ರಾಜ್ಯ

ಪ್ರೆಸ್ಟೀಜ್ ಕಂಪನಿಯ ಅಕ್ರಮ ಒತ್ತುವರಿ ವಾರದಲ್ಲಿ ತೆರವು: ಕಾಗೋಡು ತಿಮ್ಮಪ್ಪ

Manjula VN

ಬೆಂಗಳೂರು: ದೇವನಹಳ್ಳಿಯಲ್ಲಿನ ಸರ್ಕಾರಿ ಭೂಮಿಯನ್ನು ಪ್ರೆಸ್ಟೀಜ್ ಕಂಪನಿ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದು, ವಾರದೊಳಗಾಗಿ ತೆರವುಗೊಳಿಸಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಹೇಳಿದ್ದಾರೆ.

ವಿಧಾನಸಭೆಯಲ್ಲಿ ನಿನ್ನೆ ನಡೆದ ಪ್ರಶ್ನೋತ್ತರ ಅವಧಿಯಲ್ಲಿ ದೇವನಹಳ್ಳಿ ಕ್ಷೇತ್ರದ ಶಾಸಕ ಪಿಳ್ಳಮುನಿಶಾಮಪ್ಪ ಅವರು ಕಾಗೋಡು ತಿಮ್ಮಪ್ಪ ಅವರಿಗೆ ಪ್ರಶ್ನೆ ಕೇಳಿದರು. ಕುಂದಾಣಿ ಹೋಬಳಿ, ಕೋಟ್ಟಿಗೆ ತಿಮ್ಮನಹಳ್ಳಿ, ಸೊಣ್ಣೇನಹಳ್ಳಿ, ಕಾರಳ್ಳಿ, ಅಮಾನಿಕೆರೆ, ತೈಲಗೆರೆ ಗ್ರಾಮಗಳಲ್ಲಿ ಬಿ ಖರಾಜು 5.10 ಎಕರೆ ಸರ್ಕಾರಿ ಜಮೀನನ್ನು ಪ್ರೆಸ್ಟೀಜ್ ಕಂಪನಿಯವರು ಅಕ್ರಮವಾಗಿ ಒತ್ತಿಕೊಂಡಿದ್ದಾರೆ. ಪ್ರತೀ ಎಕರೆ ಭೂಮಿ 10 ರಿಂದ 15 ಕೋಟಿ ಬೆಲೆ ಬಾಳುತ್ತದೆ. ಇದಲ್ಲದೆ ಕೆಲ ಬಿಲ್ಡರ್ ಗಳು ಕೂಡ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಸರ್ಕಾರ ಕೂಡಲೇ ತೆರವುಗೊಳಿಸಬೇಕೆಂದು ಹೇಳಿದರು.

ಇದಕ್ಕುತ್ತರಿಸಿದ ಕಾಗೋಡು ತಿಮ್ಮಪ್ಪ ಅವರು, ಮೇ.5 2011 ರಲ್ಲಿಯೇ ದೇವನಹಳ್ಳಿ ತಹಸೀಲ್ದಾರ್ ಅವರು ಪ್ರೆಸ್ಟೀಜ್ ಕಂಪನಿಗೆ ನೋಟಿಸ್ ಜಾರಿ ಮಾಡಿದ್ದರು. ಆದರೆ, ಈ ವರೆಗೂ ಯಾವುದೇ ತೆರವು ಮಾಡಿಲ್ಲ. ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ವಿಚಾರ ಸರ್ಕಾರದ ಗಮನಕ್ಕೆ ಬಂದಿದೆ. ವಾರದೊಳಗಾಗಿ ತೆರವುಗೊಳಿಸಲಾಗುತ್ತದೆ ಎಂದು ಹೇಳಿದರು.

SCROLL FOR NEXT