ಸಾಂದರ್ಭಿಕ ಚಿತ್ರ 
ರಾಜ್ಯ

ಬೆಂಗಳೂರಿನ ಟ್ರಾಫಿಕ್ ಜಾಮ್ ಸ್ಥಳಗಳನ್ನು ಪಟ್ಟಿ ಮಾಡುವಂತೆ ಬಿಬಿಎಂಪಿಗೆ ಹೈಕೋರ್ಟ್ ಆದೇಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಸಮರ್ಪಕ ಯೋಜನೆಗಳ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್...

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಅಸಮರ್ಪಕ ಯೋಜನೆಗಳ ಬಗ್ಗೆ ತೀವ್ರ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, ಆಗಸ್ಟ್ 10ರೊಳಗೆ ಟ್ರಾಫಿಕ್ ಸಮಸ್ಯೆ ಜಾಸ್ತಿಯಾಗಿರುವ ನಗರದ ಸ್ಥಳಗಳನ್ನು ಪಟ್ಟಿಮಾಡಿ ವರದಿ ನೀಡಬೇಕು ಎಂದು ಆಯುಕ್ತ ಎನ್. ಮಂಜುನಾಥ ಪ್ರಸಾದ್ ಗೆ ಆದೇಶ ನೀಡಿದೆ.
ಬೆಂಗಳೂರು ನಗರದಲ್ಲಿ ಸರಿಯಾಗಿ ಯೋಜನೆಗಳಿಲ್ಲದ ಕಾರಣ ಸಾಮಾನ್ಯ ಜನರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ತಿಳಿಸಿದ್ದಾರೆ. ನೀವು ಕನಿಷ್ಠ ಮುಂದಿನ 50 ವರ್ಷಗಳಿಗೆ ಯೋಜನೆ ರೂಪಿಸಬೇಕು.
 ದುರಾದೃಷ್ಟಕ್ಕೆ ಬಿಬಿಎಂಪಿಯ ಯೋಜನೆಗಳನ್ನು ತಯಾರಿಸಿದ ಸಂದರ್ಭದಲ್ಲಿ ಅವು ಆ ಸಮಯದ ಅಗತ್ಯಗಳನ್ನು ಪೂರೈಸಿರಲಿಲ್ಲ. ಯೋಜನೆಗಳು ಜಾರಿಯಾಗುವ ಹೊತ್ತಿಗೆ ನೀವು, ನಾನು ಯಾರೂ ಇರುವುದಿಲ್ಲ ಎಂದು ನ್ಯಾಯಾಧೀಶರು ಅಸಮಾಧಾನ ತೋಡಿಕೊಂಡರು.
ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ್ ಪ್ರಸಾದ್ ಕೋರ್ಟ್ ನಲ್ಲಿರುವಾಗಲೇ ನ್ಯಾಯಮೂರ್ತಿ ಗೌಡ ಈ ರೀತಿ ಛೀಮಾರಿ ಹಾಕಿದರು. ಇದಕ್ಕೆ ಉತ್ತರಿಸಿದ ಆಯುಕ್ತರು, ನಗರದ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸಲು ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ ಎಂದರು.
ಹೆಚ್ ಎಂಟಿ ಸಮೀಪದ ರಸ್ತೆಯನ್ನು ಅಗಲೀಕರಣಗೊಳಿಸುವ ಕುರಿತು ಬಿಬಿಎಂಪಿ ಸಲ್ಲಿಸಿದ ಮನವಿಯನ್ನು ಪರಿಶೀಲಿಸಿದ ನ್ಯಾಯಾಧೀಶರು, ಬಿಡಿಎ ಮತ್ತು ಮೇಕ್ರಿ ಸರ್ಕಲ್ ನಡುವಿನ ರಸ್ತೆ ನಡುವಿನ ಟ್ರಾಫಿಕ್ ಸಮಸ್ಯೆಯನ್ನು ಕಡಿಮೆ ಮಾಡಲು ತೆಗೆದುಕೊಂಡಿರುವ ಕ್ರಮಗಳನ್ನು ತಿಳಿಸುವಂತೆ ಆಯುಕ್ತರಿಗೆ ಸೂಚಿಸಿದರು.
ಟ್ರಾಫಿಕ್ ಸಮಸ್ಯೆಗಳಿಗೆ ಕಾರಣವಾಗುವ ಸ್ಥಳಗಳನ್ನು ಗುರುತಿಸುವುದು ಮಾತ್ರವಲ್ಲದೆ ಬಿಬಿಎಂಪಿ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುವ ಕೇಸುಗಳನ್ನು ಪಟ್ಟಿ ಮಾಡುವಂತೆ ಆದೇಶ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್

ನಂದಿಗ್ರಾಮದಲ್ಲಿ 1.22 ಲಕ್ಷ ಮತ, ಅಸ್ಸಾಂನಲ್ಲಿ BJPಗೆ ಗೆಲುವು; 2 ಕ್ಷೇತ್ರ ಗೆದ್ದ TVK: ಕಾಂಗ್ರೆಸ್, ದೀದಿಗೆ ಮುಖಭಂಗ!

ಉಪಚುನಾವಣೆಯಲ್ಲಿ ಗೆಲುವು, ಜನರೊಂದಿಗೆ NDA ಆಳವಾದ ನಂಟಿನ ಪ್ರತೀಕ: ಪ್ರಧಾನಿ ಮೋದಿ

ಮತಗಳ್ಳತನವೇ ಆಗಿದ್ದರೆ ಕೇರಳ Congress CM, ತಮಿಳುನಾಡು CM ಕೂಡ ಮತಗಳ್ಳರೇ: ಚೇತನ್ ಅಹಿಂಸಾ

'ಅಸಹ್ಯ, ಅತಿರೇಕ.. ನಿಮ್ಮನ್ನು ಈ ರೀತಿ ನೋಡಲು ಇಚ್ಛಿಸುವುದಿಲ್ಲ, BiggBoss ಶೋ ಬಿಟ್ಟು ಹೊರಬನ್ನಿ': Kichcha Sudeepಗೆ ಪತ್ರ