ಕಲಬುರಗಿ: ಬರದಿಂದ ತತ್ತರಿಸಿರುವ ಎಲ್ಲಾ ಜಿಲ್ಲೆಗಳಿಗೂ ಅಗತ್ಯ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ 100 ಕೋಟಿ ರು. ಹಣ ಬಿಡುಗಡೆ ಮಾಡಿದೆ.
ಅತಿ ಹೆಚ್ಚು ಬರ ಪೀಡಿತವಾಗಿರುವ ಕಲಬುರಗಿ, ಬೆಳಗಾವಿ, ಮತ್ತು ವಿಜಯಾಪುರ ಜಿಲ್ಲೆಗಳಿಗೆ ತಲಾ 10 ಕೋಟಿ ರು. ಹಣ ನೀಡಲಾಗಿದೆ.
ಜಿಲ್ಲೆಗಳಲ್ಲಿ ಅಗತ್ಯವಿರುವ ಕುಡಿಯುವ ನೀರು, ಗೋಶಾಲೆ ತೆರೆದು ಅವುಗಳಿಗೆ ಮೇವು ನೀರು ಒದಗಿಸಲು ಸರ್ಕಾರ ಸೂಚಿಸಿದೆ.
ಬೀದರ್, ಯಾದಗಿರಿ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ತಲಾ 5 ಕೋಟಿ ರು. ರಾಯಚೂರು, ಬಾಗಲಕೋಟೆ, ಬಳ್ಳಾರಿ, ಧಾರವಾಡ, ಗದಗ, ಕೊಪ್ಪಳ, ಬೆಂಗಳೂರು ಗ್ರಾಮಾಂತರ ಹಾಗೂ ಬೆಂಗಳೂರು ನಗರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಿಗೆ ತಲಾ 3 ಕೋಟಿ ರು. ಬಿಡುಗಡೆ ಮಾಡಲಾಗಿದೆ.
ಹಾವೇರಿ, ಚಾಮರಾಜನಗರ, ಚಿತ್ರದುರ್ಗ, ದಾವಣೆಗೆರೆ, ಹಾಸನ, ಉತ್ತರ ಕನ್ನಡ, ಮೈಸೂರು, ತುಮಕೂರು, ಜಿಲ್ಲೆಗಳಿಗೆ ತಲಾ 2 ಕೋಟಿ, ಕೊಡಗು ಮಂಡ್ಯ, ದಕ್ಷಿಣ ಕನ್ನಡ, ರಾಮನಗರ, ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಿಗೆ ತಲಾ 1 ಕೋಟಿ ರು. ನೀಡಲಾಗಿದೆ.
ಕಳೆದ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿಗೆ ಹಣ ಕ್ರೆಡಿಟ್ ಮಾಡಲಾಗಿದೆ. ಕೇಂದ್ರ ಸರ್ಕಾರದ ಸೂಚನೆಗಳ ಮೇರೆಗೆ ಕುಡಿಯುವ ನೀರು, ಗೋಶಾಲೆ ಮತ್ತು ಮೇವುಗಳನ್ನು ಪೂರೈಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಎಲ್ಲಾ ಜಿಲ್ಲಾಧಿಕಾರಿಗಳು ಖರ್ಚಾದ ಹಣದ ಸಂಪೂರ್ಣ ವಿವರ ನೀಡಲು ಸರ್ಕಾರ ಆದೇಶ ನೀಡಿದೆ.