ಬೆಂಗಳೂರು: ಪ್ರಯಾಣಿಕ ಮಹಿಳೆ ಎದುರು ಹಸ್ತಮೈಥುನ ಮಾಡಿಕೊಂಡು ಅಸಭ್ಯವರ್ತನೆ ತೋರಿದ ಉಬರ್ ಕಂಪನಿ ಕಾರು ಚಾಲಕ ಸುರೇಶ್ ಎಂಬಾತನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಎಚ್ಎಸ್ಆರ್ ಲೇಔಟ್ ನ 7ನೇ ಹಂತದಿಂದ ಎಸ್ ಜಿ ಪಾಳ್ಯಕ್ಕೆ ಉಬರ್ ಕಾರಿನಲ್ಲಿ ಮಹಿಳೆ ಪ್ರಯಾಣಿಸುತ್ತಿದ್ದ ವೇಳೆ, ಆ ಕಾರಿನ ಚಾಲಕ ಸುರೇಶ್ ತನ್ನೆದುರೇ ಹಸ್ತಮೈಥುನ ಮಾಡಿಕೊಂಡಿರುವುದಾಗಿ ಮಹಿಳೆ ಮಡಿವಾಳ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಚಾಲಕ ಸುರೇಶ್ ನನ್ನು ಬಂಧಿಸಿದ್ದಾರೆ. ಸುರೇಶ್ ಮೂಲತಃ ಚಿಕ್ಕಬಳ್ಳಾಪುರದವನು ಎಂದು ತಿಳಿದುಬಂದಿದೆ.
ಈ ಹಿಂದೆ ಎಸ್ಆರ್ ಎಸ್ ಟ್ರಾವೆಲ್ಸ್ ನಲ್ಲಿ ಬಸ್ ಚಾಲಕನಾಗಿದ್ದ ಸುರೇಶ್, ಎರಡು ತಿಂಗಳ ಹಿಂದೆಯಷ್ಟೇ ಉಬರ್ ಕಾರು ಓಡಿಸುತ್ತಿದ್ದ ಎನ್ನಲಾಗಿದೆ. ಪೊಲೀಸರು ಈಗ ಆತನ ವಿರುದ್ಧ ಸೆಕ್ಷನ್ 509ರ ಅಡಿ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.