ಮೈಸೂರು ಅರಮನೆಯೊಳಗೆ ನಡೆದ ಫೋಟೋಶೂಟ್ ನ ದೃಶ್ಯ 
ರಾಜ್ಯ

ಮೈಸೂರು ಅರಮನೆಯೊಳಗೆ ಫೋಟೋಶೂಟ್; ಸಾಮಾಜಿಕ ತಾಣಗಳಲ್ಲಿ ಆಕ್ರೋಶ

ವಿಶ್ವವಿಖ್ಯಾತ ಮೈಸೂರು ಅರಮನೆಯೊಳಗೆ ಪೋಟೋ ತೆಗೆಯಲು ಅಥವಾ ಚಿತ್ರೀಕರಣಕ್ಕೆ ಯಾರಿಗೂ ಅವಕಾಶವಿಲ್ಲ ಎಂಬ ನಿಯಮವಿದೆ.

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯೊಳಗೆ ಪೋಟೋ ತೆಗೆಯಲು ಅಥವಾ ಚಿತ್ರೀಕರಣಕ್ಕೆ ಯಾರಿಗೂ ಅವಕಾಶವಿಲ್ಲ ಎಂಬ ನಿಯಮವಿದೆ. ಆದರೆ ಈ ನಿಯಮವನ್ನು ಗಾಳಿಗೆ ತೂರಿ  ಹೊರರಾಜ್ಯದ ಚಿತ್ರತಂಡಕ್ಕೆ ಫೋಟೋ ಶೂಟ್ ಗೆ ಅವಕಾಶ ಕೊಟ್ಟಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

ಕನ್ನಡ ಸಿನಿಮಾಗಳಿಗೆ ಹಾಗು ಸೂಪರ್ ಸ್ಟಾರ್ ರಜನಿಕಾಂತ್ ಅವರ ಲಿಂಗ ಸಿನಿಮಾಕ್ಕೂ ಮೈಸೂರು ಅರಮನೆಯಲ್ಲಿ ಶೂಟಿಂಗ್ ನಡೆಸಲು ಅವಕಾಶ ಕೊಟ್ಟಿರಲಿಲ್ಲ. ಆದರೆ ಇದೀಗ ಅರಮನೆಯೊಳಗೆ ವಿವಾಹ ಪೂರ್ವ ಫೋಟೋ ಶೂಟ್ ನಡೆಸಲು ಅನುಮತಿ ಕೊಟ್ಟಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಇದು ನಿಜವಾದ ವಿಡಿಯೋವೇ , ನಕಲಿಯೇ, ಪ್ರಚಾರದ ಗಿಮಿಕ್ಕೋ ಎಂಬುದು ಇನ್ನಷ್ಟೇ ತಿಳಿದುಬರಬೇಕಾಗಿದೆ.

ಬೆಂಗಳೂರಿನ ಆದಿತ್ಯ ಬಿಎನ್ ಮತ್ತು ನವ್ಯತಾಗೆ ಮೈಸೂರು ಅರಮನೆಯೊಳಗೆ ರಾಜಾರೋಷವಾಗಿ ಫೋಟೋ ಶೂಟ್ ನಡೆಸಲು ಅನುಮತಿ ಕೊಟ್ಟವರು ಯಾರು? ಭಾರೀ ಭದ್ರತೆ ಇರುವ ಅರಮನೆಯೊಳಗೆ ಹೋಗಲು ನೆರವು ನೀಡಿದವರು ಯಾರು ಎಂಬ ಹಲವು ಪ್ರಶ್ನೆಗಳು, ಸಂದೇಹಗಳು ಕೇಳಿಬರುತ್ತಿವೆ.

ಫೋಟೋ ಶೂಟ್ ನಲ್ಲಿ ಹುಡುಗ ಮತ್ತು ಹುಡುಗಿ ಮೈಸೂರು ಅರಮನೆಯ ದರ್ಬಾರ್ ಹಾಲ್, ಖಾಸಗಿ ಹಾಲ್, ಕಲ್ಯಾಣ ಮಂಟಪ ಮೊದಲಾದ ಕಡೆಗಳಲ್ಲಿ ಓಡಾಡುತ್ತಿರುವ ದೃಶ್ಯವಿದೆ. ಎಲ್ಲೆಡೆ ಹೆಲಿಕ್ಯಾಂ, ದೊಡ್ಡ ಕ್ಯಾಮರಾ ಬಳಸಿ ಫೋಟೋ ಶೂಟ್ ಗೆ ಅವಕಾಶ ನೀಡಲಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

ಈ ಫೋಟೋ ಶೂಟನ್ನು ಏಪ್ರಿಲ್ ನಲ್ಲಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ.
ಕಳೆದ ಫೆಬ್ರುವರಿ 27, 28ರಂದು ಆದಿತ್ಯ-ನವ್ಯಾ ವಿವಾಹ ಕಾರ್ಯಕ್ರಮ ನಡೆದಿತ್ತು. ಆದಿತ್ಯ ಮೂಲತಃ ಬೆಂಗಳೂರಿನವರೆ. ಲಂಡನ್ ನ ನ್ಯಾಟಿಂಗ್ಯಾಮ್ ವಿವಿಯಲ್ಲಿ ಎಂಎಸ್ಸಿ ಪದವಿ ಪಡೆದಿರುವುದಾಗಿ ಕೆಲವು ಮಾಧ್ಯಮದ ವರದಿಗಳು ತಿಳಿಸಿವೆ.

ನನಗೆ ಈ ಬಗ್ಗೆ ಮಾಹಿತಿ ಇಲ್ಲ: ರಾಣಿ ಪ್ರಮೋದಾದೇವಿ
ಫೋಟೋ ಶೂಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಣಿ ಪ್ರಮೋದಾದೇವಿ, ನನಗೆ ವೈಯಕ್ತಿಕವಾಗಿ ಮಾಹಿತಿ ಇಲ್ಲ. ವಿಶೇಷ ಸಂದರ್ಭಗಳಲ್ಲಿ ಮಾತ್ರ ನಾವು ಅಲ್ಲಿಗೆ ಹೋಗುತ್ತೇವೆ. ಅಲ್ಲಿಗೆ ಹೋದಾಗ ನಾವೇ ಫೋಟೋ ತೆಗೆಸಿಕೊಳ್ಳೋದಿಲ್ಲ. ನಾನೇ ಎಂದಿಗೂ ಕೂಡಾ ಒಳಗೆ ಹೋಗಿ ಫೋಟೋ ತೆಗೆಸಿಕೊಂಡಿಲ್ಲ. ರಾಜಮನೆತನದವರೇ ಫೋಟೋ ಶೂಟ್ ನಡೆಸಿಲ್ಲ. ಭದ್ರತಾ ಸಿಬ್ಬಂದಿಯವರನ್ನು ವಿಚಾರಿಸಬೇಕು. ಫೋಟೋ ಶೂಟ್ ನಡೆಸಲು ಅವರಿಗೆ ಯಾರು ಅವಕಾಶ ಕೊಟ್ಟರೋ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಮತ ಬೇಟೆ ತಡೆಯಲು 'ಕೈ' ಕಲಿಗಳ ಮಾಸ್ಟರ್ ಪ್ಲ್ಯಾನ್: ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಮಹತ್ವದ ಸಭೆ, ಬೂತ್ ಮಟ್ಟದಲ್ಲಿ ಸಮರಕ್ಕೆ ಸಜ್ಜು..!

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ

ಕೋಟಿ ಕೋಟಿ ಲೂಟಿ: ಅರಣ್ಯ ಇಲಾಖೆ ಮಾಜಿ ಅಧಿಕಾರಿಗೆ ಕೋರ್ಟ್ ಶಾಕ್; ಬರೋಬ್ಬರಿ 1.38 ಕೋಟಿ ದಂಡ, 3 ವರ್ಷ ಜೈಲು ಶಿಕ್ಷೆ..!