ಡೆಂಗ್ಯು ಜ್ವರ ಹರಡಲು ಕಾರಣವಾಗುವ ಎಳನೀರು ಸಿಪ್ಪೆ, ಬಲಚಿತ್ರದಲ್ಲಿ ಜ್ವರದಿಂದ ನಿನ್ನೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವಿಗೀಡಾದ ನಿವೃತ್ತ ವಕೀಲ ಜನಾರ್ದನ್ 
ರಾಜ್ಯ

ಡೆಂಗ್ಯು ಜ್ವರದಿಂದ ಸರ್ಕಾರಿ ನಿವೃತ್ತ ವಕೀಲ ಜನಾರ್ದನ್ ಸಾವು?

ಸರ್ಕಾರದ ಪರ ಪ್ರಮುಖ ಕೇಸುಗಳಲ್ಲಿ ವಕಾಲತ್ತು ವಹಿಸಿದ್ದ ನಗರದ ನ್ಯಾಯವಾದಿಯೊಬ್ಬರು ನಿನ್ನೆ...

ಬೆಂಗಳೂರು: ಸರ್ಕಾರದ ಪರ ಪ್ರಮುಖ ಕೇಸುಗಳಲ್ಲಿ ವಕಾಲತ್ತು ವಹಿಸಿದ್ದ ನಗರದ ನ್ಯಾಯವಾದಿಯೊಬ್ಬರು ನಿನ್ನೆ ಡೆಂಗ್ಯು ಜ್ವರದಿಂದ ಸಾವನ್ನಪ್ಪಿದ್ದಾರೆ.

ಕಾನೂನು ವಿಭಾಗದ ಮಾಜಿ ಉಪ ನಿರ್ದೇಶಕ ಕೆ.ಜನಾರ್ದನ್ ಕೆಲ ದಿನಗಳ ಹಿಂದೆ ಡೆಂಗ್ಯು ಜ್ವರದ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇಂದಿರಾನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಬ್ಲಡ್ ಪ್ಲಾಟೆಂಟ್ ಭಾರೀ ಪ್ರಮಾಣದಲ್ಲಿ ಕುಸಿದಿತ್ತು. ಬಹು ಅಂಗಾಂಗ ವೈಫಲ್ಯದಿಂದ ನಿನ್ನೆ ನಸುಕಿನ 2.30ರ ವೇಳೆಗೆ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ.

ಇಲ್ಲಿಯವರೆಗೆ ಸಿಕ್ಕಿರುವ ಮಾಹಿತಿ ಪ್ರಕಾರ ಇದು ಈ ವರ್ಷದಲ್ಲಿ ನಗರದ ಮೊದಲ ಡೆಂಗ್ಯು ಸಾವಿನ ಪ್ರಕರಣವಾಗಿರಬಹುದು. ಆದರೆ ಜನಾರ್ದನ್ ಅವರಿಗೆ ಚಿಕಿತ್ಸೆ ನೀಡಿದ ಅಕ್ಸೋನ್ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯ ಡಾ.ಪಿ.ಅಮರ್ ಹೇಳುವ ಪ್ರಕಾರ, ಅಂಗಾಂಗ ವೈಫಲ್ಯಗೊಂಡಿದ್ದ ಜನಾರ್ದನ್ ವೈರಲ್ ಜ್ವರದಿಂದ ಸಾವನ್ನಪ್ಪಿದ್ದಾರೆ. ಕಳೆದ ಜನವರಿಯಲ್ಲಿ ಅವರ ಪತ್ನಿ ವರಲಕ್ಷ್ಮಿ ಕಿಡ್ನಿ ವೈಫಲ್ಯದಿಂದ ಸಾವನ್ನಪ್ಪಿದ್ದರು.

ದೊಡ್ಡ ಕೇಸುಗಳನ್ನು ನಿಭಾಯಿಸಿದ್ದ ಜನಾರ್ದನ್: ವಕೀಲರಾಗಿ ಜನಾರ್ದನ್ ಉತ್ತಮ ಹೆಸರು, ಪ್ರಶಂಸೆ ಗಳಿಸಿದ್ದರು. ಹಲವು ಸೂಕ್ಷ್ಮ ಕೇಸುಗಳನ್ನ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಜನಾರ್ದನ್ ನಿಭಾಯಿಸಿದ್ದರು. 2008ರ ಬೆಂಗಳೂರು ಸರಣಿ ಸ್ಪೋಟ, ಕರ್ನಾಟಕ ಲೋಕಾಯುಕ್ತ ಮತ್ತು ಸ್ವಾನಿ ನಿತ್ಯಾನಂದ ಕೇಸುಗಳನ್ನು ಅವರು ನಿರ್ವಹಿಸಿದ್ದರು. ಕರ್ನಾಟಕ ರಾಜ್ಯ ಪ್ರಾಸಿಕ್ಯೂಟರ್ ಅಧಿಕಾರಿಗಳ ಸಂಘದ ಸ್ಥಾಪಕರಾಗಿದ್ದರು. ಲೋಕಾಯುಕ್ತ ಸುಲಿಗೆ ಕೇಸಿನಲ್ಲಿ ಕಳೆದ ವರ್ಷ ಜುಲೈಯಲ್ಲಿ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡದ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದರು. ಆದರೆ ವೈಯಕ್ತಿಕ ಕಾರಣಗಳಿಂದ ಮೂರು ತಿಂಗಳ ಬಳಿಕ ಅವರು ರಾಜೀನಾಮೆ ನೀಡಿದ್ದರು.

ಮಾಹಿತಿ ಇಲ್ಲ; ಯು.ಟಿ.ಖಾದರ್: ನಗರದಲ್ಲಿ ಡೆಂಗ್ಯು ಜ್ವರದಿಂದ ಸಾವಿಗೀಡಾದ ವರದಿ ತಮ್ಮ ಗಮನಕ್ಕೆ ಬಂದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿಗೆ ತಿಳಿಸಿದ್ದಾರೆ.

'' ರಾಜ್ಯದಲ್ಲಿ ಇದುವರೆಗೆ ಡೆಂಗ್ಯು ಸಾವಿನ ಪ್ರಕರಣ ವರದಿಯಾಗಿಲ್ಲ. ಜನಾರ್ದನ್ ಅವರ ಸಾವಿನ ವರದಿಯನ್ನು ಪರಿಶೀಲಿಸಿ ಏನೆಂದು ಹೇಳುತ್ತೇವೆ. ಡೆಂಗ್ಯು ಹರಡದಂತೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದೇವೆ ಎನ್ನುತ್ತಾರೆ ರಾಷ್ಟ್ರೀಯ ರೋಗ ಹರಡುವಿಕೆ ನಿಯಂತ್ರಣ ಕಾರ್ಯಕ್ರಮದ ಜಂಟಿ ನಿರ್ದೇಶಕ ಬಿ.ಜಿ.ಪ್ರಕಾಶ್ ಕುಮಾರ್.

ಸರ್ಕಾರದ ದಾಖಲೆಗಳ ಪ್ರಕಾರ, ಈ ವರ್ಷ ರಾಜ್ಯದಲ್ಲಿ ಜೂನ್ 13ರವರೆಗೆ 6 ಸಾವಿರದ 390 ಶಂಕಿತ ಡೆಂಗ್ಯು ಪ್ರಕರಣಗಳು ವರದಿಯಾಗಿವೆ. ಜ್ವರದಿಂದ ಬಳಲುತ್ತಿದ್ದ 4 ಸಾವಿರದ 58 ಜನರ ರಕ್ತದ ಮಾದರಿಯನ್ನು ಸಂಗ್ರಹಿಸಲಾಗಿದ್ದು, 965 ಮಂದಿಯಲ್ಲಿ ಡೆಂಗ್ಯು ಜ್ವರ ಬಂದಿರುವುದು ದೃಢಪಟ್ಟಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮತ್ತೆ ಗಡಿಯೊಳಗೆ ನುಗ್ಗಿದ 'ಪಾಕ್ ಡ್ರೋನ್' ಗಳು, ಭಾರತೀಯ ಸೇನಾಪಡೆಯಿಂದ ಗುಂಡಿನ ದಾಳಿ!

'ಕರ್ನಾಟಕದ ಹಿತಕ್ಕಿಂತ, ಹೈಕಮಾಂಡ್ ಹಂಗೇ ಹೆಚ್ಚಾಯಿತೇ? ಜರ್ಮನಿ ಚಾನ್ಸೆಲರ್ ಸ್ವಾಗತಿಸದ CM, DCM, ವಿರುದ್ಧ ಬಿಜೆಪಿ ಕಿಡಿ!

ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ಬಿ- ರಿಪೋರ್ಟ್, ಜ. 22ಕ್ಕೆ ಆದೇಶ ಕಾಯ್ದಿರಿಸಿದ ನ್ಯಾಯಾಲಯ!

ಕುರ್ಚಿ ಕಾಳಗ: ಸಿದ್ದರಾಮಯ್ಯ, ಡಿಕೆಶಿ ಜತೆ ರಾಹಲ್ ಗಾಂಧಿ ಪ್ರತ್ಯೇಕ ಚರ್ಚೆ; ಕುತೂಹಲ ಮೂಡಿಸಿದೆ ಚುಟುಕು ಮಾತುಕತೆ! Video

ಫಿನಾಲೆ ಹಂತಕ್ಕೆ 'ಬಿಗ್‌ಬಾಸ್‌ ಕನ್ನಡ' 12; ಎಲ್ಲೆಲ್ಲೂ ಗಿಲ್ಲಿ ನಟನ ಹಾವಳಿ! ಗೆಲ್ಲುವ ಅದೃಷ್ಟ ಯಾರಿಗಿದೆ?

SCROLL FOR NEXT