ಬೆಂಗಳೂರು: ರಾಜ್ಯದ 300 ಶಾಸಕರಲ್ಲಿ 97 ಶಾಸಕರು ಇನ್ನೂ ಲೋಕಾಯುಕ್ತಕ್ಕೆ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.
ಸಚಿವರುಗಳಾದ ಜಿ ಪರಮೇಶ್ವರ್ ಹಾಗೂ ಯು.ಟಿ ಖಾದರ್ ಸೇರಿದಂತೆ 97 ಶಾಸಕರು 2015-16 ನೇ ಸಾಲಿನ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಇದುವೆರಗೂ ಸಲ್ಲಿಸಿಲ್ಲ.
ಕಳೆದ ವರ್ಷಗಳಿಗೆ ಹೋಲಿಸಿದರೇ ಈ ವರ್ಷವೇ ಇಷ್ಟೊಂದು ಪ್ರಮಾಣದ ಜನನಾಯಕರು ತಮ್ಮ ಆಸ್ತಿ ವಿವರ ಸಲ್ಲಿಸದೇ ಬಾಕಿ ಉಳಿಸಿಕೊಂಡಿದ್ದಾರೆ. ಭಾಸ್ಕರ್ ರಾವ್ ರಾಜೀನಾಮೆ ನಂತರ ಲೋಕಾಯುಕ್ತ ಸಂಸ್ಥೆಗೆ ನ್ಯಾಯಮೂರ್ತಿ ನೇಮಕವಾಗದ ಹಿನ್ನೆಲೆಯಲ್ಲಿ ಶಾಸಕರು ಆಸ್ತಿ ವಿವರ ಸಲ್ಲಿಸಿಲ್ಲ ಎಂದು ಹೇಳಲಾಗಿದೆ.
225 ವಿಧಾನ ಸಬೆ ಸದಸ್ಯರಲ್ಲಿ 69 ಶಾಸಕರು, ಹಾಗೂ 75 ವಿಧಾನ ಪರಿಷತ್ ಸದಸ್ಯರಲ್ಲಿ 28 ಶಾಸಕರು ಕರ್ನಾಟಕ ಲೋಕಾಯುಕ್ತ ಕಾಯ್ದೆ ಅನ್ವಯ ಇದುವರೆಗೂ ತಮ್ಮ ಆಸ್ತಿ ವಿವರ ಸಲ್ಲಿಸಿಲ್ಲ.
ಪ್ರತಿ ವರ್ಷ ಜೂನ್ 30ರೊಳಗೆ ಪ್ರತಿಯೊಬ್ಬ ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಸುತ್ತಿದ್ದರು. ಸಚಿವರುಗಳಾದ ಯು ಟಿ ಖಾದರ್. ಈಶ್ವರ್ ಬಿ.ಖಂಡ್ರೆ, ಸೇರಿದಂತೆ ಹಲವು ಶಾಸಕರು ವಿವರ ಸಲ್ಲಿಸಿಲ್ಲ.