ದಾವಣಗೆರೆ: ಹರಪ್ಪನಹಳ್ಳಿ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದೀಗ ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.
ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆ ಕೂಡ್ಲಗಿ ತಾಲೂಕಿನ ಹರಳು ಗ್ರಾಮದವರಾಗಿದ್ದು, ಕಳೆದ ಭಾನುವಾರ ಗೋಣಿಬಸವೇಶ್ವರ ಜಾತ್ರೆಗೆ ಹೋಗಿ ತನ್ನ ಸಂಬಂಧಿಕರೊಂದಿಗೆ ಮನೆಗೆ ಹೋಗಲು ಹರಪ್ಪನಹಳ್ಳಿ ಹೊರವಲಯದಲ್ಲಿ ನಿಂತಿದ್ದರು.
ಈ ವೇಳೆ ಮಹಿಳೆ ನಿಂತಿದ್ದ ಸ್ಥಳಕ್ಕೆ ಬಂದ ವ್ಯಕ್ತಿಗಳ ಗುಂಪೊಂದು ಮಹಿಳೆಯ ಸಂಬಂಧಿಕರನ್ನು ಹೆದರಿಸಿ ಓಡಿಸಿದ್ದಾರೆ. ನಂತರ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆಂದುದ ಹೇಳಲಾಗುತ್ತಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಪ್ರಕರಣ ಸಂಬಂಧ ಹರಪ್ಪನಹಳ್ಳಿಯ ಇಸ್ಲಾಮಾಪುರದ ತಿರುಪತಿ, ಹನುಮಂತಪ್ಪ, ಬಸವರಾಜ ಅಲಿಯಾಸ್ ಬುಟ್ಟ್ಯಾ, ಕುಲಹಳ್ಳಿಯ ಬಸವರಾಜ ಮತ್ತು ದ್ಯಾಮಾ ಎಂಬುವವರನ್ನು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ.