ಸಾಂದರ್ಭಿಕ ಚಿತ್ರ 
ರಾಜ್ಯ

ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿರುವ ಕೆಎಎಸ್ ವಿಳಂಬ ನೀತಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿಳಂಬ ನೀತಿ ಇದೀಗ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ...

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವಿಳಂಬ ನೀತಿ ಇದೀಗ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರುತ್ತಿದೆ.

ಖಾಸಗಿ ಕಾಲೇಜುಗಳ ಸೀಟು ಹಂಚಿಕೆ ವಿಳಂಬವಾಗುತ್ತಿರುವುದರಿಂದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇತ್ತೀಚೆಗಷ್ಟೇ ತನ್ನ ವೇಳಾಪಟ್ಟಿಯನ್ನು ಬದಲು ಮಾಡಿತ್ತು. ಇದೀಗ ಬದಲಾದ ಈ ವೇಳಾ ಪಟ್ಟಿ ಉತ್ತಮ ಅಂಕ ಪಡೆದು ಇಂಜಿನಿಯರಿಂಗ್ ಸೀಟುಗಳ ಆಕಾಂಕ್ಷೆಯಲ್ಲಿರುವ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಲು ಆರಂಭಿಸಿದೆ.

ಕರ್ನಾಟಕ ವೈದ್ಯಕೀಯ ಇಂಜಿನಿಯರಿಂಗ್ ಮತ್ತು ದಂತ ವೈದ್ಯಕೀಯ ಕಾಲೇಜುಗಳ ಕೌನ್ಸಿಲಿಂಗ್ ಇಂದಿನಿಂದ ಆರಂಭವಾಗಿದೆ. ಇದರಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಮುಂದಿನ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಮುಂದೂಡಿದೆ. ಇದೀಗ ಈ ವಿಳಂಬ ನೀತಿ ಲಕ್ಷಾಂತರ ಇಂಜಿನಿಯರಿಂಗ್ ಆಕಾಂಕ್ಷೆಯುಳ್ಳ ವಿದ್ಯಾರ್ಥಿಗಳು ಗೊಂದಲದಲ್ಲಿ ಸಿಕ್ಕಿಹಾಕಿಕೊಳ್ಳುವಂತೆ ಮಾಡಿದೆ.

ಕಾಮೆಡ್ ಕೆ ಮೀಸಲಾತಿಯಿಂದ ವಿದ್ಯಾರ್ಥಿಗಳು ಸೀಟನ್ನು ಆಯ್ಕೆ ಮಾಡಿಕೊಂಡರೆ, ಸೀಟಿಗೆ ಸಿಇಟಿಗೆ ಹೋಲಿಸಿದರೆ ಮೂರರಷ್ಟು ಹೆಚ್ಚು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಇಂದು ನಡೆಯಲಿರುವ ಕೌನ್ಸಿಲಿಂಗ್ ನಲ್ಲಿ 3,000 ರ್ಯಾಂಕ್ ವರೆಗೂ ಕಾಮೆಡ್ ಕೆ ಮೀಸಲಾತಿ ಅಡಿಯಲ್ಲಿ ಸೀಟು ಹಂಚಿಕೆ ಮಾಡಲಾಗುತ್ತಿದೆ. ಕಾಮೆಡ್ ಕೆ ಅಡಿಯಲ್ಲಿ ರಾಜ್ಯದ 121 ಇಂಜಿನಿಯರಿಂಗ್ ಕಾಲೇಜುಗಳಿದ್ದು, 16,000 ಇಂಜಿನಿಯರಿಂಗ್ ಸೀಟುಗಳಿವೆ.

ಕಾಮೆಡ್ ಕೆ ಹಾಗೂ ಸಿಇಟಿಯಲ್ಲಿ ನಾನು ಉತ್ತಮ ರ್ಯಾಂಕ್ ಪಡೆದಿದ್ದೇನೆ. ಸಿಇಟಿಯಲ್ಲಿ ಉತ್ತಮ ರ್ಯಾಂಕ್ ಪಡೆದ ಕಾರಣಕ್ಕೆ ಕಾಮೆಡ್ ಕೆ ಕೌನ್ಸಿಲಿಂಗ್ ನಲ್ಲಿ ಲಭ್ಯವಾಗಿರುವ ಅವಕಾಶವನ್ನು ಬಿಡುವುದಿಲ್ಲ ಎಂದು ಇಂಜಿನಿಯರಿಂಗ್ ಸೀಟಿನ ಆಕಾಂಕ್ಷೆಯಲ್ಲಿರುವ ವಿದ್ಯಾರ್ಥಿಯೊಬ್ಬ ಹೇಳಿಕೊಂಡಿದ್ದಾನೆ.

ಸರ್ಕಾರ ಇಂಜಿನಿಯರಿಂಗ್ ಕೋರ್ಸ್ ಗಳ ಕುರಿತಂತಿರುವ ವೇಳಾಪಟ್ಟಿಯನ್ನು ಬದಲಿಸಬಾರದು. ಸರ್ಕಾರದ ನಿರ್ಧಾರದಿಂದಾಗಿ ನಾವು ಕಾಮೆಡ್ ಕೆ ಕೌನ್ಸಿಲಿಂಗ್ ಗೆ ಹೋಗದಂತಾಗಿದೆ ಎಂದು ವಿದ್ಯಾರ್ಥಿ ಹೇಳಿಕೊಂಡಿದ್ದಾನೆ.

ಇನ್ನು ಕಾಮೆಡ್ ಕೆ ಆಡಳಿತ ಮಂಡಳಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದು, ಯಾವುದೇ ಕಾರಣಕ್ಕೂ ಕಾಮೆಡ್ ಕೆ ಕೌನ್ಸಿಲಿಂಗ್ ನ್ನು ಮುಂದೂಡುವುದಿಲ್ಲ ಎಂದು ಹೇಳಿದೆ. ಕಾಮೆಡ್ ಕೆ ಸೀಟುಗಳನ್ನು ಆಯ್ಕೆಯಾಗಿ ತೆಗೆದುಕೊಂಡವರಿಗೆ ಮೊದಲ ಹಂತದ ಕೌನ್ಸಿಲಿಂಗ್ ಆದ ನಂತರ ಹಣವನ್ನು ಮರುಪಾವತಿ ಮಾಡಲಾಗುತ್ತದೆ. ಆದರೆ, ಪ್ರಕ್ರಿಯಾ ಶುಲ್ಕವಾಗಿ ಮೊದಲು ರು. 5,000 ಹಣವನ್ನು ಪಾವತಿ ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT