ಸಾಂದರ್ಭಿಕ ಚಿತ್ರ 
ರಾಜ್ಯ

ಕರ್ನಾಟಕದ ಆನೆಗಳನ್ನು ದತ್ತು ಪಡೆಯಲು ಮುಂದಾದ ಚತ್ತೀಸ್ ಗಢ

ಕರ್ನಾಟಕದ ಆನೆಗಳನ್ನು ದತ್ತು ಪಡೆಯಲು ಚತ್ತೀಸ್ ಗಢ ಮುಂದಾಗಿದೆ. ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗುತ್ತಿರುವ...

ಬೆಂಗಳೂರು: ಕರ್ನಾಟಕದ ಆನೆಗಳನ್ನು ದತ್ತು ಪಡೆಯಲು ಚತ್ತೀಸ್ ಗಢ ಮುಂದಾಗಿದೆ. ರಾಜ್ಯದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಆನೆಗಳನ್ನು ದತ್ತು ಪಡೆಯುವ ಆಸಕ್ತಿಯನ್ನು ಚತ್ತೀಸ್ ಗಢ ವ್ಯಕ್ತಪಡಿಸಿದೆ. 
ಇತ್ತೀಚೆಗಷ್ಟೇ ಚತ್ತೀಸ್ ಗಢದ ಅರಣ್ಯ ಸಚಿವ ರಾಜ್ಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಕರ್ನಾಟಕದಿಂದ ಆನೆಗಳನ್ನು ದತ್ತು ಪಡೆಯುವ ಆಸಕ್ತಿಯನ್ನು ವ್ಯಕ್ತಪಡಿಸಿದ್ದಾರೆ ಎಂದು ಅರಣ್ಯ ಸಚಿವ ಬಿ ರಮಾನಾಥ್ ರೈ ತಿಳಿಸಿದ್ದಾರೆ.
ಚತ್ತೀಸ್ ಗಢದ ಮನವಿಯನ್ನು ನಾವು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಎರಡು ರಾಜ್ಯಗಳು ಚರ್ಚಿಸಲಿವೆ ಎಂದು ಅವರು ಹೇಳಿದ್ದಾರೆ.
ಈಗಾಗಲೇ ರಾಜ್ಯದಲ್ಲಿ 6,000ಕ್ಕಿಂತ ಹೆಚ್ಚು ಆನೆಗಳು ಇದ್ದು, ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತಿದೆ. ಆನೆಗಳ ದಾಳಿ ಹೆಚ್ಚಾಗುತ್ತಿದೆ. ದೇಶದಲ್ಲೇ ಕರ್ನಾಟಕದಲ್ಲಿ ಆನೆಗಳ ಸಂಖ್ಯೆ ಹೆಚ್ಚಿದೆ. ಬೇರೆ ರಾಜ್ಯ ಆನೆಗಳನ್ನು ದತ್ತು ಪಡೆದರೆ, ಸ್ವಲ್ಪ ಮಟ್ಟಿಗೆ ಆನೆಗಳಿಂದ ಎದುರಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿದ್ದಾಗ, ಆನೆಗಳನ್ನು ಬೇರೆ ರಾಜ್ಯಕ್ಕೆ ನೀಡಲು ಸಿದ್ಧವಿತ್ತು. ಆಗ ಆನೆಗಳನ್ನು ದತ್ತು ಪಡೆಯಲು ಮಧ್ಯಪ್ರದೇಶ ಮುಂದಾಗಿತ್ತು. ಆದರೆ, ಕೆಲವು ಕಾರಣಾಂತರಗಳಿಂದ ಅದು ಸ್ಥಗಿತಗೊಂಡಿತ್ತು. 
ಈಗ ಚತ್ತೀಸ್ ಗಢ ಆನೆಗಳನ್ನು ದತ್ತು ಪಡೆಯಲು ಮುಂದಾಗಿದೆ. ಆನೆಗಳನ್ನು ದತ್ತು ನೀಡುವ ಸಂಬಂಧ ಜಿಲ್ಲಾಧಿಕಾರಿಗಳು ಮತ್ತು ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದ ಅವರು, ಆನೆಗಳನ್ನು ದತ್ತು ನೀಡಲು ಯಾವುದೇ ಕಾನೂನು ಅಡಚಣೆಗಳು ಇಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!