'ನಾವು ಒಂದೂವರೆ ವರ್ಷ ಪ್ರೀತಿಸುತ್ತಿದ್ದೆವು': ಲಂಡನ್ ಲವ್​ ಕಹಾನಿ ನೆನೆದು ಭಾವುಕರಾದ CM ವಿಜಯ್​ ಪುತ್ರ ಜೇಸನ್!

ನಾನು ಕೇವಲ ಒಂದೇ ಒಂದು ಬಾರಿ ಲವ್ ಮಾಡಿದ್ದೆ. ಅದು ಕಾಲೇಜು ದಿನಗಳಲ್ಲಿ. ಯುವತಿಯೊಬ್ಬಳೊಂದಿಗೆ ಒಂದೂವರೆ ವರ್ಷಗಳ ಕಾಲ ಗಾಢವಾದ ಪ್ರೀತಿಯಲ್ಲಿದ್ದೆ.
Jason Sanjay - Vijay
ಜೇಸನ್​ ಸಂಜಯ್ - ವಿಜಯ್
Updated on: 

ಇತ್ತೀಚಿಗಷ್ಟೇ ಬಿಡುಗಡೆಯಾದ 'ಸಿಗ್ಮಾ' (Sigma) ಚಿತ್ರದ ನಿರ್ದೇಶಕ ಹಾಗೂ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ಅವರು ಇದೇ ಮೊದಲ ಬಾರಿಗೆ ತಮ್ಮ ವೈಯಕ್ತಿಕ ಜೀವನದ ಕುರಿತು ಸಾರ್ವಜನಿಕವಾಗಿ ಮಾತನಾಡಿದ್ದಾರೆ.

ನಾನು ಕೇವಲ ಒಂದೇ ಒಂದು ಬಾರಿ ಲವ್ ಮಾಡಿದ್ದೆ. ಅದು ಕಾಲೇಜು ದಿನಗಳಲ್ಲಿ. ಯುವತಿಯೊಬ್ಬಳೊಂದಿಗೆ ಒಂದೂವರೆ ವರ್ಷಗಳ ಕಾಲ ಗಾಢವಾದ ಪ್ರೀತಿಯಲ್ಲಿದ್ದೆ. ಆದರೆ ಒಂದೂವರೆ ವರ್ಷಗಳ ನಂತರ ಪರಸ್ಪರ ಒಪ್ಪಿಗೆಯೊಂದಿಗೆ ಅಂತ್ಯಗೊಂಡಿತ್ತು ಎಂದು ಜೇಸನ್ ಅವರು ಮೊದಲ ಲವ್ ಕಹಾನಿಯನ್ನು ಬಹಿರಂಗಪಡಿಸಿದ್ದಾರೆ

ಆ ಪ್ರೇಮ ಬಂಧನದಿಂದ ಹೊರಬಂದ ನಂತರವೇ ನಾನು 'ಸಿಗ್ಮಾ' ಚಿತ್ರವನ್ನು ನಿರ್ದೇಶಿಸುವ ಕೆಲಸದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡೆ ಎಂದು ಜೇಸನ್ ಹೇಳಿದ್ದಾರೆ.

Jason Sanjay - Vijay
ರೋಡ್‌ಶೋ ವೇಳೆ 'ಸಿಗ್ಮಾ' ಫ್ರೇಮ್ ಎತ್ತಿಹಿಡಿದ ತಮಿಳುನಾಡು CM ವಿಜಯ್; ಮಗನ ಸಿನಿಮಾಗೆ ತಂದೆಯ ಬೆಂಬಲ! ವಿಡಿಯೋ ವೈರಲ್

ಬ್ರೇಕ್‌ಅಪ್ ನಂತರದ ದಿನಗಳಲ್ಲಿ ತೀವ್ರ ಖಾಲಿ ಭಾವ ಕಾಡುತ್ತಿತ್ತು. ಆ ಕಷ್ಟದ ಸಮಯದಲ್ಲಿ ಸಂಗೀತ ನಿರ್ದೇಶಕ ಯುವನ್ ಶಂಕರ್ ರಾಜಾ ಅವರ ವಿರಹಗೀತೆಗಳೇ ನನಗೆ ಏಕಾಂಗಿತನದಿಂದ ಹೊರಬರಲು ಆಸರೆಯಾಗಿದ್ದವು ಎಂದು ಜೇಸನ್​ ನೆನಪಿಸಿಕೊಂಡಿದ್ದಾರೆ.

ಸಂದರ್ಶನದಲ್ಲಿ ತಮ್ಮ ಬಾಲ್ಯ ಹಾಗೂ ಯೌವನದ ಕುರಿತು ಮಾತನಾಡಿದ ಸಂಜಯ್​, ಲಂಡನ್‌ನಲ್ಲಿ ಓದುತ್ತಿದ್ದಾಗ ಯುವತಿಯೊಬ್ಬಳೊಂದಿಗೆ ಒಂದೂವರೆ ವರ್ಷಗಳ ಕಾಲ ಗಾಢವಾದ ಪ್ರೇಮದಲ್ಲಿದ್ದೆ. ಆದರೆ ಬ್ರೇಕಪ್ ನಂತರ ನಾನು ಉದ್ದೇಶಪೂರ್ವಕವಾಗಿ ಸಾಮಾಜಿಕ ಮಾಧ್ಯಮದಿಂದ ದೂರವಿದ್ದೆ ಎಂದು ಹೇಳಿದ್ದಾರೆ.

ತಮ್ಮಲ್ಲಿನ ಸ್ವಲ್ಪ ಮಟ್ಟಿನ ಅಹಂಕಾರದಿಂದಾಗಿ ಆ ಯುವತಿಯೊಂದಿಗೆ ಮತ್ತೊಮ್ಮೆ ಮಾತನಾಡಲು ಅಥವಾ ಪ್ರೇಮ ಪ್ರಸಂಗವನ್ನು ಮುಂದುವರಿಸಲು ನಾನು ಹೋಗಲಿಲ್ಲ ಎಂದು ಜೇಸನ್ ಸ್ಪಷ್ಟಪಡಿಸಿದ್ದಾರೆ. ಸಿಎಂ ವಿಜಯ್​ ಪುತ್ರನ ಈ ಮುಕ್ತ ಮಾತುಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿವೆ,

ಜೇಸನ್ ಸಂಜಯ್ ನಿರ್ದೇಶನದ ಚೊಚ್ಚಲ ಚಿತ್ರ 'ಸಿಗ್ಮಾ' ತಮಿಳುನಾಡಿನಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಇದರಲ್ಲಿ . ಸಂದೀಪ್ ಕಿಶನ್ ನಾಯಕನಾಗಿ ಹಾಗೂ ಪ್ರಿಯಾ ಅಭಿಲ್ಲಾ ನಾಯಕಿಯಾಗಿ ಅಭಿನಯಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com