ಶಸ್ತ್ರಚಿಕಿತ್ಸೆಗೊಳಗಾಗಿದ್ದ ರೋಗಿಗಳು ಮತ್ತು ಮಣಿಪಾಲ್ ಆಸ್ಪತ್ರೆಯ ವೈದ್ಯರು 
ರಾಜ್ಯ

ಸಾವಿನಲ್ಲೂ ಸಾರ್ಥಕತೆ ಮೆರೆದ ಶುಶ್ರೂಷಕಿ

ಮಿದುಳು ನಿಷ್ಕ್ರಿಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶುಶ್ರೂಷಕಿಯೊಬ್ಬರು ತಮ್ಮ ಕೊನೆಯ ಕ್ಷಣದಲ್ಲೂ ಐದು ಮಂದಿಗೆ ಜೀವ ಕೊಟ್ಟಿರುವ ಘಟನೆ ನಗರದ...

ಬೆಂಗಳೂರು: ಮಿದುಳು ನಿಷ್ಕ್ರಿಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಶುಶ್ರೂಷಕಿಯೊಬ್ಬರು ತಮ್ಮ ಕೊನೆಯ ಕ್ಷಣದಲ್ಲೂ ಐದು ಮಂದಿಗೆ ಜೀವ ಕೊಟ್ಟಿರುವ ಘಟನೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ನಡೆದಿದೆ.

ಹೃದಯ, ಶ್ವಾಸಕೋಶ ಮತ್ತು ಮಿದುಳು ನಿಷ್ಕ್ರಿಯ ಸಮಸ್ಯೆಯಿಂದ ಬಳುತ್ತಿದ್ದ ಶುಶ್ರೂಷಕಿಯೊಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಮೇ. 2 ರಂದು ಅವರ ಸ್ಥಿತಿ ತೀವ್ರ ಚಿಂತಾಜನಕವಾಗಿದ್ದು, ಬದುಕುಳಿಯಲು ಸಾಧ್ಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಇದರಿಂದಾಗಿ ಶುಶ್ರೂಷಕಿಯ ಕುಟುಂಬಸ್ಥರು ಆಕೆಯ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ. ಹೃದಯ, ಪಿತ್ತಜನಕಾಂಗ ಮತ್ತು ಮುತ್ರಪಿಂಡಗಳನ್ನು ಇದರಂತೆ ಮಣಿಪಾಲ್ ಆಸ್ಪತ್ರೆಗೆ ಅಂಗಾಂಗಳನ್ನು ದಾನ ಮಾಡಿದ್ದಾರೆ. ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.

ಅಂಗಾಂಗ ದಾನ ಕುರಿತಂತೆ ಮಾತನಾಡಿರುವ ಶುಶ್ರೂಷಕಿಯ ಪತಿ, ಅಂಗಾಂಗ ದಾನ ಮಾಡುವುದರಿಂದ ಮತ್ತೊಬ್ಬರಿಗೆ ಜೀವ ಸಿಕ್ಕಂತಾಗುತ್ತದೆ. ಹೀಗಾಗಿ ಈ ನಿರ್ಧಾರವನ್ನು ಕೈಗೊಂಡೆವು. ನನ್ನ ಪತ್ನಿ ಶುಶ್ರೂಷಕಿ. ತನ್ನ ಸಾವಿನ ಕೊನೆಯ ಕ್ಷಣದಲ್ಲೂ ತನ್ನ ಕರ್ತವ್ಯವನ್ನು ನಿಭಾಯಿಸಿದ್ದಾಳೆ. ಸತ್ತರೂ ಆಕೆಯೆ ಎಂದಿಗೂ ಜೀವಂತವಾಗಿರುವಂತಾಗಿದೆ ಎಂದು ಹೇಳಿದ್ದಾರೆ.

ಶುಶ್ರೂಷಕಿಯ ಹೃದಯವನ್ನು ಐಟಿ ಕಂಪನಿ ಕಂಪನಿ ಉದ್ಯೋಗಿಯಾಗಿರುವ 34 ವರ್ಷದ ಚಂದ್ರಶೇಖರ್ ಅವರಿಗೆ ಶಸ್ತ್ರಚಿಕಿತ್ಸೆ ಮೂಲಕ ಜೋಜನೆ ಮಾಡಲಾಗಿದೆ. ಚಂದ್ರಶೇಖರ್ ಅವರು ಕಳೆದ 4 ವರ್ಷದಿಂದ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಹೃದಯ ಕಸಿ ಮಾಡುವ ಅನಿವಾರ್ಯವಿದೆ ಎಂದು ವೈದ್ಯರು ತಿಳಿಸಿದ್ದರು. ಆದರೆ, ವೈದ್ಯರು ಸಲಹೆ ನೀಡಿದ ಕೇವಲ 1 ದಿನದಲ್ಲೇ ನನಗೆ ಹೃದಯ ದೊರಕಿದೆ.

ವೈದ್ಯರು ಕರೆ ಮಾಡಿದ್ದಾಗ ನಾನು ಊಟ ಮಾಡುತ್ತಿದ್ದೆ. ಕೂಡಲೇ ಆಸ್ಪತ್ರೆಗೆ ಬರುವಂತೆ ಸೂಚಿಸಿದರು. ಇಷ್ಟು ಬೇಗ ದಾನಿಗಳು ಸಿಗುತ್ತಾರೆಂದುಕೊಂಡಿರಲಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT