ಸಾಂದರ್ಭಿಕ ಚಿತ್ರ 
ರಾಜ್ಯ

ಉದ್ಯಮಿ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವ ಕಿಟ್ಟಿ ಪಾರ್ಟಿ ಗ್ಯಾಂಗ್!

ದಾವಣಗೆರೆಯ ಹೊನ್ನಳ್ಳಿ ತಾಲೂಕಿನ ರೇಷ್ಮಾ ಬಾನು ಎಂಬಾಕೆಗೆ ತನ್ನ ಕೋಳಿ ಫಾರ್ಮ್ ಉದ್ಯಮಕ್ಕಾಗಿ ಧನ ಸಹಾಯ ಬೇಕಿತ್ತು. ಇದಕ್ಕಾಗಿ ಆಕೆ ಬ್ಯಾಂಕ್‌ನ ಮೊರೆ...

ಬೆಂಗಳೂರು: ದಾವಣಗೆರೆಯ ಹೊನ್ನಳ್ಳಿ ತಾಲೂಕಿನ ರೇಷ್ಮಾ ಬಾನು ಎಂಬಾಕೆಗೆ ತನ್ನ ಕೋಳಿ ಫಾರ್ಮ್ ಉದ್ಯಮಕ್ಕಾಗಿ ಧನ ಸಹಾಯ ಬೇಕಿತ್ತು. ಇದಕ್ಕಾಗಿ ಆಕೆ ಬ್ಯಾಂಕ್‌ನ ಮೊರೆ ಹೋಗುವ ಬದಲು  WOW ನ ಮೊರೆಹೋದಳು. WOW (Women orbiting Women) ಎಂಬುದು ಕಿಟ್ಟಿ ಪಾರ್ಟಿ ಗ್ಯಾಂಗ್. ಈ ಗ್ಯಾಂಗ್‌ನಲ್ಲಿರುವ ಬಹುತೇಕ ಮಹಿಳೆಯರು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಹೊಂದಿದ್ದಾರೆ. 17 ಮಂದಿಯಿರುವ ಈ  ಕಿಟ್ಟಿ ಪಾರ್ಟಿ ಗ್ಯಾಂಗ್ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡಿ ವ್ಯವಹಾರಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸಹಾಯಮಾಡುತ್ತದೆ. ಪ್ರತೀ ತಿಂಗಳಿನ ಎರಡನೇ ಬುಧವಾರ ಈ ಕಿಟ್ಟಿ ಪಾರ್ಟಿ ಸೇರಲಾಗುತ್ತಿದೆ. ಹೀಗೊಂದು ದಿನ ನಾನು ಯಾಕೆ ಇನ್ನೊಬ್ಬರಿಗೆ ಸಹಾಯ ಮಾಡುವ ಕಾರ್ಯಗಳನ್ನು ಕೈಗೊಳ್ಳಬಾರದು ಎಂಬ ಯೋಚನೆ ಬಂದಿದ್ದೇ ತಡ ಸದಸ್ಯರೆಲ್ಲರೂ ಕಾರ್ಯಪ್ರವೃತ್ತರಾದರು. ಹಾಗೆ ಈ ಕಿಟ್ಟಿ ಪಾರ್ಟಿಯಲ್ಲಿ ಸಂಗ್ರಹವಾದ ಹಣವನ್ನು ವ್ಯವಸಾಯ ಮಾಡುವ ಮಹಿಳೆಯರಿಗೆ ಸಹಾಯ ಮಾಡುವ ಕಾರ್ಯವನ್ನು ಕೈಗೊಂಡಿತು. ಸಣ್ಣ ಪುಟ್ಟ ಕೈಗಾರಿಕೋದ್ಯಮಗಳಲ್ಲಿ ತೊಡಗಿಸಿಕೊಂಡಿರುವ ಮಹಿಳೆಯರಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಈ ಮಹಿಳೆಯರ ಗುಂಪು ಎಲ್ಲರಿಗೂ ಮಾದರಿಯಾಗಿದೆ.
ಪ್ರೇಮಾ ಟಂಡನ್, ಅನುರಾಧಾ ಸರಿನ್ (ಬ್ಯಾಂಕರ್),  ಅಂತ್ರಾ ಭಾರ್ಗವ (ಸಿಎ), ಜೀಜಾ ಹರೀಶ್‌ಸಿಂಗ್(ನಿವೃತ್ತ ಐಪಿಎಸ್), ಪ್ರಿಯಾಂಕ ಪೈ (ನೃತ್ಯಗಾರ್ತಿ) ಸೇರಿದಂತೆ ಒಟ್ಟು 17 ಮಂದಿ ಈ ಕಿಟ್ಟಿ ಪಾರ್ಟಿ ಗ್ಯಾಂಗ್ ನಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ