ಎಚ್.ಡಿ ಕುಮಾರಸ್ವಾಮಿ 
ರಾಜ್ಯ

ಬಡಬಾಲಕನ ಚಿಕಿತ್ಸೆಗೆ 26 ಲಕ್ಷ ರೂ ನೆರವು: ಮಾನವೀಯತೆ ಮೆರೆದ ಎಚ್ ಡಿಕೆ

ನಾರಾಯಣ ಹೃದಯಾಲಯದಲ್ಲಿ ನಾಳೆ ನಡೆಲಿರುವ ಶಸ್ತ್ರ ಚಿಕಿತ್ಸೆಗೆ 26 ಲಕ್ಷ ರೂ ನೆರವು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ...

ಬೆಂಗಳೂರು: ಬಳ್ಳಾರಿ ಮೂಲದ ಯಶ್ವಂತ್ ಎಂಬ ಬಾಲಕನಿಗೆ ಬೋನ್ ಮ್ಯಾರೋ ಟ್ರಾನ್ಸ್‌‌ಪ್ಲಾಂಟೇಷನ್ ಚಿಕಿತ್ಸೆ ಆಗಬೇಕಿದೆ. ನಾರಾಯಣ ಹೃದಯಾಲಯದಲ್ಲಿ ನಾಳೆ ನಡೆಲಿರುವ ಶಸ್ತ್ರ ಚಿಕಿತ್ಸೆಗೆ 26 ಲಕ್ಷ ರೂ ನೆರವು ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಎಚ್,ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಳಾರಿ ಜಿಲ್ಲೆಯ ಪರುಶುರಾಮ್ ಮತ್ತು ರೂಪಲೇಖಾ ದಂಪತಿಯ ಪುತ್ರ ಯಶವಂತ ಬೊನ್ ನ್ಯಾರೋ ಟ್ರಾನ್ಸಪ್ಲಾಂಟೇಶನ್ ಕಾಯಿಲೆಯಿಂದ ಬಳಲುತ್ತಿದ್ದ. ಬಡತನದಲ್ಲಿರುವ ದಂಪತಿ ಮಗನ ಚಿಕಿತ್ಸೆಗಾಗಿ ಪರದಾಡುತ್ತಿದ್ದರು. ಈ ಕುರಿತು ಖಾಸಗಿ ಸುದ್ದಿ ವಾಹಿನಿ ಸಹಾಯ ಹಸ್ತ ಚಾಚುವಂತೆ ವರದಿ ಪ್ರಸಾರ ಮಾಡಿತ್ತು. ಸುದ್ದಿ ವಾಹಿನಿಯ ವರದಿಗೆ ನೋಡಿದ ಕುಮಾರಸ್ವಾಮಿ ಬಾಲಕನ ಚಿಕಿತ್ಸೆಗಾಗಿ 26 ಲಕ್ಷ ರೂಪಾಯಿ ಸಹಾಯ ಧನ ನೀಡಿದ್ದಾರೆ.

ರಾಜ್ಯ  ಸರ್ಕಾರ ಬಿಪಿಎಲ್ ಯೋಜನೆ ಅಡಿಯಲ್ಲಿ ಉಚಿತ ಶಸ್ತ್ರ ಚಿಕಿತ್ಸೆ ಬರಿಸುವ ಯೋಜನೆಯನ್ನು ಜಾರಿಗೆ ತರಲಿ ಎಂದು ಆಗ್ರಹಿಸಿರುವ ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ, ಬಡವರಿಗೆ ಸಹಾಯ ಮಾಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮಾಧ್ಯಮದಲ್ಲಿ ನೋಡಿ ಸಾಕಷ್ಟು ಜನ ನನ್ನ ಬಳಿ ಬರ್ತಾರೆ. ಎಲ್ಲರಿಗೂ ನೆರವು ನೀಡುವಷ್ಟು ಆರ್ಥಿಕ ಶಕ್ತಿ ನನ್ನಲ್ಲಿ ಇಲ್ಲ. ಇಂತಹ ಸ್ಥಿತಿಯಲ್ಲಿರುವ ಬಡವರಿಗೆ ನೆರವು ನೀಡಿ ಪಾಪ ಕರ್ಮ ತೊಳೆದುಕೊಳ್ಳಲಿ ಎಂದು ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಏನೇನ್ ದಾಖಲೆ ಇದೆ ಎಲ್ಲಾ ತರಿಸುತ್ತೇನೆ': HDK 'ಸ್ಟಿಂಗ್' ಆರೋಪಕ್ಕೆ CM ಡಿಕೆಶಿ ಶಾಕಿಂಗ್ ರಿಯಾಕ್ಷನ್!

ಹನಿಟ್ರ್ಯಾಪ್ ಭೀತಿಯಲ್ಲಿದ್ದ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಮಾಧ್ಯಮಗಳಿಗೆ ವಿಡಿಯೋ ಪ್ರಸಾರ ಮಾಡದಂತೆ ನಿರ್ಬಂಧ ವಿಧಿಸಿದ ಕೋರ್ಟ್

ಅವಧಿಗೂ ಮುನ್ನವೇ ಕೇಂದ್ರ ಸಚಿವ ಮತ್ತು ರಾಜ್ಯಸಭಾ ಸದಸ್ಯ ಸ್ಥಾನಕ್ಕೆ BJP ನಾಯಕ ಮುರುಗನ್ ರಾಜಿನಾಮೆ: PM ಮೋದಿಗೆ 5 ಪುಟಗಳ ಪತ್ರ!

ಮಾಜಿ ಸಂಸದ ಪ್ರತಾಪ್ ಸಿಂಹಗೆ ಬಂಧನ ಭೀತಿ: ನಿರೀಕ್ಷಣಾ ಜಾಮೀನು ಅರ್ಜಿ ವಜಾ

ದಕ್ಷಿಣ ಕನ್ನಡ ಜಿಲ್ಲೆಗೆ 'ಮಂಗಳೂರು ಜಿಲ್ಲೆ' ಎಂದು ಮರುನಾಮಕರಣದ ಪ್ರಸ್ತಾವನೆ: ಸಾರ್ವಜನಿಕರಿಂದ ಆಕ್ಷೇಪಣೆಗೆ ಆಹ್ವಾನ