ತುಮಕೂರಿನಲ್ಲಿರು ಎಚ್ ಎಂಟಿ ಫ್ಯಾಕ್ಟರಿ 
ರಾಜ್ಯ

ತುಮಕೂರು ಎಚ್ಎಂಟಿ ಕಾರ್ಖಾನೆಗೆ ಬೀಗ: 340 ಉದ್ಯೋಗಿಗಳಿಗೆ ವಿಆರ್ ಎಸ್

ತುಮಕೂರು ಎಚ್‌ಎಂಟಿ ಕೈಗಡಿಯಾರ ಕಾರ್ಖಾನೆಯ ಹೋರಾಟದ ಬದುಕು ಕೊನೆಯಾಗಿದೆ. ನಷ್ಟದಲ್ಲಿದ್ದ ಕಾರ್ಖಾನೆಗೆ ಶನಿವಾರ ಅಧಿಕೃತವಾಗಿ ಬೀಗ ಹಾಕಲಾಯಿತು

ತುಮಕೂರು: ತುಮಕೂರು ಎಚ್‌ಎಂಟಿ ಕೈಗಡಿಯಾರ ಕಾರ್ಖಾನೆಯ ಹೋರಾಟದ ಬದುಕು ಕೊನೆಯಾಗಿದೆ. ನಷ್ಟದಲ್ಲಿದ್ದ ಕಾರ್ಖಾನೆಗೆ ಶನಿವಾರ ಅಧಿಕೃತವಾಗಿ ಬೀಗ ಹಾಕಲಾಯಿತು.
ಕಾರ್ಮಿಕರ ದಿನಾಚರಣೆಯ ಮುನ್ನಾದಿನ 125 ಕಾರ್ಮಿಕರಿಗೆ  ಬಿಡುಗಡೆ ಪತ್ರ  ನೀಡಲಾಯಿತು.

1978 ರಲ್ಲಿ  ಮಾಜಿ ಸಂಸದ ಕೆ. ಲಕ್ಕಪ್ಪ ತುಮಕೂರಿನಲ್ಲಿ ಎಚ್ .ಎಂ ಟಿ ಘಟಕ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  119 ಎಕರೆಯಲ್ಲಿದ್ದ ಎಚ್ ಎಂಟಿಯ 20 ಘಟಕಗಳಲ್ಲಿ  1.600 ಸಿಬ್ಬಂದಿ ಕೆಲಸ ಮಾಡುತ್ತಿದ್ದರು.

ಇನ್ನು ಸಿದ್ದಗಂಗ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಕೆಐಎಡಿಬಿ ಗೆ 40 ಎಕರೆ ಭೂಮಿಯನ್ನು ಸ್ವಯಂ ಪ್ರೇರಿತವಾಗಿ ಈ ಕಾರ್ಖಾನೆಗೆ ನೀಡಿದ್ದರು.

ಇನ್ನು ಈ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ  ಕೆಲವು ಉನ್ನತ ಅಧಿಕಾರಿಗಳು ಹೊಸೂರಿನಲ್ಲಿರುವ ಖಾಸಗಿ ಕಂಪನಿಯ ನೌಕರಿಗೆ ಸೇರಿಕೊಂಡಿದ್ದಾರೆ. ಪೂರಕ ಘಟಕಗಳಲ್ಲಿ ಕೆಲಸ ನಿರ್ವಹಿಸುವ ಕೆಲ ಸಿಬ್ಬಂದಿ ಈಗಾಗಲೇ ವಾಚ್ ಬಿಡಿಭಾಗಗಳ ಅಕ್ರಮ ಮಾರಾಟದಲ್ಲಿ ತೊಡಗಿದ್ದಾರೆ ಎಂದು ತುಮಕೂರು ಎಚ್ ಎಂಟಿ ಕಾರ್ಖಾನೆ ಪಿಆರ್  ಆಗಿದ್ದ ಒ ಕೆ.ಎನ್ ಶಿವರಾಜ್ ಹೇಳಿದ್ದಾರೆ.

2006 ನೇ ಇಸವಿಯಲ್ಲಿ  ತುಮಕೂರು ಘಟಕದ ಆಡಳಿತ ಮಂಡಳಿ ಕಾರ್ಖಾನೆಯನ್ನು ಪುನರುಜ್ಜೀವನ ಗೊಳಿಸುವಂತೆ ಮಾಡಿದ ಮನವಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿತ್ತು.
ಮುಂದಿನ ಹತ್ತು ದಿನದಲ್ಲಿ ಕಾರ್ಮಿಕರಿಗೆ ಪರಿಹಾರದ ಹಣ ನೀಡಲಾಗುವುದು ಎಂದು ಆಡಳಿತ ಮಂಡಳಿ ಹೇಳಿದೆ. ಕನಿಷ್ಠ 25 ರಿಂದ 30 ಲಕ್ಷ ಸಿಗಬಹುದು ಎಂಬುದು ಕಾರ್ಮಿಕರ ಲೆಕ್ಕಾಚಾರ. ಕಣ್ಣೀರು ಒರೆಸಿಕೊಳ್ಳುತ್ತಾ, ಭಾರವಾದ ಹೃದಯ ಹೊತ್ತು ಫ್ಯಾಕ್ಟರಿಯಿಂದ ಈಚೆ ನಡೆದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT