ರಾಜ್ಯ

ಟ್ಯಾಬ್ ಬಳಕೆಗೆ ಪೋಷಕರ ವಿರೋಧ: ನಿರ್ಧಾರದಿಂದ ಹಿಂದೆ ಸರಿದ ಶಾಲೆ

Manjula VN

ಬೆಂಗಳೂರು: ಶಾಲೆಗೆ ಹೋಗುವ ಮಕ್ಕಳ ಚೀಲದ ಹೊರೆಯನ್ನು ಕಡಿಮೆ ಮಾಡುವ ಸಲುವಾಗಿ ಪುಸ್ತಕ ಬದಲು ಟ್ಯಾಬ್ ಬಳಕೆ ಮಾಡುವ ಶಾಲೆ ನಿರ್ಧಾರಕ್ಕೆ ಮಕ್ಕಳ ಪೋಷಕರು ವಿರೋಧ ವ್ಯಕ್ತಪಡಿಸಿದ್ದು, ಇದೀಗ ತನ್ನ ನಿರ್ಧಾರಿಂದ ಶಾಲೆ ಹಿಂದೆ ಸರಿದಿದೆ.

ಬನ್ನೇರುಘಟ್ಟ ರಸ್ತೆಯಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಶಾಲೆ ಶಾಲಾ ಮಕ್ಕಳ ಪೋಷಕರನ್ನು ಸಂಪರ್ಕಿಸದೆಯೇ 3 ರಿಂದ 6ನೇ ತರಗತಿ ಮಕ್ಕಳಿಗೆ ಪುಸ್ತಕದ ಬದಲು ಟ್ಯಾಬ್ ಬಳಕೆ ಮಾಡುವ ನಿರ್ಧಾರವನ್ನು ಕೈಗೊಂಡಿತ್ತು. ಶಾಲೆಯ ನಿರ್ಧಾರಕ್ಕೆ ಮಕ್ಕಳ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೆ, ನೂರಕ್ಕೂ ಹೆಚ್ಚು ಪೋಷಕರು ನಿನ್ನೆ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದರು.

ಪೋಷಕರೊಂದಿಗೆ ಸಭೆ ನಡೆಸಿ ಮಾತುಕತೆ ನಡೆಸದೆಯೇ ಶಾಲೆ ನಿರ್ಧಾರ ಕೈಗೊಂಡಿತ್ತು. ಪ್ರತೀ ಟ್ಯಾಬ್ ರು.9000 ಎಂದು ಹೇಳಲಾಗಿತ್ತು. ಪುಸ್ತಕದ ಬದಲಿಗೆ ಮಕ್ಕಳಿಗೆ ಟ್ಯಾಬ್ ಬಳಕೆ ನೀಡಿದರೆ ಮಕ್ಕಳ ಕಲಿಕೆಯ ಮೇಲೆ ಅದು ಪರಿಣಾಮ ಬೀರಲಿದೆ. ನಿಯಮ ಜಾರಿಗೆ ತಂದ ವೇಳೆ ಟ್ಯಾಬ್ ಬಳಕೆ ಕಡ್ಡಾಯವೆಂದು ತಿಳಿಸಿತ್ತು. ಇದೀಗ ನಮ್ಮ ಆಯ್ಕೆಗೆ ಬಿಟ್ಟದ್ದು ಎಂದು ಹೇಳುತ್ತಿದೆ ಎಂದು ಪೋಷಕ ಸತೀಶ್ ಹೆಚ್.ಪಿ ಅವರು ಹೇಳಿಕೊಂಡಿದ್ದಾರೆ.

ಇನ್ನು ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಶಾಲಾ ಆಡಳಿತ ಮಂಡಳಿಯವರು, ಸಿಬಿಎಸ್ ಸಿ ಮಾರ್ಗಸೂಚಿ ಪ್ರಕಾರ ನಾವು ನಿರ್ಧಾರ ಕೈಗೊಂಡಿದ್ದೇವೆ. ಶಾಲಾ ಮಕ್ಕಳ ಚೀಲಗಳ ಭಾರವನ್ನು ಇಳಿಸುವ ಸಲುವಾಗಿ ಪರ್ಯಾಯ ಮಾರ್ಗ ಹುಡುವಂತೆ ಶಿಕ್ಷಣ ಇಲಾಖೆ ಸೂಚಿಸಿತ್ತು. ಇದರಂತೆ ನಾವು ನಿರ್ಧಾರ ಕೈಗೊಂಡಿದ್ದೆವು ಎಂದು ಹೇಳಿಕೊಂಡಿದೆ.

SCROLL FOR NEXT