ರಾಜ್ಯ

ಸಿಲಿಕಾನ್ ಸಿಟಿಯಲ್ಲಿ 1 ಸಾವಿರ ಕೋಟಿ ರು. ಮೌಲ್ಯದ ಒತ್ತುವರಿ ಭೂಮಿ ತೆರವು

Shilpa D

ಬೆಂಗಳೂರು: ಭೂ ಒತ್ತುವರಿ ತೆರವು ಕಾರ್ಯಾ ಚರಣೆ ಆರಂಭಿಸಿರುವ ಜಿಲ್ಲಾಡಳಿತ ಶನಿವಾರ 1 ಸಾವಿರ ಕೋಟಿ ರೂ ಮೌಲ್ಯದ ಭೂಮಿಯನ್ನು ವಶಕ್ಕೆ ಪಡೆದಿದೆ.

ಉಪವಿಭಾಗಾಧಿಕಾರಿ ಎಲ್.ಸಿ. ನಾಗರಾಜು ನೇತೃತ್ವದಲ್ಲಿ ತೆರವು ಕಾರ್ಯ ನಡೆಯಿತು.  514 ಕೋಟಿ. ರು. ಮೌಲ್ಯದ 49.17 ಎಕರೆ ಜಮೀನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇನ್ನೂ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಸುಮಾರು 260 ಕೋಟಿ ರು. ಮೌಲ್ಯದ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆಗಳು ಹಾಗೂ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಉತ್ತರ ತಾಲೂಕಿನ ಗೆದ್ದನಹಳ್ಳಿ ಗ್ರಾಮದಲ್ಲಿ 50  ಕೋಟಿ ರೂ. ಮೌಲ್ಯದ 31 ಎಕರೆ ಸರ್ಕಾರಿ ಭೂ ಒತ್ತುವರಿ ತೆರವುಗೊಳಿಸಲಾಯಿತು ಎಂದು ಹೇಳಿದರು.

ಬೆಂಗಳೂರು ಪೂರ್ವ ತಾಲೂಕಿನ ವರ್ತರು ಹೋಬಳಿ ಬೆಳ್ಳಂದೂರು ಕೆರೆ, ಅಮಾನಿಕೆರೆಯಲ್ಲಿ ಒತ್ತುವರಿ ಯಾಗಿದ್ದ 70 ಕೋಟಿ ರೂ. ಮೌಲ್ಯದ 11 ಎಕರೆ ಭೂಮಿಯನ್ನು ತಹಸೀಲ್ದಾರ್ ಹರೀಶ್​ನಾಯ್ಕ ನೇತೃತ್ವದಲ್ಲಿ ತೆರವು ಮಾಡಲಾಯಿತು.

ಆನೇಕಲ್ ತಾಲೂಕು ಜಿಗಣಿ ಹೋಬಳಿ ತಿರುಪಾಳ್ಯ ಗ್ರಾಮದಲ್ಲಿನ ಇನಾಂತಿ ಜಾಗವನ್ನು ಅನಧಿಕೃತವಾಗಿ ಪರಭಾರೆ ಮಾಡಲಾಗಿತ್ತು. 74 ಕೋಟಿ ರೂ. ಮೌಲ್ಯದ ಈ ಭೂಮಿಯನ್ನು ಜಿಲ್ಲಾಡಳಿತ ವಶಕ್ಕೆ ಪಡೆಯಿತು.

ಜಿಲ್ಲಾಧಿಕಾರಿ ವಿ. ಶಂಕರ್ ನೇತೃತ್ವದಲ್ಲಿ ನಾಲ್ಕು ಅಧಿಕಾರಿಗಳ ತಂಡಗಳು ಬೆಂಗಳೂರು ಉತ್ತರ, ದಕ್ಷಿಣ, ಪೂರ್ವ ಹಾಗೂ ಆನೇಕಲ್ ತಾಲೂಕಿನಲ್ಲಿ ತೆರವು ಕಾರ್ಯಾಚರಣೆ ನಡೆಸಿವೆ.

SCROLL FOR NEXT