ಬೆಂಗಳೂರು: ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯನ್ನು ವೇಶ್ಯಾವಾಟಿಕೆಗೆ ಹೋಲಿಸಿದ ಸಮಾಜ ಕಲ್ಯಾಣ ಸಚಿವ ಆಂಜನೇಯ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಕರ್ನಾಟಕ ಅಸೋಸಿಯೇಟೆಡ್ ಮ್ಯಾನೇಜ್ ಮೆಂಟ್ ಆಫ್ ಇಂಗ್ಲಿಷ್ ಸ್ಕೂಲ್ಸ್ ನಿರ್ಧರಿಸಿದೆ.
ಕೆಲವು ಖಾಸಗಿ ಶಾಲೆಗಳು ಹಣ ವಸೂಲಿ ಮಾಡಿ ವಿದ್ಯಾರ್ಥಿ ಪಾಲಕರನ್ನು ಶೋಷಣೆ ಮಾಡುತ್ತಿರುವುದು ನಿಜ ಎಂದು ಹೇಳಿ ಖಾಸಗಿ ಶಿಕ್ಷಣ ಸಂಸ್ಥೆಗಳ ಕಾರ್ಯವೈಕರಿಯನ್ನು ವೇಶ್ಯಾವಾಟಿಕೆಗೆ ಹೋಲಿಸಿದ್ದರು.
ಈ ಹಿನ್ನಲೆಯಲ್ಲಿ ಆಂಜನೇಯ ವಿರುದ್ಧ ಕ್ರಿಮಿನಲ್ ಮತ್ತು ಮಾನನಷ್ಟ ಮೊಕದ್ದಮೆ ಹೂಡಲು ಕರ್ನಾಟಕ ಇಂಗ್ಲಿಷ್ ಮಾಧ್ಯಮಗಳ ನಿರ್ವಹಣಾ ಸಂಘ ನಿರ್ಧರಿಸಿದೆ. ಸಚಿವರು ಖಾಸಗಿ ಶಾಲೆಗಳನ್ನು ಕ್ಷಮೆಯಾಚಿಸಬೇಕು ಎಂದು ಸಂಘ ಆಗ್ರಹಿಸಿದೆ.
ಇನ್ನು ಸಚಿವ ಆಂಜನೇಯ ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಂಡಿದ್ದಾರೆ. ಯುಪಿಎ ಸರ್ಕಾರ ಅಧಿರಾಗರದಲ್ಲಿ ಇದ್ದಾಗ ಬಡ ವಿದ್ಯಾರ್ಥಿಗಳಿಗೆ ಆರ್ ಟಿಇ ಜಾರಿಗೊಳಿಸಿತ್ತು. ಆದರೆ ಅನೇಕ ಕಡೆ ಅದನ್ನು ಪಾಲಿಸದೆ ಕಾಯ್ದೆ ಉಲ್ಲಂಘಿಸಲಾತ್ತಿದೆ ಎಂದು ದೂರು ಬಂದಿತ್ತು. ಈ ಹಿನ್ನಲೆಯಲ್ಲಿ ನಾವು ಖಾಸಗಿ ಶಾಲೆಗಳನ್ನು ಟೀಕಿಸಿದ್ದೇನೆ ಹೇಳಿದ್ದಾರೆ.