ಸಾಂದರ್ಭಿಕ ಚಿತ್ರ 
ರಾಜ್ಯ

ಬ್ರೌನ್ ಶುಗರ್ ಮಾರಾಟ ಮಾಡುತ್ತಿದ್ದ ಮೂವರ ಬಂಧನ

ಬ್ರೌನ್ ಶುಗರ್ ಮಾರಾಟ ಮಾಡುಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಪರಪ್ಪನ ಆಗ್ರಹಾರ...

ಬೆಂಗಳೂರು: ಬ್ರೌನ್ ಶುಗರ್ ಮಾರಾಟ ಮಾಡುಲು ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಪರಪ್ಪನ ಆಗ್ರಹಾರ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. 
ಆರೋಪಿಗಳಿಂದ ಸುಮಾರು 1 ಕೋಟಿ ಮೌಲ್ಯದ 940 ಗ್ರಾಂ ಬ್ರೌನ್ ಶುಗರನ್ನು ವಶಪಡಿಸಿಕೊಳ್ಳಲಾಗಿದೆ. ತಮಿಳುನಾಡಿನ ಕೃಷ್ಣಗಿರಿ ಮೂಲದವರಾದ ಮುರುಗನ್(42), ಸೀನಾ(32) ಮತ್ತು ಪಳನಿ ಅಲಿಯಾನ್ ಸುಬ್ರಮಣಿ(30) ಬಂಧಿತ ಆರೋಪಿಗಳು. 
ಹೋಸೂರು ರಸ್ತೆಯಲ್ಲಿರುವ ಕಾಲೇಜು ವಿದ್ಯಾರ್ಥಿಗಳಿಗೆ ಬ್ರೌನ್ ಶುಗರ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ವಿಚಾರಣೆ ವೇಳೆ, ಡ್ರಗ್ಸ್ ಮಾರಾಟದ ಬಗ್ಗೆ ಬಾಯ್ಬಿಟ್ಟಿದ್ದಾರೆ. ಬಂಧಿತ ಪಳನಿ ಈ ಹಿಂದೆ ಕುವೈತ್ ನಲ್ಲಿ ಕ್ಯಾಬ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ತಮಿಳುನಾಡಿಗೆ ಬಂದು ಅಲ್ಲಿ ಬೇಕರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪಳನಿ ಚಾಲಕನಾಗಿದ್ದ ವೇಳೆ ಆತನ ಕಾರಿನಲ್ಲಿ ಹಲವು ಬಾರಿ ಸಂಚರಿಸಿದ್ದ ದುಬೈ ಮೂಲದ ರಾಜು ಎಂಬಾತ ಪರಿಚಯವಾಗಿತ್ತು. 
ಕೆಲ ದಿನಗಳ ಹಿಂದೆ ಪಳನಿಗೆ ಕರೆ ಮಾಡಿದ ರಾಜು, ತನಗೆ ಸೇರಿದ ಬಟ್ಟೆ ಬ್ಯಾಗ್ ವೊಂದು ತಮಿಳುನಾಡಿನಲ್ಲಿ ಇದ್ದು, ನನ್ನ ಸ್ನೇಹಿತ ಅದನ್ನು ನಿನಗೆ ಕೊಡುತ್ತಾನೆ. ಆ ಬ್ಯಾಗನ್ನು ತನಗೆ ತಲುಪಿಸುವಂತೆ ಕೋರಿದ್ದಾನೆ. ಅದಕ್ಕೆ ಒಪ್ಪಿದ ಪಳನಿ ಸ್ನೇಹಿತನಿಂದ ಬ್ಯಾಗ್ ತೆಗೆದುಕೊಂಡಿದ್ದಾನೆ. ನಂತರ ಅದನ್ನು ತೆಗೆದು ನೋಡಿದಾಗ, ಬ್ರೌನ್ ಶುಗರ್ ಇರುವುದು ತಿಳಿದು ಬಂದಿದೆ. ನಂತರ ಈ ಬಗ್ಗೆ ತನ್ನ ಸ್ನೇಹಿತರಿಗೆ ಈ ಬಗ್ಗೆ ಮಾಹಿತಿ ನೀಡಿ, ಅದನ್ನು ಮಾರಾಟ ಮಾಡಲು ಮುಂದಾಗಿದ್ದಾಗಿ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಜ್ಞಾನೇಶ್ ಕುಮಾರ್ ನೆರವಿನಿಂದ ದೇಶವನ್ನು 'ಹೈಜಾಕ್' ಮಾಡಿದ ಮೋದಿ, ಶಾ, ಭಾಗವತ್‌ರನ್ನು ಸುಮ್ಮನೆ ಬಿಡಲ್ಲ; ರಾಹುಲ್ ಗಾಂಧಿ ಗುಡುಗು!

'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

SIR ವಿವಾದ: 'ಶಾಸಕ ಯತ್ನಾಳ್ ಬಣ್ಣ ಬಯಲು'; ವಿಜಯಪುರದಲ್ಲಿ ಬದುಕಿರುವ 8 ಮುಸ್ಲಿಂ ಮತದಾರರು 'ಸತ್ತಿದ್ದಾರೆ' ಎಂದು ಅರ್ಜಿ!

ಹೆದ್ದಾರಿಗಳಲ್ಲಿ ನಿಲ್ಲಿಸಿರುವ ವಾಹನಗಳ ಎಲೆಕ್ಟ್ರಾನಿಕ್ ಟ್ರ್ಯಾಕಿಂಗ್ ಸಾಧ್ಯವಾಗುತ್ತಿಲ್ಲವೇಕೆ- NHAI ಗೆ ಸುಪ್ರೀಂ ಕೋರ್ಟ್

ಗಣೇಶ ವಿಸರ್ಜನೆ ವಿಚಾರವಾಗಿ ಜಿಲ್ಲಾಧಿಕಾರಿ - SP ನಡುವೆ ಜಟಾಪಟಿ; 'ಹೇಗೆ ರಿಪೇರಿ ಮಾಡಬೇಕೆಂದು ಗೊತ್ತಿದೆ' ಎಂದ ಎಚ್‌ಡಿ ರೇವಣ್ಣ