ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಬಸ್ ಭಾನುವಾರ ಬೈಕ್ ವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಹಿಂಬದಿ ಕುಳಿತಿದ್ದ ಯುವತಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ರಾಜರಾಜೆಶ್ವರಿ ನಗರದಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟಿ ಯುವತಿ ಸವಿತಾ (17) ಎಂದು ಗುರುತಿಸಲಾಗಿದ್ದು, ಯುವತಿ ಮೂಲತಃ ಮೈಸೂರಿನವಳಾಗಿದ್ದು, ಸದ್ಯ ನಾಯಂಡಳ್ಳಿ ವಾಸಿಸುತ್ತಿದ್ದರು,
ಸವಿತಾ ಇಂದು ಬೆಳಗ್ಗೆ ತನ್ನ ಅಣ್ಣನ ಜತೆ ಸಂಬಂಧಿಕರ ಮದುವೆಗೆಂದು ಹೊಂಡಾ ಆಕ್ಟೀವಾದಲ್ಲಿ ತೆರಳುತ್ತಿದ್ದರು, ಈ ವೇಳೆ ರಾಜರಾಜೇಶ್ವರಿನಗರದ ಬಳಿ ವೇಗವಾಗಿ ಬಂದ ಕಂಗೇರಿ ಕಡೆಗೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಬೈಕ್ ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಸವಿತಾ ಅಣ್ಣನಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದ, ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.