ಯುವತಿಯನ್ನು ಅಪಹರಣ ಮಾಡಿದ ರಾಹುಲ್ 
ರಾಜ್ಯ

ಪ್ರವಾಸದ ನೆಪವೊಡ್ಡಿ ಫೇಸ್ ಬುಕ್ ಗೆಳತಿಯ ಕಿಡ್ನಾಪ್ ಮಾಡಿದ ಭೂಪ!

ಫೇಸ್ ಬುಕ್ ನಲ್ಲಿ ಪರಿಚಯಗೊಂಡ ಯುವತಿಯನ್ನು ಪ್ರವಾಸಕ್ಕೆಂದು ಕರೆದುಕೊಂಡು ಆಕೆಯನ್ನು ಅಪಹರಣ ಮಾಡಿದ ಘಟನೆಯೊಂದು ನಗರದಲ್ಲಿ ನಡೆದಿದೆ...

ಬೆಂಗಳೂರು: ಫೇಸ್ ಬುಕ್ ನಲ್ಲಿ ಪರಿಚಯಗೊಂಡ ಯುವತಿಯನ್ನು ಪ್ರವಾಸಕ್ಕೆಂದು ಕರೆದುಕೊಂಡು ಆಕೆಯನ್ನು ಅಪಹರಣ ಮಾಡಿದ ಘಟನೆಯೊಂದು ನಗರದಲ್ಲಿ ನಡೆದಿದೆ.

ದ್ವಿತೀಯ ಪಿಯುಸಿ ಮುಗಿಸಿರುವ ಗಾನ (18) (ಹೆಸರು ಬದಲಿಸಲಾಗಿದೆ) ಎಂಬ ಯುವತಿ ಫೇಸ್ ಬುಕ್ ನಲ್ಲಿ ಪರಿಚಯಗೊಂಡಿದ್ದ ರಾಹುಲ್(21) ಎಂಬ ವ್ಯಕ್ತಿಯನ್ನು ಗಾಢವಾಗಿ ನಂಬಿದ್ದಾಳೆ. ಇದರಂತೆ ಊಟಿಗೆ ಪ್ರವಾಸ ಹೋಗುವುದಾಗಿ ಯುವತಿಗೆ ರಾಹುಲ್ ತಿಳಿಸಿದ್ದಾನೆ.

ರಾಹುಲ್ ಮಾತನ್ನು ನಂಬಿದ್ದ ಗಾನ ಆತನೊಂದಿಗೆ ಪ್ರವಾಸಕ್ಕೆಂದು ಹೋಗಿದ್ದಾಳೆ. ಆದರೆ, ಯುವತಿಯನ್ನು ಕರೆದೊಯ್ದ ರಾಹುಲ್ ರೂಮೊಂದಕ್ಕೆ ಕರೆದುಕೊಂಡು ಹೋಗಿ ಕೂಡಿ ಹಾಕಿದ್ದಾನೆ. ಅಲ್ಲದೆ, ಅಕೆಯ ಬಳಿಯಿದ್ದ ಹಣವನ್ನು ಕಿತ್ತುಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾರೆ.

ಜೂ.14 ರಂದು ರಾಹುಲ್ ಯುವತಿಯನ್ನು ಊಟಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಕರೆಸಿಕೊಂಡಿದ್ದಾನೆ,  ಮಗಳು ಪ್ರವಾಸಕ್ಕೆ ಹೋಗಿ ದಿನಗಳು ಕಳೆದರೂ ಆಕೆ ಸಂಪರ್ಕ ಸಾಧ್ಯವಾಗಿಲ್ಲ ಎಂದು ಪೋಷಕರು ದೂರು ದಾಖಲಿಸಿದ್ದರು. ಇದರಂತೆ ತನಿಖೆ ಆರಂಭಿಸಿದಾಗ ಆಕೆಯ ಫೇಸ್ ಬುಕ್ ಪೋಸ್ಟ್ ಗಳನ್ನು ಗಮನಿಸಲಾಯಿತು. ರಾಹುಲ್ ಮೇಲೆ ಹಲವು ಅನುಮಾನಗಳು ಬರಲು ಆರಂಭಿಸಿತು. ರಾಹುಲ್ ಮೊಬೈಲ್ ನೆಟ್ ವರ್ಕ್ ನ್ನು ಹಿಂಬಾಲಿಸುವ ಮೂಲಕ ಆತನನ್ನು ರಾಮನಗರದಲ್ಲಿ ಬಂಧಿಸಲಾಯಿತು ಪೊಲೀಸರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಿಯಾದ್ ವಿಮಾನ ನಿಲ್ದಾಣದ ಮೇಲೆ ದಾಳಿ: ರಿಯಾದ್ ಗೆ ತೆರಳಬೇಕಿದ್ದ ಭಾರತೀಯ ವಿಮಾನಗಳು ರದ್ದು

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!