ರಾಯಚೂರು: ಎರಡು ಲಾರಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.
ರಾಯಚೂರಿನ ಹೊರವಲಯದಲ್ಲಿರುವ ಪವರ್ ಗ್ರಿಡ್ ಬಳಿ ಎರಡು ಲಾರಿ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದಿಂದ ಸ್ಥಳದಲ್ಲಿಯೇ ಇಬ್ಬರು ದುರ್ಮರಣ ಹೊಂದಿದ್ದಾರೆ.
ಲಾರಿ ಚಾಲಕ ಅಮೀರ್ ಹಾಗೂ ಬಸವರಾಜ್ ಮೃತಪಟ್ಟ ದುರ್ದೈವಿಗಳು. ರಾಯಚೂರು ಪಶ್ಚಿಮ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.