ರಾಜ್ಯ

ಬೆಂಗಳೂರಿನ ಕೆಲವು ರೈಲ್ವೆ ನಿಲ್ದಾಣಗಳಲ್ಲಿ ಶಿಶು ಆಹಾರ: ರೈಲ್ವೆ ಇಲಾಖೆ

Sumana Upadhyaya

ಬೆಂಗಳೂರು: ಬೆಂಗಳೂರು ರೈಲ್ವೆ ವಿಭಾಗದ ಅಡಿಯಲ್ಲಿ ಬರುವ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಮಕ್ಕಳ ಆಹಾರ ಶನಿವಾರದಿಂದ ದೊರಕಲಿದೆ.

ಮಕ್ಕಳನ್ನು ಮತ್ತು ಶಿಶುಗಳನ್ನು ಕರೆದುಕೊಂಡು ರೈಲುಗಳಲ್ಲಿ ಪ್ರಯಾಣಿಸುವ ಪೋಷಕರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈಲ್ವೆ ಇಲಾಖೆ ಈ ಅನುಕೂಲ ಒದಗಿಸಿಕೊಟ್ಟಿದ್ದು, ಬಿಸಿ ಹಾಲು, ನೀರು, ಮಕ್ಕಳಿಗೆ ಬೇಕಾಗುವ ಇತರ ಆಹಾರ ಪದಾರ್ಥಗಳು ದೊರಕಲಿವೆ.

ಬೆಂಗಳೂರು ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಸಿಟಿ ರೈಲ್ವೆ ಸ್ಟೇಷನ್), ಯಶವಂತಪುರ, ಕಂಟೋನ್ಮೆಂಟ್, ಕೆ.ಆರ್.ಪುರಂ, ವೈಟಿಫೀಲ್ಡ್, ಬೈಯಪ್ಪನಹಳ್ಳಿ, ಮಂಡ್ಯ, ಹೊಸೂರು, ಬಂಗಾರಪೇಟೆ ಮತ್ತು ರಾಮನಗರ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಈ ಸೌಲಭ್ಯ ದೊರಕಲಿದೆ ಎಂದು ಹಿರಿಯ ವಲಯ ವಾಣಿಜ್ಯ ವ್ಯವಸ್ಥಾಪಕ ಎನ್.ಆರ್.ಶ್ರೀಧರಮೂರ್ತಿ ತಿಳಿಸಿದ್ದಾರೆ.

ಪಾಂಟ್ರಿ ಕಾರಿನಲ್ಲಿ ಬಿಸಿ ನೀರು ಒದಗಿಸುವಂತೆ ಕೂಡ ನಾವು ಸೂಚನೆ ನೀಡಿದ್ದೇವೆ. ಇದರಿಂದ ಸುಲಭವಾಗಿ ಶಿಶು ಆಹಾರ ತಯಾರಿಸಹಬಹುದು. ಸೆರ್ಲೆಕ್, ನೆಸ್ಲೆ, ಕಾಂಪ್ಲೇನ್ ಮೊದಲಾದ ಆಹಾರ ಪದಾರ್ಥಗಳು ಸಿಗಲಿವೆ.

SCROLL FOR NEXT