ಪೈಪ್ ಲೈನ್ ಒಡೆದಿದ್ದರಿಂದ ನೀರಿನಿಂದ ಹಾನಿಗೊಳಗಾಗಿರುವ ಮನೆ 
ರಾಜ್ಯ

ಪೈಪ್ ಲೈನ್ ಒಡೆದು ವ್ಯರ್ಥವಾಯ್ತು 19 ಲಕ್ಷ ಲೀಟರ್ ಅಮೂಲ್ಯವಾದ ನೀರು

ಪೈಪ್ ಲೈನ್ ಒಡೆದು ಸುಮಾರು 19 ಲಕ್ಷ ಲೀಟರ್ ಅಮೂಲ್ಯವಾದ ನೀರು ವ್ಯರ್ಥವಾಗಿರುವ ಘಟನೆ ಬೆಳಗಾವಿಯ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ....

ಬೆಳಗಾವಿ: ಬರದಿಂದ ತತ್ತರಿಸಿರುವ ರಾಜ್ಯದ ಜನತೆ ಹನಿ ಹನಿ ನೀರಿಗೂ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲೇ ಪೈಪ್ ಲೈನ್ ಒಡೆದು ಸುಮಾರು 19 ಲಕ್ಷ ಲೀಟರ್  ಅಮೂಲ್ಯವಾದ ನೀರು ವ್ಯರ್ಥವಾಗಿರುವ ಘಟನೆ ಬೆಳಗಾವಿಯ ಮುಚ್ಚಂಡಿ ಗ್ರಾಮದಲ್ಲಿ ನಡೆದಿದೆ.

ಮುಚ್ಚಂಡಿ ಗ್ರಾಮದಲ್ಲಿ ಮಂಗಳವಾರ ರಾತ್ರಿ ಹಿಡಕಲ್ ಜಲಾಶಯದಿಂದ ಬೆಳಗಾವಿ ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್​ಲೈನ್ ಒಡೆದು ಪ್ರವಾಹ ಪರಿಸ್ಥಿತಿ ಉಂಟಾಗಿದೆ. ನೂರಾರು ಅಡಿ ಎತ್ತರಕ್ಕೆ ನೀರು ಚಿಮ್ಮಿದ ರಭಸಕ್ಕೆ 4 ಮನೆ ಸಂಪೂರ್ಣ ಜಲಾವೃತಗೊಂಡಿವೆ.

ಮಂಗಳವಾರ ರಾತ್ರಿ 2 ಗಂಟೆಯ ಸುಮಾರಿಗೆ ಪೈಪ್​ಲೈನ್ ಒಡೆದು ದೇವಪ್ಪ ಜಾಧವ, ವಿನೋದ ಕುಳಚಗೌಡ, ನಾರಾಯಣ ಜಕ್ಕಾಣಿ ಹಾಗೂ ಬಸವಂತ ಬಂಗಾರೆ ಅವರ ಮನೆಗೆ ನೀರು ನುಗ್ಗಿದೆ. ನಾಲ್ಕು ಮನೆಗಳು ಜಲಾವೃತಗೊಂಡಿವೆ. ಮೇಲ್ಛಾವಣಿ, ಗೋಡೆಗಳೆಲ್ಲ ಕುಸಿದು ಬಿದ್ದಿವೆ.

ಮಳೆ ಬರುತ್ತಿರಬರಹುದು ಎಂದು ಭಾವಸಿದ ಅವರಿಗೆ ಹೊರಗಡೆ ಬಂದು ನೋಡುವಷ್ಟರಲ್ಲಿ ಪರಿಸ್ಥಿತಿಯ ಅರಿವಾಗಿದೆ. ಕೂಡಲೇ ಮನೆಯಲ್ಲಿ ಕಟ್ಟಿದ್ದ ಜಾನುವಾರಗಳನ್ನು ದೂರಕ್ಕೆ ಎಳೆದೊಯ್ದಿದ್ದಾರೆ. ಇನ್ನು ಈ ಕುಟುಂಬದವರು ಬೆಳೆದಿದ್ದ ಜೋಳ, ಸೌತೇಕಾಯಿ, ಹೂಕೋಸು, ಎಲೆಕೋಸು ಮುಂತಾದ ಬೆಳೆಗಳೆಲ್ಲಾ ಹಾನಿಯಾಗಿವೆ.

ಮನೆಯೊಳಗಿದ್ದ ಟಿವಿ, ಫ್ರಿಡ್ಜ್, ಫರ್ನೀಚರ್, ಪಾತ್ರೆ, ಸಾಮಾನು ಸರಂಜಾಮು ಎಲ್ಲಾ ನೀರಿನಲ್ಲಿ ಕೊಚ್ಚಿ ಹೋಗಿವೆ, ಜಲಮಂಡಳಿಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

1998ರಲ್ಲಿ ನಗರಕ್ಕೆ ನೀರು ಸರಬರಾಜು ಮಾಡಲು ಹಿಡಕಲ್ ಜಲಾಶಯದಿಂದ ಲಕ್ಷ್ಮೀಟೇಕ್ ಪಂಪ್​ಹೌಸ್​ವರೆಗೆ 1,168 ಮಿ.ಮೀ. ವ್ಯಾಸದ ಪೈಪ್​ಲೈನ್ ಅಳವಡಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕಾಗ್ನಿಜಂಟ್, ಇನ್ಫೋಸಿಸ್, ಟಿಸಿಎಸ್, ವಿಪ್ರೋ ಎಚ್‌ಸಿಎಲ್ ಗೆ ಅಮೆರಿಕ ಶಾಕ್: ಗ್ರೀನ್ ಕಾರ್ಡ್ ಕಾರ್ಯಕ್ರಮದಿಂದ ಅಮಾನತು!

ರಾಜ್‌ಘಟ್‌ನಲ್ಲಿ 'ಇಂಡಿಯಾ' ನಾಯಕರಿಂದ ಧರಣಿ; ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡುವವರೆಗೂ 'ವೋಟ್ ಚೋರಿ' ಹೋರಾಟ ಮುಂದುವರಿಸಲು ಪ್ರತಿಜ್ಞೆ!

ಅಂಬಾನಿ ಭಾರತದ ನಿಜವಾದ ಬಾಸ್?: ಭಾರತದಲ್ಲಿ ಸ್ಟಾರ್ ಲಿಂಕ್ ಸೇವೆ ಆರಂಭ ವಿಳಂಬಕ್ಕೆ ಎಲಾನ್ ಮಸ್ಕ್ ಹತಾಶೆ!

SIR ಕಾನೂನುಬದ್ಧ: ಪ್ರತಿಪಕ್ಷಗಳ ಪ್ರತಿಭಟನೆ ನಡುವೆ CEC ಜ್ಞಾನೇಶ್ ಬೆಂಬಲಕ್ಕೆ ನಿಂತ 42 ನಿವೃತ್ತ ನ್ಯಾಯಾಧೀಶರು!

ಸರ್ಕಾರವನ್ನು ಅಸ್ಥಿರಗೊಳಿಸುವ ಪಿತೂರಿ: 'ಸ್ಟಿಂಗ್ ಆಪರೇಷನ್' ಕುರಿತು ಸಿಎಂ DKS ಎಚ್ಚರಿಕೆ ಕರೆಗೆ ಸಚಿವರಿಂದ ಬೆಂಬಲ