ಬಿಡಿಎ (ಸಂಗ್ರಹ ಚಿತ್ರ) 
ರಾಜ್ಯ

ಕರ್ನಾಟಕೇತರರಿಗೆ ಬಿಡಿಎ ಸಿಹಿ ಸುದ್ದಿ; ನಿವೇಶನ ಹಂಚಿಕೆ ನಿಯಮ ಸಡಿಲ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಲ್ಲಿ ನಿವೇಶನದ ಕನಸು ಕಾಣುತ್ತಿರುವ ಕರ್ನಾಟಕತೇರರಿಗೆ ಸಿಹಿಸುದ್ದಿಯೊಂದಿದ್ದು, ಬಿಡಿಎ ತನ್ನ ನಿಯಮಾವಳಿಗಳನ್ನು ಇದೀಗ ಸಡಿಲಗೊಳಿಸಿದೆ..

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ನಲ್ಲಿ ನಿವೇಶನದ ಕನಸು ಕಾಣುತ್ತಿರುವ ಕರ್ನಾಟಕತೇರರಿಗೆ ಸಿಹಿಸುದ್ದಿಯೊಂದಿದ್ದು, ಬಿಡಿಎ ತನ್ನ ನಿಯಮಾವಳಿಗಳನ್ನು ಇದೀಗ  ಸಡಿಲಗೊಳಿಸಿದೆ.

ಬಿಡಿಎ ನಿರ್ಮಿತ ನಿವೇಶನಗಳನ್ನು ಮಾರುವ ನಿಟ್ಟಿನಲ್ಲಿ ಮತ್ತು ಗ್ರಾಹಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಬಿಡಿಎ ತನ್ನ ನಿಯಮಾವಳಿಯಲ್ಲಿ ಮಹತ್ತರ ಬದಲಾವಣೆ ಮಾಡಿಕೊಂಡಿದ್ದು, ಈ ಹಿಂದೆ ಇದ್ದ  ಕರ್ನಾಟಕೇತರ ಅರ್ಜಿದಾರರು ಕಡ್ಡಾಯವಾಗಿ 15 ವರ್ಷ ಕರ್ನಾಟಕದ ನಿವಾಸಿಗಳಾಗಿರಬೇಕು ಎಂಬ ನಿಯಮವನ್ನು ಸಡಿಲಗೊಳಿಸಿದ್ದಾರೆ. 15 ವರ್ಷಗಳ ಬದಲಿಗೆ ಇದೀಗ 5 ವರ್ಷ  ಅರ್ಜಿದಾರರು ಕರ್ನಾಟಕದಲ್ಲಿದ್ದರೆ ಸಾಕು ಅವರು ನಿವೇಶನ ಪಡೆಯಲು ಅರ್ಹರು ಎಂದು ಬಿಡಿಎ ತಿಳಿಸಿದೆ. ಕರ್ನಾಟಕದಲ್ಲಿ ಐದು ವರ್ಷದಿಂದ ವಾಸಿಸುತ್ತಿರುವ ಕುರಿತು ದಾಖಲೆ ಸಮೇತ ಅರ್ಜಿ  ಸಲ್ಲಿಸಬೇಕು ಎಂದು ಬಿಡಿಎ ಹೇಳಿದೆ.

ಈ ಬಗ್ಗೆ ಮಾತನಾಡಿರುವ ಬಿಡಿಎ ಹಿರಯ ಅಧಿಕಾರಿಯೊಬ್ಬರು, ಕರ್ನಾಟಕೇತರರು ನಿವೇಶನ ಕೊಳ್ಳಲು ಇರುವ ನಿಯಮಾವಳಿಯನ್ನು ಸಡಿಲಗೊಳಿಸಲು ನಿರ್ಧರಿಸಲಾಗಿದ್ದು, 15 ರ ಬದಲಾಗಿ 5  ವರ್ಷಕ್ಕೆ ಅವಧಿಯನ್ನು ಇಳಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಮತ್ತೋರ್ವ ಬಿಡಿಎ ಹಿರಿಯ ಅಧಿಕಾರಿಯ ಪ್ರಕಾರ ನಿವೇಶನಕ್ಕಾಗಿ ಈ ಬಾರಿ 777 ಕರ್ನಾಟಕೇತರ ಅರ್ಜಿಗಳು ಬಂದಿವೆ ಎಂದು ಹೇಳಿದ್ದಾರೆ. ದೊಡ್ಡಬನಹಳ್ಳಿ, ಆಲೂರು, ಕಣ್ಮಿಣಿಕೆ,  ವಲಗೇರಹಳ್ಳಿ, ಮಲಗಾಲ ಮತ್ತು ಕೊಮ್ಮಘಟದಲ್ಲಿ ಬಿಡಿಎ ನಿರ್ಮಿಸಿರುವ 3280 ಫ್ಲಾಟ್ ಗಳಿಗಾಗಿ ಒಟ್ಟು 777 ಅರ್ಜಿಗಳು ಮಾತ್ರ ಬಂದಿವೆ ಎಂದು ಹೇಳಿದ್ದಾರೆ. ಈ ಫ್ಲ್ಯಾಟ್ ಗಳ ಮಾರಾಟಕ್ಕೆ ಈ  ಹಿಂದೆಯೂ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಅರ್ಜಿದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Super Emergency: ತಾರಕಕ್ಕೇರಿದ ದೆಹಲಿ ಪ್ರತಿಭಟನೆ, ಬರೊಬ್ಬರಿ 3 ಸಾವಿರ ಮಂದಿ ವಶಕ್ಕೆ, ವಿಪಕ್ಷಗಳ ಆಕ್ರೋಶ!

'vote chori' ಹೇಗಿರತ್ತೆ ನಮ್ಗೆ ಗೊತ್ತು, ಸಿನಿಮಾದಲ್ಲಿ ತೋರಿಸಿದ್ದ ರಿಗ್ಗಿಂಗ್ ವಾತಾವರಣ ನಿಜವಾಗಿಯೂ ನೋಡಿದ್ದೇವೆ: SIR ಗೆ 124 ಮಾಜಿ ಅಧಿಕಾರಿಗಳು, ರಾಜತಾಂತ್ರಿಕರಿಂದ ಬೆಂಬಲ

ಹೃದಯವಿದ್ರಾವಕ: 'ಚಿಕಿತ್ಸೆಗೆ ಹಣವಿಲ್ಲ'.. 6 ವರ್ಷದ ಮಗಳನ್ನೇ ಕೆರೆಗೆ ಎಸೆದ ತಾಯಿ; ಆಟೋ ಚಾಲಕನಿಂದ ರಕ್ಷಣೆ

'ನಿಮಗೆ ನಾಚಿಕೆಯಾಗಬೇಕು': CJP ನಾಯಕರ ವಿರುದ್ಧ ವಿಮಾನದಲ್ಲಿ ಪ್ರಯಾಣಿಕರ ಆಕ್ರೋಶ, Video!

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ