ರಾಜ್ಯ

ಮೈಸೂರಿನಲ್ಲಿ ಉದ್ವಿಗ್ನ ವಾತಾವರಣ: ಕಲ್ಲು ತೂರಾಟ, 3 ಬಸ್ ಜಖಂ

Manjula VN

ಮೈಸೂರು: ಶ್ರೀ ರಾಮಸೇನೆ ಕಾರ್ಯಕರ್ತ ರಾಜು ಹತ್ಯೆ ಖಂಡಿಸಿ ನಗರದಲ್ಲಿ ಇದೀಗ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನಾಕಾರರ ಆಕ್ರೋಶಕ್ಕೆ 3 ಬಸ್ ಗಳು ಜಖಂಗೊಂಡಿರುವುದಾಗಿ ಸೋಮವಾರ ತಿಳಿದುಬಂದಿದೆ.

ನಿನ್ನೆ ಶ್ರೀ ರಾಮಸೇನೆ ಕಾರ್ಯಕರ್ತ ರಾಜು ಎಂಬುವವರನ್ನು ದುಷ್ಕರ್ಮಿಗಳ ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿತ್ತು. ಈ ಹತ್ಯೆಯನ್ನು ಬಿಜೆಪಿ ಖಂಡಿಸಿತ್ತು. ಅಲ್ಲದೆ ಬಂದ್ ಗೆ ಕರೆ ನೀಡಿತ್ತು. ಇದೀಗ ಮೈಸೂರಿನಾದ್ಯಂತ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಬಸ್ ಗಳ ಮೇಲೆ ಕಲ್ಲೂ ತೂರಾಟ ನಡೆದಿದೆ. ಇದರ ಪರಿಣಾಮ 3 ಬಸ್ ಗಳು ಜಖಂ ಗೊಂಡಿವೆ ಎಂದು ಹೇಳಲಾಗುತ್ತಿದೆ.

ಬಂದ್ ಹಿನ್ನೆಲೆಯಲ್ಲಿ ಪೊಲೀಸರು ನಗರದಾದ್ಯಂತ ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆಯನ್ನು ಜಾರಿ ಮಾಡಿದ್ದರು. ಇದರಂತೆ ಪ್ರತಿಭಟನೆ, ಸಭೆ, ಮೆರವಣಿಗೆ ಹಾಗೂ ಧರಣಿಯನ್ನು ನಡೆಸುವಂತಿಲ್ಲ ಎಂದು ಹೇಳಲಾಗಿತ್ತು. ಆದೇಶದ ನಡುವೆಯೂ ಕಾರ್ಯಕರ್ತರು ಎಲ್ಲಡೆ ಪ್ರತಿಭಟನೆ ನಡೆಸುತ್ತಿದೆ. ಅಲ್ಲದೆ ಬ್ಯಾರಿಕೇಡ್ ಗಳನ್ನು ತಳ್ಳಿ ರಾಜು ಶವಾಗಾರದತ್ತ ಕಾರ್ಯಕರ್ತರು ನುಗ್ಗಿದ್ದಾರೆಂದು ತಿಳಿದುಬಂದಿದೆ. ಇದರಂತೆ ಮೈಸೂರಿನಾದ್ಯಂತ ಭಯಭೀತಿ ವಾತಾವರಣ ನಿರ್ಮಾಣವಾಗಿದ್ದು, ಉದ್ವಿಗ್ನ ವಾತಾರಣ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ.

SCROLL FOR NEXT