ರಾಜ್ಯ

ಅಕ್ರಮ ಕಟ್ಟಡ ನಿರ್ಮಾಣ: ಮಂತ್ರಿ ಡೆವಲಪರ್ಸ್ ಗೆ 117 ಕೋಟಿ ರು. ದಂಡ

Lingaraj Badiger
ನವದೆಹಲಿ: ಬೆಂಗಳೂರಿನಲ್ಲಿ ಕೆರೆ ಒತ್ತುವರಿ ಮಾಡಿ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದ ಮಂತ್ರಿ ಡೆವಲಪರ್ಸ್ ಗೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ(ಎನ್ ಜಿಟಿ) 117 ಕೋಟಿ ರುಪಾಯಿ ದಂಡ ವಿಧಿಸಿದೆ.
ಬೆಂಗಳೂರಿನ ಬೆಳಂದೂರು ಹಾಗೂ ಅಗರ ಕೆರೆ ಸುತ್ತ ಮಂತ್ರಿ ಡೆವಲಪರ್ಸ್ ಹಾಗೂ ಕೋರ್ ಮೈಂಡ್ ಡೆವಲಪರ್ಸ್ ಅಕ್ರಮ ಕಟ್ಟಡ ನಿರ್ಮಾಣ ಮಾಡಿದ್ದವು. ಇದನ್ನು ಪ್ರಶ್ನಿಸಿ ನಮ್ಮ ಬೆಂಗಳೂರು ಪ್ರತಿಷ್ಠಾನ ಎನ್ ಜಿಟಿ ಮೊರೆ ಹೋಗಿತ್ತು.
ವಿಚಾರಣೆ ನಡೆಸಿದ ಹಸಿರು ನ್ಯಾಯಾಧೀಕರಣ, ನಿಯಮ ಉಲ್ಲಂಘಿಸಿ ಕಟ್ಟಡ ನಿರ್ಮಿಸಿದ್ದ ಮಂತ್ರಿ ಡೆವಲಪರ್ಸ್ ಗೆ ಪರಿಹಾರವಾಗಿ 117 ಕೋಟಿ ಹಾಗೂ ಕೋರ್ ಮೈಂಡ್ ಡೆವಲಪರ್ಸ್ ಗೆ 13.5 ಕೋಟಿ ರುಪಾಯಿ ದಂಡ ವಿಧಿಸಿದೆ. ಅಲ್ಲದೆ ಕಟ್ಟಡ ನಿರ್ಮಾಣಕ್ಕೆ ಬಿಡಿಎ, ಬಿಬಿಎಂಪಿ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿದ್ದ ಎನ್ಒಸಿಯನ್ನು ಸಹ ರದ್ದುಗೊಳಿಸಿದೆ.
ಇದೇ ವೇಳೆ ಅಕ್ರಮವಾಗಿ ಒತ್ತುವರಿ ಮಾಡಿದ್ದ 3 ಎಕರೆ 17 ಗುಂಟೆ ಜಮೀನನ್ನು ವಾಪಸ್ ನೀಡುವಂತೆ ಆದೇಶಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ, ಕೆರೆ ಸುತ್ತಮುತ್ತ ಬಫರ್ ಝೋನ್ ಎಂದು ಘೋಷಿಸಿದೆ. ಹೀಗಾಗಿ ಈ ಪ್ರದೇಶದಲ್ಲಿ ಯಾವುದೇ ಕಟ್ಟಡ ನಿರ್ಮಿಸುವಂತಿಲ್ಲ.
SCROLL FOR NEXT