ಎಚ್.ಡಿ ಕುಮಾರಸ್ವಾಮಿ ಮತ್ತು ಎಚ್.ಸಿ ಬಾಲಕೃಷ್ಣ 
ರಾಜ್ಯ

ಕೈಕೈ ಮಿಲಾಯಿಸಿದ ಎಚ್ಡಿಕೆ, ಬಾಲಕೃಷ್ಣ ಬೆಂಬಲಿಗರು: ಪೊಲೀಸರಿಂದ ಲಾಠಿ ಚಾರ್ಜ್

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಬೆಂಬಲಿಗರು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿ, ಬಳಿಕ ..

ರಾಮನಗರ: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ಬೆಂಬಲಿಗರು ಕೈ ಕೈ ಮಿಲಾಯಿಸಿಕೊಳ್ಳುವ ಹಂತಕ್ಕೆ ತಲುಪಿ, ಬಳಿಕ ಪೊಲೀಸರು ಲಾಠಿ ಚಾರ್ಜ್ ಮಾಡಿರುವ ಘಟನೆ ರಾಮನಗರದಲ್ಲಿ ನಡೆದಿದೆ.

ಜೆಡಿಎಸ್ ಎಂಟು ಮಂದಿ ಶಾಸಕರ ಅಮಾನತು ನಿರ್ಧಾರ ಕಾರ್ಯಕರ್ತರ ಘರ್ಷಣೆ ಹಲವೆಡೆ ಘರ್ಷಣೆಗೆ ಕಾರಣವಾಗಿದೆ.  ಕುಮಾರಸ್ವಾಮಿ ಬೆಂಬಲಿಗರು ಅಮಾನತುಗೊಂಡ ಎಂಟು ಮಂದಿ ಶಾಸಕರ ಅಣಕು ಶವ ಯಾತ್ರೆ ನಡೆಸುತ್ತಿದ್ದರು.

ಈ ವೇಳೆ ಶಾಸಕ ಬಾಲಕೃಷ್ಣ ಬೆಂಬಲಿಗರು ಮಧ್ಯ ಪ್ರವೇಶಿಸಿ, ಬಾಲಕೃಷ್ಣ ಅವರಿಗೆ ಅನ್ಯಾಯವಾಗಿದೆ. ಅಮಾನತು ಅದೇಶವನ್ನು ಕೂಡಲೇ ಹಿಂಪಡೆಯಬೇಕು. ಬಾಲಕೃಷ್ಣ ಅವರು ಮುಜುಗರ ಉಂಟುಮಾಡಿದ್ದರೆ ಅವರನ್ನು ಒಂದು ಕರೆಸಿ ಮಾತನಾಡಬಹುದಿತ್ತು. ಈಗ ಏಕಾಏಕಿ ಅಮಾನತು ಎಷ್ಟು ಸರಿ ಎಂದು ಪ್ರಶ್ನಿಸಿ ಜೆಡಿಎಸ್ ವರಿಷ್ಠರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಾಲಕೃಷ್ಣ ಪರ ತಾ.ಪ. ಅಧ್ಯಕ್ಷ ಸುರೇಶ್ ಹಾಗೂ ಅವರ ಬೆಂಬಲಿಗರಿಂದ ಪ್ರತಿಭಟನಾಕಾರರನ್ನು ಕೆಣಕುವ ಪ್ರಯತ್ನ ನಡೆಯಿತು ಎಂದು ಕುಮಾರಸ್ವಾಮಿ ಬೆಂಬಲಿಗರೂ ಆರೋಪಿಸಿದ್ದಾರೆ. ಇದರಿಂದಾಗಿ ಇಬ್ಬರು ನಾಯಕರ ನಡುವೆ ಮಾತಿನ ಚಕಮಕಿ ತಾರಕಕ್ಕೇರಿತು. ಆಗ ಪರಿಸ್ಥಿತಿ ಕೈಮೀರುವ ಸಾಧ್ಯತೆ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಚಾರ್ಜ್ ಮಾಡಿ ಗುಂಪನ್ನು ಚದುರಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT