ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ಆರೋಗ್ಯ ಸಚಿವ ಯುಟಿ ಖಾದರ್ ವಿರುದ್ಧ ಎನ್ ಆರ್ ರಮೇಶ್ ದೂರು ದಾಖಲು

ಆರೋಗ್ಯ ಸಚಿವ ಯು,ಟಿ ಖಾದರ್ ವಿರುದ್ಧ ಬಿಬಿಎಂಪಿ ಕಾರ್ಪೋರೇಟರ್ ಎನ್ ಆರ್ ರಮೇಶ್ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಸಚಿವ ಯು.ಟಿ.ಖಾದರ್‌ ವಿರುದ್ಧ...

ಎನ್ ಆರ್ ರಮೇಶ್ ಮತ್ತು ಯು.ಟಿ ಖಾದರ್
Shilpa D
Updated On : 24 May 2016, 12:16 pm

ಬೆಂಗಳೂರು: ಆರೋಗ್ಯ ಸಚಿವ ಯುಟಿ ಖಾದರ್ ವಿರುದ್ಧ ಬಿಬಿಎಂಪಿ ಕಾರ್ಪೋರೇಟರ್ ಎನ್ ಆರ್ ರಮೇಶ್ ವಿಧಾನಸೌಧ ಪೊಲೀಸ್‌ ಠಾಣೆಯಲ್ಲಿ ಸಚಿವ ಯು.ಟಿ.ಖಾದರ್‌ ವಿರುದ್ಧ ಕ್ರಿಮಿನಲ್‌ ದೂರು ದಾಖಲಿಸಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನ ಯೋಜನೆಯಲ್ಲಿ ನಡೆದಿರುವ ಔಷಧ ಖರೀದಿ ಹಗರಣವನ್ನು ಬಯಲಿಗೆಳೆದ ನನ್ನನ್ನು ಸಚಿವ ಯು.ಟಿ.ಖಾದರ್‌, ಮಾನಸಿಕ ಅಸ್ವಸ್ಥನೆಂದು ಹೀಯಾಳಿಸಿರುವುದಲ್ಲದೇ ನಿಮ್ಹಾನ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಬೇಕೆಂದು ಬಹಿರಂಗವಾಗಿ ಅವಮಾನಿಸಿದ್ದಾರೆ. ಇವರ ಮಾತುಗಳಿಂದ ನನ್ನ ಗೌರವಕ್ಕೆ ಚ್ಯುತಿಯಾಗಿದ್ದು, ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಕಾನೂನುರೀತಿ ಕ್ರಮ ಕೈಗೊಳ್ಳಬೇಕು ಎಂದು ಎನ್‌.ಆರ್‌.ರಮೇಶ್‌ ಅವರು ದೂರು ನೀಡಿದ್ದಾರೆ.

ರಾಷ್ಟ್ರೀಯ ಆರೋಗ್ಯ ಅಭಿಯಾನದ ಎನ್‌ಯುಎಚ್‌ಎಂ, ಎನ್‌ಆರ್‌ಎಚ್‌ಎಂ ಯೋಜನೆಯ ಅನುಷ್ಠಾನದ ದೃಷ್ಟಿಯಿಂದ ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಿರುವ ತಜ್ಞ ವೈದ್ಯರು ಮತ್ತು ಇತರೆ ಸಿಬ್ಬಂದಿಯ ವಿವರ ಒದಗಿಸಬೇಕು. ಔಷಧ ಮತ್ತು ಚಿಕಿತ್ಸಾ ಯಂತ್ರೋಪಕರಣಗಳ ಖರೀದಿಯ ಖರ್ಚು, ವೆಚ್ಚ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಒದಗಿಸಬೇಕು ಎಂದು ರಮೇಶ್‌ ಅವರು ಸಚಿವ ಯು.ಟಿ.ಖಾದರ್‌ ಅವರಿಗೆ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments