ಬನ್ನೇರುಘಟ್ಟದಲ್ಲಿ ಸುರಿದ ಭಾರೀ ಮಳೆಗೆ ಜಲಾವೃತ್ತಗೊಂಡಿರುವ ರಸ್ತೆಯಲ್ಲಿ ಚಲಿಸುತ್ತಿರುವ ಕಾರುಗಳು 
ರಾಜ್ಯ

ಭಾರೀ ಮಳೆಗೆ ಗೋಡೆ ಕುಸಿತ: 4 ವರ್ಷದ ಬಾಲಕಿ ಗಾಯ

ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗೋಡೆಯೊಂದು ಕುಸಿದು ಬಿದ್ದಿದ್ದು, ಪರಿಣಾಮ ನಾಲ್ಕು ವರ್ಷದ ಬಾಲಕಿಯೊಬ್ಬಳು ಗಾಯಗೊಂಡಿರುವ ಘಟನೆ...

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಗೋಡೆಯೊಂದು ಕುಸಿದು ಬಿದ್ದಿದ್ದು, ಪರಿಣಾಮ ನಾಲ್ಕು ವರ್ಷದ ಬಾಲಕಿಯೊಬ್ಬಳು ಗಾಯಗೊಂಡಿರುವ ಘಟನೆ ವಿಟ್ಟಲ್ ನಗರದ ಇಸ್ರೋ ಲೇಔಟ್ ನಲ್ಲಿ ಶನಿವಾರ ನಡೆದಿದೆ.

ಅನಿತಾ (4) ಗಾಯಗೊಂಡ ಬಾಲಕಿ. ಮಲ್ಲಮ್ಮ ಎಂಬ ಕಟ್ಟಡ ಕೆಲಸಗಾರರ ಮಗಳಾಗಿದ್ದಾಳೆ. ಮಲ್ಲಮ್ಮ ಅವರಿಗೆ ಅನಿತಾ ಸೇರಿ ಮೂವರು ಮಕ್ಕಳಿದ್ದು ಕುಮಾರಸ್ವಾಮಿ ಲೇಔಟ್, 2ನೇ ಹಂತದಲ್ಲಿರುವ ಶೆಡ್ ವೊಂದರಲ್ಲಿ ವಾಸ ಮಾಡುತ್ತಿದ್ದಾರೆ.

ಮಲ್ಲಮ್ಮ ಅವರು ತಾವು ನೆಲೆಸಿರುವ ಶೆಡ್ ಹಿಂಬದಿಯಲ್ಲೇ ನೆಲೆಸಿದ್ದ ತಮ್ಮ ಹಿರಿಯ ಸಹೋದರಿಯ ಬಳಿ ಮಗಳು ಅನಿತಾಳನ್ನು ಬಿಟ್ಟು ಹೋಗಿದ್ದರು. ಶನಿವಾರ ಬಂದ ಭಾರೀ ಮಳೆ ಶೆಟ್ ಸುತ್ತಲೂ ಆವರಿಸಿತ್ತು. ಇದರಂತೆ ಇಬ್ಬರು ಶೆಡ್ ಒಳಗೆ ಸಿಲುಕಿಕೊಂಡಿದ್ದರು. ಮಳೆ ನೀರು ಹೆಚ್ಚಾದ ಕಾರಣ ಪಕ್ಕದಲ್ಲೇ ಇದ್ದ ಗೋಡೆ ಕುಸಿದು ಬಿತ್ತು, ಕೂಡಲೇ ಸ್ಥಳೀಯರು ಅವರನ್ನು ರಕ್ಷಣೆ ಮಾಡಿದ್ದಾರು ಎಂದು ಸ್ಥಳೀಯರು ಹೇಳಿದ್ದಾರೆ.

ಗಾಯಗೊಂಡ ಅನಿತಾಳನ್ನು ಕೂಡಲೇ ಜಯನಗರದಲ್ಲಿರುವ ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಎದೆ ಹಾಗೂ ಹೊಟ್ಟೆ ಭಾಗದಲ್ಲಿ ತರಚಿದ ಗಾಯಗಳಾಗಿವೆ. ತೊಡೆ ಮೂಲೆ ಮುರಿದಿದೆ. ಪ್ರಸ್ತುತ ಬಾಲಕಿಯ ಸ್ಥಿತಿ ಸುಧಾರಿಸಿದೆ ಎಂದು ವೈದ್ಯ ರಮೇಶ್ ಅವರು ಹೇಳಿದ್ದಾರೆ.

ಮಳೆಯಿಂದಾಗಿ ರಸ್ತೆಗಳು ಜಲಾವೃತ್ತಗೊಂಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಅಧಿಕಾರಿಗಳು, ಮಳೆಯಿಂದಾಗಿ ನಗರದ ಹಲವೆಡೆ ಸಾಕಷ್ಟು ಸಮಸ್ಯೆಗಳು ಎದುರಾಗಿದೆ. ಕುಮಾರಸ್ವಾಮಿ ಲೇಔಟ್ ಬಳಿಯಿರುವ ಚಂದ್ರಾ ನಗರ, ರಾಘವೇಂದ್ರ ಲೇಔಟ್, ಸಾರಕ್ಕಿ, ವಿಟ್ಟಲ್ ನಗರ ಮತ್ತು ಇಸ್ರೋ ಲೇಔಟ್, ಜೆಪಿ ನಗರ 3ನೇ ಹಂತ, ಕದಿರೇನಹಳ್ಳಿಯಿಂದ ಹಲವು ದೂರುಗಳು ಬಂದಿವೆ. ದೂರುಗಳನ್ನು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

'sir' ವಿವಾದ ಕೊನೆಗೂ ಅಂತ್ಯ: 'ಸರ್.. ನೀವು ನನ್ನ ಹಿರಿಯರು': ಕಿಚ್ಚಾ ಸುದೀಪ್ ಗೆ ಧನ್ಯವಾದ ಹೇಳಿದ ನಟ ಯಶ್!

ಟಿ20 ವಿಶ್ವಕಪ್: 'ಅಲ್ಲಿ ಬೇಡ ಅಂದ್ರೆ ಇಲ್ಲಿ ಆಡಿ..': ಬಾಂಗ್ಲಾದೇಶಕ್ಕೆ ಹೊಸ ಮೈದಾನಗಳ ಸೂಚಿಸಿದ ICC

SCROLL FOR NEXT