ಮೆಟ್ರೋ ಸ್ಮಾರ್ಟ್ ಕಾರ್ಡ್ 
ರಾಜ್ಯ

ಭವಿಷ್ಯದಲ್ಲಿ ಮೆಟ್ರೋ-ಬಿಎಂಟಿಸಿ ಪ್ರಯಾಣಕ್ಕೆ ಒಂದೇ ಸ್ಮಾರ್ಟ್ ಕಾರ್ಡ್

ಭವಿಷ್ಯದಲ್ಲಿ ಬಿಎಂಟಿಸಿ ಬಸ್ ಮತ್ತು ಮಟ್ರೋ ರೈಲಿನಲ್ಲಿ ಸಂಚರಿಸಲು ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಎರಡೂ ಸಾರಿಗೆಯಲ್ಲಿ...

ಬೆಂಗಳೂರು: ಭವಿಷ್ಯದಲ್ಲಿ ಬಿಎಂಟಿಸಿ ಬಸ್ ಮತ್ತು ಮಟ್ರೋ ರೈಲಿನಲ್ಲಿ ಸಂಚರಿಸಲು ಪ್ರತ್ಯೇಕ ಟಿಕೆಟ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ. ಏಕೆಂದರೆ ಎರಡೂ ಸಾರಿಗೆಯಲ್ಲಿ ಸಂಚರಿಸಲು ಒಂದೇ ಸ್ಮಾರ್ಟ್ ಕಾರ್ಡ್ ನೀಡಲು ಬಿಎಂಆರ್ಸಿಎಲ್ ಮತ್ತು ಬಿಎಂಟಿಸಿ ಚಿಂತನೆ ನಡೆಸಿವೆ.
ಬಿಎಂಆರ್ಸಿಎಲ್ ಸಾರಿಗೆ ಇಲಾಖೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ)ಯ ಹಿರಿಯ ಅಧಿಕಾರಿಗಳು ಇತ್ತೀಚೆಗಷ್ಟೇ ಉನ್ನತ ಮಟ್ಟದ ಸಭೆ ನಡೆಸಿ ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ಅನ್ನು ಮೆಟ್ರೋ ಬಳಕೆಗೂ ಅನುಕೂಲವಾಗುವಂತೆ ರೂಪಿಸುವ ಕುರಿತು ಮಾತುಕತೆ ನಡೆಸಿದ್ದಾರೆ. 
ಬಿಎಂಆರ್ಸಿಎಲ್ ನ ಪ್ರಧಾನ ಕಾರ್ಯದರ್ಶಿ ಇವಿ ರಮಣ ರೆಡ್ಡಿ ಅವರು ಮಾದ್ಯಮಗಳ ಜತೆ ಮಾತನಾಡಿ, ಬಿಎಂಟಿಸಿ ಕಳೆದ ತಿಂಗಳು ನಗದು ರಹಿತ ಸೇವೆ ಒದಗಿಸುವ ಸಲುವಾಗಿ ಸ್ಮಾರ್ಟ್ ಕಾರ್ಡ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು, ಇದರ ಪ್ರಯೋಜನ ಪ್ರಯಾಣಿಕರಿಗೆ ಸೆಪ್ಟೆಂಬರ್ ನಲ್ಲಿ ಸಿಗಲಿದೆ. ಈ ಕಾರ್ಡ್ ಬಿಎಂಟಿಸಿ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿರದೆ ಮೆಟ್ರೋ ಪ್ರಯಾಣಕ್ಕೂ ಬಳಕೆಯಾಗುವ ಸಾಧ್ಯತೆ ಇದೆ ಎಂದರು.
ಆದರೆ ಈ ಬಗ್ಗೆ ಎರಡು ಸಾರಿಗೆ ಸಂಸ್ಥೆಗಳು ಒಂದು ನಿರ್ಧಾರಕ್ಕೆ ಬಂದಿಲ್ಲ. ಮೊದಲು ಬಿಎಂಟಿಸಿ ತನ್ನ ಸ್ಮಾರ್ಟ್ ಕಾರ್ಡ್ ನ ತಾಂತ್ರಿಕ ಅಂಶಗಳನ್ನು ಪರೀಕ್ಷಿಸಲಿದೆ. ನಂತರ ಇದು ವರ್ಕ್ ಔಟ್ ಆಗಲಿದೆ ಎಂಬುದರ ಮೇಲೆ ನಿಂತಿದೆ ಎಂದು ರಮಣ ರೆಡ್ಡಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಜ್ಯ ಸರ್ಕಾರಕ್ಕೆ 'ಸ್ಟಿಂಗ್ ಆಪರೇಷನ್' ಆತಂಕ: ಟ್ರ್ಯಾಪ್‌ಗೆ ಯತ್ನ ನಡೆಯುತ್ತಿದೆ, ಹುಷಾರಾಗಿರಿ ; 5 ಸಚಿವರಿಗೆ ಡಿಕೆಶಿ ಎಚ್ಚರಿಕೆ ಸಂದೇಶ

‘ವೈಯಕ್ತಿಕ ಮಹತ್ವಾಕಾಂಕ್ಷೆ ಅಲ್ಲ, ಧ್ಯೇಯಕ್ಕಾಗಿ ಬದುಕಿದ್ದೇನೆ, ದೇಶದ ಜನತೆಗೆ ತಲೆಬಾಗುತ್ತೇನೆ’: ಆಡಳಿತದಲ್ಲಿ 25 ವರ್ಷ ಪೂರೈಸಿದ ಪ್ರಧಾನಿ ಮೋದಿ ಮಾತು; Video

ಹಾಸನದ ಹೇಮಾವತಿ ನಾಲೆಯಲ್ಲಿ ಪ್ಲಾಸ್ಟಿಕ್‌ ಚೀಲದಲ್ಲಿ ವೃದ್ಧೆಯ ಶವ ಪತ್ತೆ: ಕೊಲೆ ಶಂಕೆ

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video