ರಾಜ್ಯ

ದಕ್ಷಿಣ ಪದವೀಧರರ ಕ್ಷೇತ್ರದ ಮತ ಎಣಿಕೆಯಲ್ಲಿ 9 ಮತಗಳು ನಾಪತ್ತೆ!

Shilpa D

ಮೈಸೂರು: ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನಪರಿಷತ್ತಿನ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, 9 ಮತಗಳು ನಾಪತ್ತೆಯಾಗಿವೆ.  ಊಟಿ ರಸ್ತೆಯ ಜೆಎಸ್‌ಎಸ್‌ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು ಬೆಳಿಗ್ಗೆ 8 ಗಂಟೆಗೆ ಎಣಿಕೆ ಪ್ರಕ್ರಿಯೆ ಆರಂಭವಾಯಿತು.

ಜೂನ್‌ 9ರಂದು ನಡೆದ ಮತದಾನದಲ್ಲಿ ಮೈಸೂರಿನ ರಾಮಕೃಷ್ಣ ವಿದ್ಯಾಕೇಂದ್ರದ ಮತಗಟ್ಟೆಯಲ್ಲಿ ಒಟ್ಟು 559 ಮತಗಳು ಚಲಾವಣೆಗೊಂಡಿದ್ದವು. ಆದರೆ, ಎಣಿಕೆ ಸಂದರ್ಭದಲ್ಲಿ ಮತ ಪೆಟ್ಟಿಗೆಯಲ್ಲಿ 550 ಮತಗಳು ಸಿಕ್ಕಿದ್ದು, ಉಳಿದ 9 ಮತಗಳ ವ್ಯತ್ಯಾಸ ಕಂಡುಬಂದಿದೆ. ಚುನಾವಣಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು ಮತ ಎಣಿಕೆ ಕೇಂದ್ರದಲ್ಲಿ ಭಾರಿ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಜೂನ್ 9ರಂದು ದಕ್ಷಿಣ ಪದವೀಧರ, ಪಶ್ಚಿಮ ಶಿಕ್ಷಕ, ವಾಯುವ್ಯ ಪದವೀಧರ, ವಾಯುವ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆ ನಡೆದಿತ್ತು

ಬಸವರಾಜ ಹೊರಟ್ಟಿ, ಎಂ.ಪಿ.ನಾಡಗೌಡ, ಮಹಾಂತೇಶ ಕೌಜಲಗಿ, ಅರುಣ ಶಹಾಪುರ, ಕೆ.ಎಸ್‌.ಭಗವಾನ್‌, ವಾಟಾಳ್‌ ನಾಗರಾಜ್ ಸೇರಿದಂತೆ 4 ಕ್ಷೇತ್ರಗಳ ಚುನಾವಣೆಯಲ್ಲಿ 59 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

SCROLL FOR NEXT