ಬೆಂಗಳೂರಿನ ಸಾಕ್ರ ವಲ್ರ್ಡ್ಆಸ್ಪತ್ರೆಯ ಪ್ರೋ ಡಾ ಸಿವಿ ಹರಿನಾರಾಯಣ್‍ ರವರಿಗೆ ಭಾರತದ ರಾಷ್ಟ್ರಪತಿ ಶ್ರೀ ಪ್ರಣಬ್ ಮುಖರ್ಜಿಯವರು ಬಿಸಿ ರಾಯ್ ರಾಷ್ಟ್ರ ಪ್ರಶಸ್ತಿಯನ್ನು ನೀಡಿದರು. 
ರಾಜ್ಯ

ನಗರದ ವೈದ್ಯ ಡಾ ಸಿವಿ ಹರಿನಾರಾಯಣ್‍ಗೆ ಬಿಸಿ ರಾಯ್ ರಾಷ್ಟ್ರಪ್ರಶಸ್ತಿ ಪ್ರದಾನ

ರಾಷ್ಟ್ರೀಯ ವೈದ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಗೌರವಾನಿತ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜೀಯವರು ಡಾ ಬಿ ಸಿ ರಾಯ್ ರಾಷ್ಟ್ರೀಯ ವೈದ್ಯ ಪ್ರಶಸ್ತಿಯನ್ನು...

ಬೆಂಗಳೂರು: ರಾಷ್ಟ್ರೀಯ ವೈದ್ಯ ದಿನಾಚರಣೆಯ ಸಂದರ್ಭದಲ್ಲಿ ಭಾರತದ ಗೌರವಾನಿತ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜೀಯವರು ಡಾ ಬಿ ಸಿ ರಾಯ್ ರಾಷ್ಟ್ರೀಯ ವೈದ್ಯ ಪ್ರಶಸ್ತಿಯನ್ನು ಎಂಡೋಕ್ರಿನಾಲಜೀ ಮತ್ತು ಮೆಟಬಾಲಿಸಮ್ ಸಂಬಂಧಿಸಿದ ಮೂಳೆ ರೋಗಗಳ ಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡಿರುವ ಬೆಂಗಳೂರಿನ ಸಾಕ್ರ ವಲ್ರ್ಡ್ ಆಸ್ಪತ್ರೆಯ ಪ್ರೋ ಡಾ ಸಿ ವಿ ಹರಿನಾರಾಯಣ್‍ರವರಿಗೆ ನೀಡಿದರು. ಮೆಟಬೊಲಿಸಮ್ ಸಂಬಂಧಿತ ಮೂಳೆ ರೋಗಗಳ ಬಗ್ಗೆ ಅವರ ಕೆಲಸವನ್ನು ಹಲವು ವೈದ್ಯಕೀಯ ಪುಸ್ತಕಗಳಲ್ಲಿ ಉಲ್ಲೇಖಿಸಿದೆ.

ಪ್ರೋ ಡಾ ಸಿ ವಿ ಹರಿನಾರಾಯಣ್‍ರವರು ಸಾಕ್ರ ವಲ್ರ್ಡ್ ಆಸ್ಪತ್ರೆಯ ಎಂಡೋಕ್ರಿನಾಲಜೀ, ಮಧುಮೇಹ, ಥೈರಾಯ್ಡ್ ಮತ್ತು ಆಸ್ಟಿಯೊಪೊರೋಸಿಸ್ ಅಸ್ವಸ್ಥೆಗಳ ವಿಭಾಗದ ನಿರ್ದೇಶಕರಾಗಿದ್ದಾರೆ.

ಬಿ ಸಿ ರಾಯ್ ರಾಷ್ಟ್ರೀಯ ಪ್ರಶಸ್ತಿಯನ್ನು ಪ್ರತಿ ವರ್ಷ ಭಾರತದ ವೈದ್ಯಕೀಯ ಕೌನ್ಸಿಲ್ ಸಂಸ್ಥೆಯು ವೈದ್ಯಕೀಯ ಕ್ಷೇತ್ರದಲ್ಲಿ ಉತ್ಕøಷ್ಟ ಸೇವೆ ಮತ್ತು ಸಾಧನೆಯನ್ನು ಮಾಡಿರುವ ವೈದ್ಯರಿಗೆ ನೀಡಲಾಗುವುದು.

ಪ್ರೋ ಡಾ ಸಿ ವಿ ಹರಿನಾರಾಯಣ್‍ರವರು ತಮ್ಮ ಅಧ್ಯಯದ ಮೂಲಕ ಭಾರತದ ಜನರಲ್ಲಿನ ವಿಟಮಿನ್ ಡಿ ಅಂಶದ ಕೊರತೆಯೇ ಪ್ರಾಥಮಿಕ ಹೈಪರ್‍ಥೈರಾಯ್ಡಿಸಮ್ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಲ್ಲಿ ಸಂಭವಿಸುವ ಮೂಳೆಗೆ ಸಂಬಂಧಿಸಿದ ರೋಗಗಳಿಗೆ ಮುಖ್ಯ ಕಾರಣ ಎಂಬುದು ತಿಳಿಸಿದ್ದಾರೆ. ಸೂರ್ಯನಿಂದ ಒದ್ದೆಯಾದ ಭಾರತದಂತಹ ದೇಶದಲ್ಲಿ ವಿಟಮಿನ್ ಡಿ ಅಂಶದ ಕೊರತೆಯಿದೆ ಎಂಬುದನ್ನು ನಂಬಲು ಸಾಧ್ಯೆವಾಗುತ್ತಿಲ್ಲ. ನಂತರ ಈ ಸತ್ಯವನ್ನು ದೇಶಾದ್ಯಂತ ನಡೆದ ಹಲವು ವೈಜ್ಞಾನಿಕ ಸಂಶೋಧನೆಗಳು ಖಚಿತ ಪಡಿಸಿವೆ. ದಕ್ಷಿಣ ಭಾರತದಿಂದ ಅವರ ಮತ್ತು ಅವರ ತಂಡದ ಪ್ರಮುಖ ಜನಸಂಖ್ಯೆಯ ಅಧ್ಯಯನವು ಭಾರತದ ಹಳ್ಳಿಗಳಲ್ಲಿ ವಾಸಿಸುವ ಕೆಲಸಗಾರ ಆಹಾರ ಪದ್ಧತಿಯಲ್ಲಿ ಕ್ಯಾಲ್ಶಿಯಂ ಅಂಶ ಕೊರತೆ ಮತ್ತು ವಿಟಮಿನ್ ಡಿ ಅಂಶದ ಕೊರತೆಯನ್ನು ದಾಖಲಿಸಲು ಇದುವರೆಗು ಇದೇ ಮೊದಲ ಹಾಗೂ ಏಕೈಕ ಅಧ್ಯಯನವಾಗಿದೆ. ತರುವಾಯ ಅವರ ತಂಡವು ಪ್ರೀ ವಿಟಮಿನ್ ಡಿ ಸಂಶ್ಲೇಷಣೆಯ ಅಂಪೌಲೆ ಮಾದರಿಯ  ಮೂಲಕ ನಾವು ಭಾರತೀಯರು ಬೆಳ್ಳಗೆ 11 ರಿಂದ ಮಧ್ಯಹ್ನ 2ರವರೆಗೆ ನಮ್ಮ ದೇಹದ ಶೇಕಡ 10 ರಿಂದ 15ರಷ್ಟು ಭಾಗವನ್ನು ಸುಮಾರು 15 ರಿಂದ 30 ನಿಮಿಷಗಳ ಕಾಲ ಸೂರ್ಯನಿಗೆ ಒಡ್ಡುವುದರಿಂದ ಸಾಕಷ್ಟು ವಿಟಮಿನ್ ಡಿ ಅಂಶವನ್ನು ಪಡೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಮೊದಲ ಬಾರಿಗೆ ಪ್ಲೋರೊಸಿಸ್ ಸಮಸ್ಯೆಯ ರೋಗಿಗಳಲ್ಲಿನ ಮೆಟಬಾಲಿಸಮ್ ಸಂಬಂಧಿತ ಮೂಳೆ ರೋಗಗಳು ಸಂಭವಿಸಲು ಮೂತ್ರ ನಾಳಗಳ ಹಾನಿಯೇ ಪ್ರಮುಖ ಕಾರಣವೆಂದು ತೋರಿಸಿಕೊಟ್ಟವರು ಡಾ ಸಿ ವಿ ಹರಿನಾರಾಯಣ್‍ರವರು(ಅಗ್ರ 10 ಪ್ರಕಾಶನಗಳು ಶ್ರೇಣಿಸಿದೆ-ಅಂತರ್ಜಾಲದ ಮೂಲಕ, ವಷ್ 2006 ). ಮುಂಬೈನ ಬಿಎಆರ್‍ಸಿ ಸಂಸ್ಥೆಯೊಂದಿಗಿನ ಇವರ ಕಾರ್ಯ ಭಾರತದಲ್ಲಿ ಪ್ಯಾರಾಥೈರಾಯ್ಡ್‍ಗೆ ದೇಶೀಯವಾಗಿ ಐಆರ್‍ಎಮ್ ರೆಡಿಯೋಇಮ್ಯುನೋಅಸ್ಸೆಯ್‍ಯನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡಿತ್ತು (ಮೇಕ್ ಇನ್ ಇಂಡಿಯಾ ಪರಿಕಲ್ಪನೆ). ಈ ಎಲ್ಲಾ ಸಾಧನೆಗಳ ಬೇನ್ನಲೇ ಇವರ ತಂಡವು ಋತುಬಂಧಕ್ಕೊಳಗಾದ ಆಸ್ಟಯೊಪೊರೋಸಿಸ್‍ನ ನಿರ್ವಹಣೆಯ ಬಗ್ಗೆ ಕ್ಲಿನಿಕಲ್ ಪ್ರ್ಯಾಕ್ಟೀಸ್ ಗೈಡ್ಲೈನ್‍ಗಳನ್ನು ಅಭಿವೃದ್ಧಿ ಪಡಿಸಿತ್ತು-ಇದು ಭಾರತದ ಮೆನೋಪಾಸ್ ಸಮಾಜಕ್ಕೆ ಕಾರ್ಯಕಾರಿ ಸಾರಾಂಶ ಮತ್ತು ಶಿಫಾರಸುಗಳು. ತಿರುಪತಿಯ ಎಸ್‍ವಿಐಎಮ್‍ಎಸ್ ಸಂಸ್ಥೆಯಲ್ಲಿ ಉತ್ತಮ ಎಂಡೋಕ್ರಿನ್ ಪ್ರಯೋಗಶಾಲೆಯ ಸೌಕರ್ಯದೊಂದಿಗೆ ಸಂಪೂರ್ಣ ಎಂಡೋಕ್ರಿನಾಲಜೀ ವಿಭಾಗವು ಅಭಿವೃದ್ಧಿ ಹೊಂದಲು ಡಾ ಸಿ ವಿ ಹರಿನಾರಾಯಣ್‍ರವರ 2 ದಶಕದ ಶ್ರಮವಿದೆ.

ಭಾರತ ರಾಷ್ಟ್ರಪತಿಗಳಾದ ಶ್ರೀ ಪ್ರಣಬ್ ಮುಖರ್ಜೀಯವರು 2008, 2009 ಮತ್ತು 2010ನೇ ಸಾಲಿನ ಡಾ ಬಿ ಸಿ ರಾಯ್ ರಾಷ್ಟ್ರ ಪ್ರಶಸ್ತಿಯನ್ನು ಜುಲೈ 1ರ ವೈದ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

SCROLL FOR NEXT