ರಾಜ್ಯ

ಈ ಬಾರಿ ಅಮೆರಿಕಾಗೆ 1,200 ಟನ್ ಮಾವಿನ ಹಣ್ಣು ರಪ್ತು

Shilpa D

ಬೆಂಗಳೂರು: ಈ ವರ್ಷ ಪ್ರಥಮ ಬಾರಿಗೆ ಕರ್ನಾಟಕ ಅಮೆರಿಕಾಗೆ ದಾಖಲೆಯ ಪ್ರಮಾಣದ ಮಾವಿನ ಹಣ್ಣು ರಪ್ತು ಮಾಡಲಾಗುತ್ತಿದೆ.

ಈ ಬಾರಿ ರಾಜ್ಯದಿಂದ ಸುಮಾರು 1,200 ಟನ್ ಮಾವಿನಹಣ್ಣನ್ನು ಅಮೆರಿಕಾಗೆ ರಪ್ತು ಮಾಡಲಾಗುತ್ತದೆ ಎಂದು ಕರ್ನಾಟಕ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಮಲಾಕ್ಷಿ ರಾಜಣ್ಣ ತಿಳಿಸಿದ್ದಾರೆ.

ಮೊದಲ ಹಂತವಾಗಿ ಶುಕ್ರವಾರ ಬೆಳಗ್ಗೆ 80- ಟನ್ ಮಾವಿನ ಹಣ್ಣನ್ನು  ವಿಮಾನದಲ್ಲಿ ಕಳುಹಿಸಲಾಗಿದೆ. ವಾಷಿಂಗ್ಟನ್ ನ ಒಂದು ಟೀಂ ನಮ್ಮ ಮಾವಿನಹಣ್ಣು ಸಂಸ್ಕರಣೆ ಕೇಂದ್ರಕ್ಕೆ ಭೇಟಿ ನೀಡಿತ್ತು. ಆ ತಂಡದ ಅನುಮೋದನೆ ನಂತರ ಅಮೆರಿಕಾಗೆ ಆಲ್ಫಾನ್ಸೋ, ಕೇಸರ್ ಸೇರಿದಂತೆ ಹಲವು ತಳಿಯ ಹಣ್ಣುಗಳನ್ನು ರಪ್ತು ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

ಈ ವರ್ಷ ಸುಮಾರು 5 ಸಾವಿರ ಟನ್ ಮಾವಿನ ಹಣ್ಣುಗಳನ್ನು ಗಲ್ಫ್ ರಾಷ್ಟ್ರ, ಸಿಂಗಾಪುರ್ ಮತ್ತು ಲಂಡನ್ ಹಾಗೂ ಯುರೋಪಿಯನ್ ದೇಶಗಳಿಗೆ ರಪ್ತು ಮಾಡಲಾಗಿದೆ ಎಂದು ಹೇಳಿದ್ದಾರೆ.

ಲಾಲ್ ಬಾಗ್ ನಲ್ಲಿ ಆಯೋಜಿಸಿದ್ದ ಮಾವುಮೇಳ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು ಕಳೆದ ವರ್ಷ 850 ಟನ್ ಮಾವಿನ ಹಣ್ಣು ಮಾರಾಟ ಮಾಡಲಾಗಿತ್ತು, ಈ ವರ್ಷ 1, 050 ಟನ್ ಮಾವಿನ ಹಣ್ಣುಗಳ ಮಾರಾಟವಾಗಿದೆ.

ಕಳೆದ ವರ್ಷ ನಡೆದ ಮಾವು ಮೇಳದಿಂದ 4 ಕೋಟಿ ರು. ವಹಿವಾಟು ನಡೆದಿತ್ತು, ಆದರೆ ಈ ವರ್ಷ 6.3 ಕೋಟಿ. ರು ವಹಿವಾಟು ನಡೆದಿದೆ, ಈ ಬಾರಿ, ದೆಹಲಿ ಮತ್ತು ಗೋವಾಗಳಲ್ಲೂ ಮಾವು ಮೇಳ ಆಯೋಜಸಿಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಈ ವರ್ಷ ಆನ್ ಲೈನ್ ನಲ್ಲೂ ಮಾವು ಮರಾಟವನ್ನು ಆಯೋಜಿಸಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 1 ಸಾವಿರ ಕೆಜಿ ಮಾವಿನಹಣ್ಣು ಮಾರಾಟವಾಗಿದೆ ಎಂಗದು ಅವರು ಹೇಳಿದರು.


SCROLL FOR NEXT