ರಾಜ್ಯ

ಸರಗಳ್ಳನನ್ನು ಹಿಡಿದು ತರುವಾಗ ಅಪಘಾತ: ಪೊಲೀಸರಿಗೆ ಮಣ್ಣು ಮುಕ್ಕಿಸಿ ಆರೋಪಿ ಎಸ್ಕೇಪ್

Shilpa D

ಬೆಂಗಳೂರು: ಲಾರಿ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಕೇಂದ್ರ ಅಪರಾಧ ದಳದ ಇಬ್ಬರು ಇನ್‌ಸ್ಪೆಕ್ಟರ್‌ಗಳು ಮತ್ತು ಮೂವರು ಕಾನ್‌ಸ್ಟೆಬಲ್‌ಗಳು ಗಂಭೀರ ಗಾಯಗೊಂಡು ಪುಣೆಯಿಂದ ಕರೆತರಲಾಗುತ್ತಿದ್ದ ಸರಗಳ್ಳನು ಅಪಘಾತ ಸ್ಥಳದಿಂದ ಪರಾರಿಯಾಗಿರುವ ಘಟನೆ ತುಮಕೂರಿರ ಊರ್ಕೆರಾ ಗ್ರಾಮದ ಬಳಿ ನಡೆದಿದೆ.

ಇನ್‌ಸ್ಪೆಕ್ಟರ್‌ಗಳಾದ ಕೆ.ಗಿರೀಶ್‌, ಆನಂದ್‌ ಕಬ್ಬೂರಿ, ಕಾನ್‌ಸ್ಟೆಬಲ್‌ಗಳಾದ ಸತೀಶ್‌, ಕುಮಾರ ಸ್ವಾಮಿ, ಮಹಾದೇವ ಗಂಭೀರ ಗಾಯಗೊಂಡಿದ್ದಾರೆ. ಗಾಯಾಳು ಇನ್‌ಸ್ಪೆಕ್ಟರ್‌ಗಳನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತೀವ್ರ ಗಾಯಗೊಂಡಿರುವ ಕಾನ್‌ಸ್ಟೆಬಲ್‌ಗಳನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜು.19 ರಂದು ಇಬ್ಬರು ಸಿಸಿಬಿ ಇನ್‌ಸ್ಪೆಕ್ಟರ್‌, ಐವರು ಕಾನ್‌ಸ್ಟೆಬಲ್‌ ನೇತೃತ್ವದ ತಂಡ ಸರಗಳ್ಳರನ್ನು ಬಂಧಿಸಿಲು ಪುಣೆಗೆ ತೆರಳಿತ್ತು. ಸಂಜಯನಗರ
ಠಾಣೆಗೆ ಸೇರಿದ ಪ್ರಕರಣವೊಂದರಲ್ಲಿ  ಭಾಗಿಯಾಗಿದ್ದ ಅಲಿ ಎಂಬಾತನನ್ನು ಹಿಡಿದು ಕರೆತರುವಾಗ ಇನೋವಾ ಕಾರಿಗೆ ಲಾರಿ ಡಿಕ್ಕಿ ಹೊಡೆದಿದೆ.

ಕಾರಿಗೆ ಲಾರಿ ಡಿಕ್ಕಿ ಹೊಡೆಯುತ್ತಿದ್ದಂತೆ  ಇನ್‌ಸ್ಪೆಕ್ಟರ್‌ಗಳು, ಕಾನ್‌ಸ್ಟೆಬಲ್‌ಗಳು ಗಾಯಗೊಂಡರು. ಈ ವೇಳೆ ಕಾರಿನಲ್ಲಿ ಕುಳಿತಿದ್ದ ಸರಗಳ್ಳ ಬೇಡಿ ಸಮೇತ ಅಲ್ಲಿಂದ ಪರಾರಿಯಾಗಿದ್ದಾನೆ.

ನಾನು ಕಾರಿನ ಮಧ್ಯ ಭಾಗದಲ್ಲಿ ಕುಳಿತಿದ್ದೆ, ಹಾಗಾಗಿ ಸಣ್ಣಪುಟ್ಟ ಗಾಯಗಳಿಂದಾಗಿ ನಾನು ಬಚಾವ್ ಆಗಿದ್ದೇನೆ. ಆದರೆ ಉಳಿದ ಪೊಲೀಸರಿಗೆ ತೀವ್ರವಾದ ಗಾಯಗಳಾಗಿವೆ ಎಂದು ಸಿಸಿಬಿ ಇನ್ಸ್ ಪೆಕ್ಟರ್ ಗಿರಿ ಹೇಳಿದ್ದಾರೆ.

SCROLL FOR NEXT