಕೋಟಿ ವೆಚ್ಚದಲ್ಲಿ ಹರಪ್ಪನಹಳ್ಳಿಯಲ್ಲಿ ನಿರ್ಮಾಣ ಮಾಡಲಾಗಿದೆ. ಪವನ ವಿದ್ಯುತ್ ಕೇಂದ್ರವು ವಾರ್ಷಿಕವಾಗಿ 1.50 ಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದಿದ್ದಾರೆ.