ಬೆಂಗಳೂರು: ಟಿ20 ವಿಶ್ವಕಪ್ ಪಂದ್ಯಾವಳಿಯ ಭಾರತ-ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸುತ್ತಿದ್ದ ಯುವಕರು ಹಾಗೂ ವ್ಯಕ್ತಿಯೊರ್ವನ ನಡುವಿನ ಜಗಳ ಯುವಕನ ಸಾವಿನೊಂದಿಗೆ ಅಂತ್ಯವಾಗಿದೆ.
ಬೆಂಗಳೂರಿನ ಜೆಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಥಳೀಯ ನಿವಾಸಿ ಬಿಕಾಂ ವಿದ್ಯಾರ್ಥಿ ಅವಿನಾಶ್ ಕೊಲೆಯಾದ ಯುವಕ.
ಕಳೆದ ರಾತ್ರಿ ಭಾರತ-ಆಸ್ಟ್ರೇಲಿಯಾ ಪಂದ್ಯವನ್ನು ಅವಿಶಾನ್ ತಮ್ಮ ಸ್ನೇಹಿತರೊಂದಿಗೆ ದೊಡ್ಡ ಸ್ಕ್ರೀನ್ ನಲ್ಲಿ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ತನ್ನ ಸಾಕು ನಾಯಿಯೊಂದಿಗೆ ಅಲ್ಲಿಗೆ ಜಾನ್ ಕೆನಡಿ ಎಂಬಾತ ಬಂದಿದ್ದಾನೆ. ಪಂದ್ಯ ವೇಳೆ ನಾಯಿ ಬೊಳಗಿದ್ದಕ್ಕೆ ಆಕ್ರೋಶಗೊಂಡ ಯುವಕರು ಆತನೊಂದಿಗೆ ಜಗಳವಾಡಿದ್ದಾರೆ.
ಇದರಿಂದ ಆವೇಶಗೊಂಡ ಜಾನ್ ಕೆನಡಿ ಮನೆಗೆ ಹೋಗಿ ಸ್ನೇಹಿತರೊಂದಿಗೆ ಅಲ್ಲಿಗೆ ಬಂದು ಅವಿನಾಶ್ ಜತೆ ಜಗಳಕ್ಕೆ ನಿಂತಿದ್ದಾನೆ. ಈ ವೇಳೆ ಕೈಯಲ್ಲಿದ್ದ ಬಿಯರ್ ಬಾಟಲಿಯನ್ನು ಒಡೆದು ಅವಿನಾಶ್ ಗೆ ಇರಿದು ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವಿನಾಶ್ ಮೃತಪಟ್ಟಿದ್ದಾನೆ.
ಜೆಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಜಾನ್ ಕೆನಡಿಯನ್ನು ಬಂಧಿಸಿದ್ದಾರೆ.