ಸಾಂದರ್ಭಿಕ ಚಿತ್ರ 
ರಾಜ್ಯ

ಪ್ರಿಯಕರನ ಬ್ಲಾಕ್ ಮೇಲ್ ಗೆ ಹೆದರಿ ಅಪ್ರಾಪ್ತೆ ಆತ್ಮಹತ್ಯೆ

ಪ್ರೀತಿಸುತ್ತಿದ್ದ ಯುವಕನ ಬ್ಲಾಕ್ ಮೇಲ್ ಗೆ ಹೆದರಿ 15 ವರ್ಷದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ಬೆಂಗಳೂರು: ಪ್ರೀತಿಸುತ್ತಿದ್ದ ಯುವಕನ ಬ್ಲಾಕ್ ಮೇಲ್ ಗೆ ಹೆದರಿ 15 ವರ್ಷದ ಅಪ್ರಾಪ್ತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಜೆಜೆ ನಗರ ವ್ಯಾಪ್ತಿಯಲ್ಲಿ ನಡೆದಿದೆ. 
ಸೌಂದರ್ಯ(15) ಆತ್ಮಹತ್ಯೆ ಮಾಡಿಕೊಂಡ ಅಪ್ರಾಪ್ತೆ. ಸೌಂದರ್ಯ ಮತ್ತು ಪ್ರವೀಣ್(19) ಇಬ್ಬರು ಅಕ್ಕಪಕ್ಕದ ಮನೆಯವರಾಗಿದ್ದು ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಯುವಕನು ತನನ್ನು ಮದುವೆಯಾಗು ಎಂದು ಒತ್ತಾಯಿಸುತ್ತಿದ್ದನು. 
ಮದುವೆಯಾಗದಿದ್ದರೆ, ನಾವಿಬ್ಬರು ಜೊತೆಯಲ್ಲಿ ತೆಗೆಸಿಕೊಂಡಿರುವ ಪೋಟೋಗಳನ್ನು ಎಲ್ಲರಿಗೂ ತೋರಿಸಿತ್ತೇನೆ ಎಂದು ಪ್ರವೀಣ್ ಬೆದರಿಕೆ ಹಾಕಿದ ಹಿನ್ನಲೆಯಲ್ಲಿ ಸೌಂದರ್ಯ ಮಾರ್ಚ 17ರಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ, ಸುಟ್ಟ ಗಾಯಗಳಿಂದ ನರಳುತ್ತಿದ್ದ ಸೌಂದರ್ಯ ಭಾನುವಾರ ರಾತ್ರಿ ಕೊನೆಯುಸಿರೆಳೆದಿದ್ದಾಳೆ. 
ಕೆಲವೇ ತಿಂಗಳ ಹಿಂದೆ ಇವರಿಬ್ಬರು ಪ್ರೀತಿ ಮಾಡಲು ಶುರು ಮಾಡಿದ್ದರು. ತಾನು ಸೌಂದರ್ಯಳಾನ್ನು ಮದುವೆಯಾಗುತ್ತೇನೆ ಎಂದು ಪ್ರವೀಣ್ ತನ್ನ ಪೋಷಕರಿಗೆ ತಿಳಿಸಿದ್ದನು. ಪೋಷಕರು ಸೌಂದರ್ಯಾಳ ಪೋಷಕರ ಬಳಿ ಮದುವೆ ಪ್ರಸ್ತಾಪ ಮಾಡಿದ್ದಾರೆ. ಆದರೆ, ಸೌಂದರ್ಯ ಪೋಷಕರು, ಅವಳಿಗೆ ಇನ್ನು 15 ವರ್ಷ. ಈಗಲೇ ಮದುವೆ ಮಾಡುವುದಿಲ್ಲ ಎಂದು ನಿರಾಕರಿಸಿದ್ದರು. 
ಇದರಿಂದ ಕುಪಿತನಾದ ಪ್ರವೀಣ್, ತನ್ನೊಂದಿಗೆ ನೀನು ತೆಗೆಸಿಕೊಂಡಿರುವ ಫೋಟೋ ಮತ್ತು ವೀಡಿಯೋಗಳನ್ನು ನಿನ್ನ ಸ್ನೇಹಿತರಿಗೆ ತೋರಿಸಿ ನಿನ್ನ ಮರ್ಯಾದೆ ಕಳೆಯುತ್ತೇನೆ ಎಂದು ಹೇಳಿ ಬೆಂದರಿಕೆ ಹಾಕಿದ್ದನು. ಸಾಯುವ ಮುನ್ನ ಸೌಂದರ್ಯ ಪ್ರವೀಣ್ ಬೆದರಿಕೆ ಹಾಕುತ್ತಿದ್ದ ಎಂದು ಹೇಳಿಕೆ ನೀಡಿದ್ದಾಳೆ. ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

'ವಿರಾಟ್ ಕೊಹ್ಲಿ ಬೇಗ ಔಟಾದರೆ ನನಗೆ ಊಟವೇ ಸೇರಲ್ಲ': ಸ್ಟಾರ್ ಬ್ಯಾಟರ್ ಬಗ್ಗೆ ನಾನಾ ಪಾಟೇಕರ್ ಹೇಳಿಕೆಯ ಹಳೆಯ ವಿಡಿಯೋ ವೈರಲ್

ಬೆಂಗಳೂರಿನಲ್ಲಿ CJP ಪ್ರತಿಭಟನೆ: ಪ್ರಕಾಶ್ ರಾಜ್, YouTuber ಧ್ರುವ್ ರಾಠಿ ಭಾಗಿ; CEC ರಾಜೀನಾಮೆಗೆ ಬಿಗಿಪಟ್ಟು..!

ಹಿರಿಯ ನಟ ನಾನಾ ಪಾಟೇಕರ್ ಇನ್ನಿಲ್ಲ

'KSRTCಯಲ್ಲಿ ಡೀಸೆಲ್ ಕೊರತೆ ತಾತ್ಕಾಲಿಕ'; ಹಣದ ಕೊರತೆ ಇದ್ದಿದ್ದರೆ, ಗ್ಯಾರಂಟಿ ಯೋಜನೆಗಳು ಮುಂದುವರಿಯುತ್ತಿದ್ದವೇ?': ಜಿ ಪರಮೇಶ್ವರ