ಬೆಂಗಳೂರು: ವಿದ್ಯುತ್ ದರ ಪ್ರತಿ ಯೂನಿಟ್ ಗೆ 25 ಪೈಸೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಈ ಸಂಬಂಧ ಇಂದು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(ಕೆಇಆರ್ ಸಿ) ತೀರ್ಮಾನ ಕೈಗೊಳ್ಳಲಿದ್ದು, ಯೂನಿಟ್ ಗೆ 30 ರಿಂದ 40 ಪೈಸೆ ಹೆಚ್ಚಳ ಆಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಕೆಇಆರ್ ಸಿ ಅಧ್ಯಕ್ಷ ಎಂ ಕೆ ಶಂಕರಲಿಂಗೇಗೌಡ ಪರಿಷ್ಕರಣೆ ಪಟ್ಟಿ ಪ್ರಕಟಿಸಲಿದ್ದಾರೆ.
ಬೆಸ್ಕಾಂ ಸೇರಿದಂತೆ 5 ವಿದ್ಯುತ್ ಕಂಪನಿಗಳು ಯೂನಿಟ್ ಗೆ ರು.1.02 ಹೆಚ್ಚಿಸಲು ಮನವಿ ಮಾಡಿ ಪ್ರಸ್ತಾವನೆ ಸಲ್ಲಿಸಿದ್ದವು. ವಾಣಿಜ್ಯ ಮತ್ತು ಗೃಹ ಬಳಕೆಯ ವಿದ್ಯುತ್ ದರವೂ ಹೆಚ್ಚಾಗಲಿದೆ. ಏಪ್ರಿಲ್ 1 ರಿಂದ ಪರಿಷ್ಕೃತ ದರ ಅನ್ವಯವಾಗಲಿದ್ದು, ಬರುವ ತಿಂಗಳ ಬಿಲ್ ನಲ್ಲೇ ಈ ಬಿಸಿ ಗ್ರಾಹಕರಿಗೆ ತಟ್ಟುವ ಸಾಧ್ಯತೆ ಇದೆ.