ರಾಜ್ಯ

ಈ ಹೊತ್ತಿಗೆಯ 'ಹೊನಲು' ಕಾರ್ಯಕ್ರಮಕ್ಕೆ ಆಹ್ವಾನ

Rashmi Kasaragodu
ಬೆಂಗಳೂರು: ನಗರದಲ್ಲಿ ಕಳೆದ ಮೂರು ವರ್ಷಗಳಿಂದ ಸಾಹಿತ್ಯದ ಕಾರ್ಯಕ್ರಮಗಳನ್ನು ಪ್ರತಿ ತಿಂಗಳೂ ಸತತವಾಗಿ ಹಮ್ಮಿಕೊಂಡು ಬರುತ್ತಿರುವ ‘ಈ ಹೊತ್ತಿಗೆ’ಯು  ಮೇ ೧೫-೦೫-೨೦೧೬ (ಭಾನುವಾರದಂದು)  ಜೆ.ಪಿ ನಗರದಲ್ಲಿರುವ ‘ಕಪ್ಪಣ್ಣ ಅಂಗಳ’ ಸಭಾಗೃಹದಲ್ಲಿ, ಬೆಳಿಗ್ಗೆ ೧೦.೩೦ರಿಂದ ಸಂಜೆ ೫.೦೦ರವರೆಗೆ "ಹೊನಲು’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಈ ಸಲದ ‘ಹೊನಲು’ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಕವಿಗಳಾದ ಶ್ರೀಮತಿ. ಲಲಿತಾ ಸಿದ್ಧಬಸವಯ್ಯ ಹಾಗೂ ಸು.ರಂ ಎಕ್ಕುಂಡಿ ಅವರುಗಳ ಕಾವ್ಯ ಗಾಯನ, ವಾಚನ, ವಿಶ್ಲೇಷಣೆ ಮತ್ತು ಚರ್ಚೆ ನಡೆಯಲಿದೆ.
 ಪ್ರಸ್ತುತ ಕಾರ್ಯಕ್ರಮಕ್ಕೆ ಡಾ. ಹೆಚ್. ಎಸ್ ರಾಘವೇಂದ್ರ ರಾವ್, ಡಾ. ಕೆ.ವಿ ನಾರಾಯಣ, ಶ್ರೀ. ಗಿರೀಶ್ ಹತ್ವಾರ್ (ಜೋಗಿ), ಹಾಗೂ ಡಾ. ಎಂ.ಎಸ್ ಆಶಾದೇವಿ ಅವರು ಕಾರ್ಯಕ್ರಮದ ಗಣ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. 
ಅಂದು ದೇಶ, ವಿದೇಶದಾದ್ಯಂತ ಸಾಹಿತ್ಯಾಸಕ್ತರು ‘ಹೊನಲು’ ಕಾರ್ಯಕ್ರಮದ ನೇರ ಪ್ರಸಾರವನ್ನು ಆನ್‍ಲೈನ್‍ನಲ್ಲಿ http://www.vividlipi.com ಈ ಜಾಲತಾಣದಲ್ಲಿ ವಿಕ್ಷಿಸಬಹುದಾಗಿದೆ. ವಿವಿಡ್‍ಲಿಪಿ (vividlipi) ಜಾಲತಾಣವು ಈ ನೇರಪ್ರಸಾರದ ಪ್ರಾಯೋಜಕತ್ವವನ್ನು ವಹಿಸಿಕೊಂಡಿದೆ.
ಎಲ್ಲಿ?: ‘ಕಪ್ಪಣ್ಣ ಅಂಗಳ’, ೧೪೮/ ೩೨ ಎ ಮುಖ್ಯರಸ್ತೆ, ಜೆಪಿ ನಗರ, ಮೊದಲ ಹಂತ, ಬೆಂಗಳೂರು
ದಿನಾಂಕ : ೧೫-೦೫-೨೦೧೬ (ಭಾನುವಾರ)
ಸಮಯ: ಬೆಳಿಗ್ಗೆ ೧೦.೩೦ರಿಂದ ಸಂಜೆ ೫.೦೦ರವರೆಗೆ
SCROLL FOR NEXT