ಪ್ರೇಮಿಗಳು 
ರಾಜ್ಯ

ಅರಣ್ಯ ಇಲಾಖೆ ಅಧಿಕಾರಿ ಎಂದು ಬೆದರಿಸಿ ಸಿದ್ದರಬೆಟ್ಟದಲ್ಲಿ ಪ್ರೇಮಿಗಳನ್ನು ಬೆತ್ತಲುಗೊಳಿಸಿದ ಕಾಮಾಂಧ

ಪ್ರವಾಸಕ್ಕೆಂದು ಸಿದ್ದರಬೆಟ್ಟಕ್ಕೆ ಬಂದಿದ್ದ ಪ್ರೇಮಿಗಳನ್ನು ತಾನು ಅರಣ್ಯ ಇಲಾಖೆ ಅಧಿಕಾರಿ ಎಂದು ಬೆದರಿಸಿ ವಿವಸ್ತ್ರಗೊಳಿಸಿ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು...

ತುಮಕೂರು: ಪ್ರವಾಸಕ್ಕೆಂದು ಸಿದ್ದರಬೆಟ್ಟಕ್ಕೆ ಬಂದಿದ್ದ ಪ್ರೇಮಿಗಳನ್ನು ತಾನು ಅರಣ್ಯ ಇಲಾಖೆ ಅಧಿಕಾರಿ ಎಂದು ಬೆದರಿಸಿ ವಿವಸ್ತ್ರಗೊಳಿಸಿ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ನಂತರ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಯುವತಿ ಆತನ ಮರ್ಮಾಂಗಕ್ಕೆ ಒದ್ದು ಪಾರಾಗಿರುವ ಘಟನೆ ನಡೆಸಿದೆ.

ತುಮಕೂರಿನ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುವ ಪ್ರೇಮಿಗಳು ಭಾನುವಾರ ಸಿದ್ದರಬೆಟ್ಟಕ್ಕೆ ಬಂದಿದ್ದರು. ಮಧ್ಯಾಹ್ನ ವೇಳೆ 1 ಗಂಟೆ ವೇಳೆಯಲ್ಲಿ ಖಾಕಿ ಬಟ್ಟೆ ಧರಿಸಿದ್ದ ವ್ಯಕ್ತಿಯೊಬ್ಬ ತಾನು ಅರಣ್ಯ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ಅವರಿಬ್ಬರನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ವಿವಸ್ತ್ರಗೊಳಿಸಿ ಮೊಬೈಲ್​ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ. ಬಳಿಕ ಯುವಕನ ಬಟ್ಟೆ, ಪರ್ಸ್, ಮೊಬೈಲ್ ಕಿತ್ತುಕೊಂಡು ಬೆದರಿಸಿ ಅಲ್ಲಿಂದ ಕಳುಹಿಸಿದ್ದಾನೆ.

ನಂತರ ಲೈಂಗಿಕ ಕ್ರಿಯೆಗೆ ಒಪ್ಪದ ಯುವತಿಯನ್ನು ಗುಹೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಯುವತಿ ಖಾಕಿಧಾರಿಯ ಮರ್ವಂಗಕ್ಕೆ ಒದ್ದು ಆತನಿಂದ ತಪ್ಪಿಸಿಕೊಂಡಿದ್ದಾಳೆ. ವಿವಸ್ತ್ರವಾಗಿದ್ದರಿಂದ ಯುವತಿ ಬೆಳಗಾಗುವವರೆಗೆ ಬಂಡೆಯ ಸಂದಿಯಲ್ಲಿ ಕಾಲ ಕಳೆದಿದ್ದಾಳೆ.

ಸೋಮವಾರ ಮುಂಜಾನೆ ಬೆಟ್ಟದಿಂದ ಇಳಿದು ಅಲ್ಲೇ ಗ್ರಾಮದ ಕಡೆ ಬಂದಿದ್ದಾಳೆ. ಹೊಲದಲ್ಲಿದ್ದ ಮಹಿಳೆಯರ ಬಳಿ ಬಟ್ಟೆ ಪಡೆದಿದ್ದಾಳೆ. ನಂತರ ಗ್ರಾಮಸ್ಥರ ನೆರವಿನಿಂದ ಪ್ರಿಯಕರನ ಜತೆಗೂಡಿ ಸೋಮವಾರ ಸಂಜೆ ಕೊರಟಗೆರೆ ಠಾಣೆಗೆ ದೂರು ನೀಡಿದ್ದಾಳೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಂಜುನಾಥ್, ಗ್ರಾಮಾಂತರ ಡಿವೈಎಸ್​ಪಿ ವಿಜಯಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ಯುವತಿಯಿಂದ ಮಾಹಿತಿ ಪಡೆದಿದ್ದಾರೆ. ಆರೋಪಿ ಪತ್ತೆಗೆ ವಿಶೇಷ ಪೊಲೀಸ್ ತಂಡ ರಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!