ರಾಜ್ಯ

ಪೊಲೀಸ್ ಅಧಿಕಾರಿಗಳ ಜೊತೆ ಮಹದೇವಪ್ಪ ಪುತ್ರ ಸುನೀಲ್ ಬೋಸ್ ಮೋಜು ಮಸ್ತಿ

Shilpa D

ಮೈಸೂರು:  ಲೋಕೊಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಪುತ್ರ ಸುನೀಲ್ ಬೋಸ್​ನನ್ನು ಪೊಲೀಸ್ ಅಧಿಕಾರಿಗಳೇ ಹೆಗಲ ಮೇಲೆ ಹೊತ್ತು ಮೆರೆಸಿರುವುದು ಬೆಳಕಿಗೆ ಬಂದಿದೆ.

ಮರಳು ಮಾಫಿಯಾದ ಲಂಚ ಸ್ವೀಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಬೇಕಾಗಿರುವ ಸುನೀಲ್ ಅವರನ್ನು, ಅಕ್ರಮಗಳ ಬಗ್ಗೆ ತನಿಖೆ ನಡೆಸಬೇಕಾದ ಪೊಲೀಸರೇ ತಮ್ಮ ಹುದ್ದೆಯ ಘನತೆಯನ್ನು ಮರೆತು ಹೆಗಲ ಮೇಲೆ ಹೊತ್ತು ಫೋಟೋಗೆ ಫೋಜ್ ನೀಡಿರುವ ನಾಚಿಕೆಗೇಡಿನ ಘಟನೆ ಈಗ ಟೀಕೆಗೆ ಗುರಿಯಾಗಿದೆ.

ಪ್ರಭಾವಿ ರಾಜಕಾರಣಿಯ ಪುತ್ರ ಎನ್ನುವ ಕಾರಣಕ್ಕೆ ಗುಂಡಿನ ಪಾರ್ಟಿಯೊಂದರಲ್ಲಿ ಕುಣಿದು ಕುಪ್ಪಳಿಸಿರುವ ಸುನೀಲ್​ಬೋಸ್, ಬನ್ನೂರಿನಲ್ಲಿ ಸಬ್ ಇನ್ಸ್​ಪೆಕ್ಟರ್ ಅಗಿದ್ದು ಈಗ ಬಡ್ತಿ ಮೇಲೆ ಚಾಮರಾಜನಗರದಲ್ಲಿ ಎಸಿಬಿ ಇನ್ಸ್​ಪೆಕ್ಟರ್​ ಅಗಿರುವ ರಾಘವೇಂದ್ರಗೌಡ ಹಾಗೂ ತಿ.ನರಸೀಪುರದಲ್ಲಿ ಸಬ್ ಇನ್ಸ್​ಪೆಕ್ಟರ್ ಆಗಿರುವ ಶಿವಣ್ಣ ಅವರ ಹೆಗಲ ಮೇಲೆ ಕುಳಿತಿದ್ದು, ಕೈಯಲ್ಲಿ ಸಿಗರೇಟ್ ಹಿಡಿದು ಪೋಜ್ ನೀಡಿದ್ದಾರೆ.

ನರಸೀಪುರ ಭಾಗದಲ್ಲಿ ಆಗಾದ ಪ್ರಮಾಣದ ಮರಳು ಮಾಫಿಯಾ ಸುನೀಲ್ ಬೋಸ್ ಕೃಪಾ ಕಟಾಕ್ಷ ಇದೆ ಎನ್ನುವ ಆರೋಪ ಹಿಂದಿನಿಂದಲೂ ಕೇಳಿ ಬಂದಿತ್ತು. ಮೈಸೂರು ಭಾಗದಲ್ಲಿ ನಡೆಯುತ್ತಿರುವ ಮರಳು ದಂಧೆಗೆ ಡಾ. ಎಚ್.ಸಿ. ಮಹದೇವಪ್ಪ ಅವರ ಮಗ ಸುನೀಲ್ ಬೋಸ್ ನಿಶ್ಚಿತವಾಗಲೂ ಬಾಸ್ ಅಂತಾರೆ ಮೈಸೂರು ಭಾಗದ ಜನ.

SCROLL FOR NEXT