ಎಸ್.ಸುಮತಿ 
ರಾಜ್ಯ

ಸಿಗದ ಸಂಬಳ: 2ನೇ ಬಾರಿಗೆ ಆತ್ಮಹತ್ಯೆಗೆ ಯತ್ನಿಸಿದ ಹೋಂ ಗಾರ್ಡ್ ಸಿಬ್ಬಂದಿ ಸುಮತಿ

4 ತಿಂಗಳಿಂದ ವೇತನ ಸಿಗದಿದ್ದಕ್ಕೆ ಬೇಸತ್ತು ಹಿರಿಯ ಅಧಿಕಾರಿಗಳ ಮುಂದೆ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದ ಗೃಹ ರಕ್ಷಕ ದಳ ಸಿಬ್ಬಂದಿ ಎಸ್ ಸುಮತಿ ಮತ್ತೆ ...

ಬೆಂಗಳೂರು: 4 ತಿಂಗಳಿಂದ ವೇತನ ಸಿಗದಿದ್ದಕ್ಕೆ ಬೇಸತ್ತು ಹಿರಿಯ ಅಧಿಕಾರಿಗಳ ಮುಂದೆ ಗುರುವಾರ ಆತ್ಮಹತ್ಯೆಗೆ ಯತ್ನಿಸಿದ್ದ ಗೃಹ ರಕ್ಷಕ ದಳ ಸಿಬ್ಬಂದಿ ಎಸ್ ಸುಮತಿ ಮತ್ತೆ ಶುಕ್ರವಾರ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಆರ್ಥಿಕ ಸಮಸ್ಯೆಯಿಂದ ಬಳಲುತ್ತಿರುವ ಸುಮತಿ ಅವರನ್ನು ಎರಡನೇ ಬಾರಿಗೆ ಆತ್ಮಹತ್ಯೆ ಪ್ರಯತ್ನ ನಡೆಸಿದ್ದು, ಆಕೆಯ 15 ವರ್ಷದ ಪುತ್ರ ರಕ್ಷಿಸಿದ್ದಾನೆ. ಹಣಕಾಸಿನ ಒತ್ತಡ ಎದುರಿಸಲಾಗದೇ ಶುಕ್ರವಾರ ಸುಮತಿ ಎರಡು ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇದನ್ನು ಮನಗಂಡ ಪುತ್ರ ಗೋಕುಲ್  ಆಕೆಯನ್ನು ತಕ್ಷಣವೇ ಶಿವಾಜಿನಗರದ ಆಸ್ಪತ್ರೆಗೆ ದಾಖಲಿಸಿದ್ದಾನೆ.

ದೇವರು ದೊಡ್ಡವನು ಎರಡನೇ ಬಾರಿಗೆ ನನ್ನ ಮಗನ ಮೂಲಕ ನನ್ನನ್ನು ಬದುಕಿಸಿದ್ದಾನೆ. ನಾಳೆಯನ್ನು ಹೇಗೆ ಎದುರಿಸಬೇಕು ಎಂಬುದು ನನಗೆ ತಿಳಿಯುತ್ತಿಲ್ಲ ಎಂದು ತಮ್ಮ ಅಸಹಾಯಕತೆ ವ್ಯಕ್ತ ಪಡಿಸಿದ್ದಾರೆ.

ಇದು ಕೇವಲ ಸುಮತಿ ಮಾತ್ರವಲ್ಲ, ಉಳಿದ 619 ಹೋಮ್ ಗಾರ್ಡ್ ಸಿಬ್ಬಂದಿಯ ಕಥೆಯಾಗಿದೆ. ಹಲವು ತಿಂಗಳಿಂದ ಸಂಬಳ ಸಿಗದೇ ಇದ್ದುದ್ದರಿಂದ ಸುಮತಿ ಕೆಲವು ಪೊಲೀಸ್ ಅಧಿಕಾರಿಗಳಿಂದ ಹಣಕಾಸಿನ ಸಹಾಯ ಕೇಳಿದ್ದರು. ಆದರೆ ಆಗೆ ಯಾರು ಅವರ ನೆರವಿಗೆ ಬಂದಿರಲಿಲ್ಲ. ಈಗ ಅವರು ಆತ್ಮಹತ್ಯೆ ಮಾಡಿದ ಬಳಿಕ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT