ಹುಲಿಕಲ್ ನಟರಾಜ್ 
ರಾಜ್ಯ

ಐವರು ಮಹಿಳೆಯರಿಗೆ ಹಿಡಿದಿದ್ದ ದೆವ್ವ ಬಿಡಿಸಿದ ಹುಲಿಕಲ್ ನಟರಾಜ್!

ಕಳೆದ ಹಲವು ತಿಂಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಆವರು ಮಹಿಳೆಯರಿಗೆ ಮಾಂತ್ರಿಕನೊಬ್ಬ ಚಿಕಿತ್ಸೆ ನೀಡಿದ ಮೇಲೆ ಆ ಮಹಿಳೆಯರು ಈಗ ಸಹಜವಾಗಿ

ದಾವಣೆಗೆರೆ: ಕಳೆದ ಹಲವು ತಿಂಗಳಿಂದ ವಿಚಿತ್ರವಾಗಿ ವರ್ತಿಸುತ್ತಿದ್ದ ಆವರು ಮಹಿಳೆಯರಿಗೆ ಮಾಂತ್ರಿಕನೊಬ್ಬ ಚಿಕಿತ್ಸೆ ನೀಡಿದ ಮೇಲೆ ಆ ಮಹಿಳೆಯರು ಈಗ ಸಹಜ ಸ್ಥಿತಿಗೆ ಮರಳಿರುವ ಘಟನೆ ದಾವಣಗೆರೆ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹುಲಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ಇಬ್ಬರು ಗೃಹಿಣಿಯರು ಹಾಗೂ ಮೂವರು ವಿದ್ಯಾರ್ಥಿನಿಯರು, ಕಳೆದ ಹಲವು ದಿನಗಳಿಂದ ಏರು ಧ್ವನಿಯಲ್ಲಿ ಕಿರುಚುತ್ತಿದ್ದರು. ಜೊತೆಗೆ ತಾವು ಸಾಯುವುದಾಗಿ ಹೇಳುತ್ತಿದ್ದರು. ಇಬ್ಬರು ಗೃಹಿಣಿಯರು ಜ್ವರದಿಂದ ಬಳಲುತಿದ್ದರು. ಈ ಐವರ ವರ್ತನೆಯಿಂದ  ಆಶ್ಚರ್ಯಗೊಂಡಿದ್ದ ಗ್ರಾಮಸ್ಥರು ಇವರಿಗೆ ದೆವ್ವ ಹಿಡಿದಿದೆ ಎಂದು ಭಾವಿಸಿದ್ದರು.

ಇದನ್ನು ಮನಗಂಡ ಶಾಸಕ ರವೀಂದ್ರ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ ಅವರ ಸಹಾಯ ಪಡೆದು, ಅವರ ಜೊತೆ ಮಹಿಳೆಯರ ಭೇಟಿ ಏರ್ಪಡಿಸಿದ್ದರು.
ಈ ಐವರು ಮಹಿಳೆಯರನ್ನು  ದೊಡ್ಡಬಳ್ಳಾಪುರದಲ್ಲಿರುವ ಮಾನಸ ಸುರಕ್ಷಾ ಮೆಂಟಲ್ ಕೇರ್ ಹೋಮ್ ಗೆ ದಾಖಲಿಸಲಾಯಿತು.  ನಂತರ ಅವರಿಗೆ ಅಲ್ಲಿ ಮಾನಸಿಕ ರೋಗ ಚಿಕಿತ್ಸೆ ಮತ್ತು ಕೌನ್ಸೆಲಿಂಗ್ ನಡೆಸಲಾಯಿತು. ಮತ್ತೆ ಈ ಐವರಿಗೂ, ಯೋಗ, ಧ್ಯಾನ ಮಾಡಿಸುವುದು ಸೇರಿದಂತೆ ಹಲವು ಧಾರ್ಮಿಕ ಕೇಂದ್ರಗಳಿಗೂ ಕರೆದೊಯ್ಯಲಾಯಿತು.

ನಂತರ ಐವರನ್ನು ವಾಪಸ್ ಹುಲಿಕಟ್ಟೆ ಗ್ರಾಮಕ್ಕೆ ಕರೆತರಲಾಗಿದೆ, ನಾನು ಮಾನಸಿಕ ಖಿನ್ನತೆಗೆ ಒಳಗಾಗಿದ್ದೆ, ಸಂಕಟದಿಂದ ಬಳಲುತ್ತಿದ್ದೆ, ಈಗ ಎಲ್ಲವು ಗುಣಮುಖವಾಗಿ ಆರೋಗ್ಯದಿಂದ ಇರುವುದಾಗಿ ಚಿಕಿತ್ಸೆ ಪಡೆದ ಪಿಯು ವಿದ್ಯಾರ್ಥಿನಿ ತಿಳಿಸಿದ್ದಾಳೆ.

ಯಾವುದೇ ಭೂತ, ದೆವ್ವ ಇಲ್ಲ, ಮಾನಸಿಕವಾಗಿ ದುರ್ಬಲವಾಗಿರುವವರು ಈ ರೀತಿ ಅಪರಿಚಿತವಾಗಿ ವರ್ತಿಸುತ್ತಾರೆ. ದೆವ್ವ ಮಾನವ ದೇಹವನ್ನು ಸೇರುತ್ತದೆ ಎಂಬುದೆಲ್ಲಾ ಸುಳ್ಳು ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ಮೊದಲ ಬಾರಿಗೆ ದಾಳಿ ಕುರಿತು ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

ಬಾನು ಮುಷ್ತಾಕ್‌ ದಸರಾ ಉದ್ಘಾಟನೆಗೆ ಆಕ್ಷೇಪ; ಮುಸ್ಲಿಂ ದ್ವೇಷ ಮನಸ್ಥಿತಿಯನ್ನು ಬದಿಗಿಟ್ಟು, ಸಂವಿಧಾನದ ಆಶಯ ಅರ್ಥ ಮಾಡಿಕೊಳ್ಳಿ: ಸಚಿವ ಹೆಚ್.ಸಿ.ಮಹದೇವಪ್ಪ

ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದ್ದು, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ; ಬಾನು ಮುಷ್ತಾಕ್

JC ರಸ್ತೆಯಲ್ಲಿ White-topping ಕಾಮಗಾರಿ: ಆ.30ರವರೆಗೆ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ನಿರ್ಬಂಧ

SCROLL FOR NEXT