ರಾಜ್ಯ

ಬೆಂಗಳೂರು: ರೇಸಿಂಗ್ ಮಾಡಲು ಹೋಗಿ ಪ್ಲೈಓವರ್ ನಿಂದ ಬಿದ್ದು ಇಬ್ಬರು ಯುವಕರ ಸಾವು

ದ್ವಿಚಕ್ರ ವಾಹನದಲ್ಲಿ ರೇಸಿಂಗ್ ಮಾಡಲು ಹೋದ ಇಬ್ಬರು ಯುವಕರು ಕೆಂಗೇರಿ ಮೇಲ್ಸೇತುವೆಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.

ಬೆಂಗಳೂರು: ದ್ವಿಚಕ್ರ ವಾಹನದಲ್ಲಿ ರೇಸಿಂಗ್ ಮಾಡಲು ಹೋದ ಇಬ್ಬರು ಯುವಕರು ಕೆಂಗೇರಿ ಮೇಲ್ಸೇತುವೆಯಿಂದ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಹೋಂಡಾ ಡಿಯೋ ಸ್ಕೂಟರ್ ನಲ್ಲಿ ರೇಸಿಂಗ್ ಮಾದುತ್ತಿದ್ದ ಶ್ರೀಧರ್ (24) ಹಾಗೂ ಮಂಜುನಾಥ್ (26) ಕೆಂಗೇರಿ ಮೇಲ್ಸೇತುವೆಯಲ್ಲಿ ಆಯಾ ತಪ್ಪಿದ ಪರಿಣಾಮ 40 ಅಡಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೇ.31 ರ ಸಂಜೆ 5:45 ಕ್ಕೆ ಅಪಘಾತ ಸಂಭವಿಸಿದ್ದು ಮೃತರು ಕೆಂಗೇರಿ ಬಳಿ ಇರುವ ಗಾಂಧಿ ನಗರದ ನಿವಾಸಿಗಳೆಂದು ಗುರುತಿಸಲಾಗಿದೆ. 
ಸ್ಕೂಟರ್ ನ್ನು ಚಲಾಯಿಸುತ್ತಿದ್ದ ಶ್ರೀಧರ್ ಸ್ಥಳದಲ್ಲೇ ಮೃತಪಟ್ಟಿದ್ದರೆ ಹಿಂಬದಿ ಸವಾರ ಮಂಜುನಾಥ್ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಅಪಘಾತಕ್ಕೀಡಾದ ಹೊಂಡಾ ಡಿಯೋ ಸ್ಕೂಟರ್ ನ್ನು ನವೀಕರಣ ಮಾಡಿದ್ದ ಇಬ್ಬರು ವೀಲಿಂಗ್ ಮಾಡುವ ಅಭ್ಯಾಸ ಹೊಂದಿದ್ದರು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಪಘಾತಕ್ಕೀಡಾದ ಡಿಯೋ ಸ್ಕೂಟರ್ ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯಬೇಕಿತ್ತು. ಅದನ್ನು ತಪ್ಪಿಸಲು ಹೋಗಿ ಆಯಾ ತಪ್ಪಿ ಮೇಲ್ಸೇತುವೆಯಿಂದ ಕೆಳಗೆ ಬಿದ್ದಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಸುರೇಶ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಪ್ರತಿಭಟನೆ ನಮ್ಮ ಸಾಂವಿಧಾನಿಕ ಹಕ್ಕು’: Jantar Mantar ಧರಣಿಗೆ ದಿನಾಂಕ ನಿಗದಿಪಡಿಸಿ; ದೆಹಲಿ ಪೊಲೀಸರಿಗೆ 24 ಗಂಟೆಗಳ ಗಡುವು ಕೊಟ್ಟ Cockroach Janta Party..!

‘Vote chori’ ಹೈಡ್ರಾಮಾ: "ಭೇಟಿ ಸಾಧ್ಯವಿಲ್ಲ, ಏನಿದ್ದರೂ ಕೋರ್ಟ್ ಮೂಲಕವೇ ಬನ್ನಿ; ರಾಹುಲ್ ಗಾಂಧಿ-ಖರ್ಗೆ ಭೇಟಿ ಮನವಿ ತಿರಸ್ಕರಿಸಿದ CJI ಸೂರ್ಯ ಕಾಂತ್..!

'ರಸ್ತೆ ಇರೋದೇ ಡ್ರೈವಿಂಗ್‌ಗೆ ಅಲ್ವಾ?, ಅಪ್ಪ ನೋಡಿಕೊಳ್ಳುತ್ತಾರೆ ಬಿಡಿ'; ದುಬಾರಿ ಮಿನಿ ಕೂಪರ್ ಕಾರು ಹರಿಸಿ ಮೂವರ ಕೊಂದ ಯುವಕನ ಉಡಾಫೆ ಮಾತು! Video

ಹೆಬ್ಬಾಳ ಕಿರು ಸುರಂಗ ಯೋಜನೆ "ಅವೈಜ್ಞಾನಿಕ": 1,350 ಕೋಟಿ ರೂ. ಸಾರ್ವಜನಿಕ ಹಣ ಪೋಲು: ಸಂಸದ ತೇಜಸ್ವಿ ಸೂರ್ಯ ಆಕ್ಷೇಪ

ನಾನೀಗ DCM, ಡಿಕೆ.ಶಿವಕುಮಾರ್ CM, ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಡಾ. ಜಿ. ಪರಮೇಶ್ವರ್