ರಾಜ್ಯ

ಮಧ್ಯರಾತ್ರಿ ಔಷಧಿ ದಾಸ್ತಾನು ಉಗ್ರಾಣಕ್ಕೆ ಖಾದರ್ ದಿಢೀರ್ ಭೇಟಿ

Manjula VN

ಬೆಂಗಳೂರು: ಮಧ್ಯರಾತ್ರಿ ಔಷಧಿ ದಾಸ್ತಾನು ಉಗ್ರಾಣಕ್ಕೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ದಿಢೀರ್ ಭೇಟಿ ನೀಡಿದ್ದು, ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಔಷಧಿ ವಿತರಣೆಯಲ್ಲಿ ಕೋಟಿ ಕೋಟಿ ಹಗರಣ ನಡೆದಿದೆ ಎಂಬ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಇದೀಗ ಎಚ್ಚೆತ್ತುಕೊಂಡಿರುವ ಖಾದರ್ ಅವರು ಮಾಗಡಿ ರಸ್ತೆಯಲ್ಲಿರುವ ಔಷಧಿ ಶೇಖರಣ ದಾಸ್ತಾನಿಗೆ ಸೋಮವಾರ ತಡ ರಾತ್ರಿ ಸುಮಾರು 12.30ಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ವ್ಯವಸ್ಥೆಯನ್ನು ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ

ಇತ್ತೀಚೆಗಷ್ಟೇ ಓಷಧಿ ಖರೀದಿಯಲ್ಲಿ ಕೋಟ್ಯಾಂತರ ಹಣ ಭ್ರಷ್ಟಾಚಾರ ನಡೆದಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು ಸಚಿವರ ವಿರುದ್ಧ ಆರೋಪ ವ್ಯಕ್ತಪಡಿಸಿದ್ದರು. ಇದರಂತೆ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದ ಖಾದರ್ ಅವರಿಗೆ ಅಧಿಕಾರಿಗಳು ಯಾವುದೇ ರೀತಿಯ ಅಕ್ರಮ ನಡೆದಿಲ್ಲ ಎಂದು ಹೇಳಿದ್ದರು.

ಹೀಗಾಗಿ ತಡ ರಾತ್ರಿ ಸ್ವತಃ ಖಾದರ್ ಅವರೇ ಔಷಧಿ ದಾಸ್ತಾನುಗಳಿಗೆ ಯಾವುದೇ ಮಾಹಿತಿ ನೀಡದೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆನ್ನಲಾಗಿದೆ. ಇನ್ನು ಪರಿಶೀಲನೆ ವೇಳೆ ಅವಧಿ ಮುಗಿದ ಆರು ವರ್ಷದ ಕಳೆದಿರುವ ಔಷಧಿಗಳನ್ನು ತೆಗೆಯದೇ ಉಗ್ರಾಣದಲ್ಲೇ ಇರಿಸಿಕೊಡಿರುವುದು, ಮುನ್ನೆಚ್ಚರಿಕೆ ವಹಿಸಿ ಸೂಕ್ಷ್ಮ ಪ್ರದೇಶದಲ್ಲಿ ಇರಿಸಬೇಕಾದ ಔಷಧಿಗಳ ಜಾಗದಲ್ಲಿ ಧೂಳು ಹಿಡಿದಿರುವುದು. ಸರಿಯಾದ ಕ್ರಮದಲ್ಲಿ ಶೇಖರಣೆ ಮಾಡದಿರುವುದು ಹೀಗೆ ನಾನೂ ರೀತಿಯ ನ್ಯೂನ್ಯತೆಗಳು ಕಂಡು ಬಂದಿದೆ. ಹೀಗಾಗಿ ಖಾದರ್ ಅವರು ಅಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ. 

SCROLL FOR NEXT