ಬೆಂಗಳೂರು: ಮುಂದಿನ ಎರಡು ದಿನಗಳಲ್ಲಿ ಲೋಕೋಪಯೋಗಿ ಇಲಾಖೆ ಕಚೇರಿ ಪೂರ್ಣವಾಗಿ ಸ್ವಚ್ಛಗೊಳ್ಳಲಿದೆ. ಕೆಲಸಕ್ಕೆ ಬಾರದ ಹಳೇಯ ಸಾಮಾಗ್ರಿಗಳನ್ನೆಲ್ಲಾ ಹರಾಜು ಹಾಕುವುದಾಗಿ ಕಟ್ಟಡ ನಿರ್ವಹಣೆ ಕಾರ್ಯಕಾರಿ ಅಭಿಯಂತರ ನಟರಾಜ್ ತಿಳಿಸಿದ್ದಾರೆ.
ಲೋಕೋಪಯೋಗಿ ಇಲಾಖೆ ಕಚೇರಿ ಆವರಣದಲ್ಲಿ ಬಿದ್ದಿರುವ ಹಳೇಯ ಹಾಗೂ ಮುರಿದ ಪಿಠೋಪಕರಣಗಳನ್ನು ಖಾಲಿ ಮಾಡಿ ಮುಂದಿನ ಎರಡು ದಿನಗಳಲ್ಲಿ ಕಟ್ಟಡವನ್ನು ಸ್ವಚ್ಛಗೊಳಿಸಲಾಗುವುದು.
ಹರಾಜು ಪ್ರಕ್ರಿಯೆಗೆ ಸಮಯ ಹಿಡಿಯಲಿರುವುದರಿಂದ ಖಾಲಿ ಇರುವ ಯಾವುದಾದರೂ ಕೊಠಡಿಗೆ ತುಂಬುವುದಾಗಿ ಅವರು ಹೇಳಿದ್ದಾರೆ.
ರಾಜ್ಯದಲ್ಲಿರುವ ಹಲವು ಸರ್ಕಾರಿ ಕಚೇರಿಗಳು ಸ್ವಚ್ಚತೆಯಿಲ್ಲದೇ ಗಬ್ಬೆದ್ದು ನಾರುತ್ತಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿತ್ತು. ವರದಿ ನಂತರ ಎಚ್ಚೆತ್ತುಕೊಂಡಿರುವ ಲೋಕೋಪಯೋಗಿ ಇಲಾಖೆ ಹಿರಿಯ ಅಧಿಕಾರಿಗಳು ಕಟ್ಟಡದ ಆವರಣದಲ್ಲಿ ಸುತ್ತಾಡಿ ಸ್ಚಚ್ಛತೆ ಇಲ್ಲದಿರುವುದನ್ನು ಗಮಿನಿಸಿ ಅನವಶ್ಯಕ ಸಾಮಾಗ್ರಿಗಳನ್ನು ತೆರವುಗೊಳಿಸುವಂತೆ ಆದೇಶ ನೀಡಿದ್ದಾರೆ.
ವರ್ಕಿಂಗ್ ಡೇ ಆಗಿರುವುದರಿಂದ ಸಂಜೆ ಆರು ಗಂಟೆ ನಂತರ ಸ್ವಚ್ಛತಾ ಕಾರ್ಯಕ್ರಮ ಆರಂಭಿಸಿಲಾಗುತ್ತದೆ. ಜೆಸಿ ಮತ್ತು ಲಾರಿಗಳ ಸಹಾಯದಿಂದ ಅನುಪಯುಕ್ತ ವಸ್ಚುಗಳನ್ನು ಕೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.
ಇನ್ನೂ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಶೀಘ್ರವೇ ಲೋಕೋಪಯೋಗಿ ಇಲಾಖೆಗೆ ಭೇಟಿ ನೀಡುವುದಾಗಿ ಮೂಲಗಳು ತಿಳಿಸಿವೆ.