ಮೈಸೂರು: ಮೈಸೂರಿನ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಕೈದಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಘಟನೆಯಲ್ಲಿ ಮಂಗಳೂರು ನಿವಾಸಿ ಮುಸ್ತಾಫಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೈಸೂರಿನ ಕೆ.ಆರ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ.
ಮಂಗಳೂರಿನ ಬಿಜೆಪಿ ಕಾರ್ಯಕರ್ತ ಪ್ರಶಾಂತ ಪೂಜಾರಿ ಸ್ನೇಹಿತ ಹಾಗೂ ಮೂಡಬಿದಿರೆ ಕೊಲೆ ಕೇಸ್‌ವೊಂದರ ಆರೋಪದ ಮೇಲೆ ಮುಸ್ತಾಫ ಮೈಸೂರಿನ ಜೈಲಿನಲಿದ್ದ. ಇದೇ ಜೈಲಿನಲ್ಲಿ ಪ್ರಶಾಂತ ಪೂಜಾರಿಯ ಬಲಗೈ ಬಂಟ ಕಿರಣ್ ಶೆಟ್ಟಿ ಕೂಡಾ ಇದ್ದ ಎನ್ನಲಾಗಿದೆ.
ಜೈಲಿನಲ್ಲಿದ್ದ ಇಂದು ಮಧ್ಯಾಹ್ನ ಕೈದಿಗಳನ್ನು ಊಟಕ್ಕೆ ಬಿಟ್ಟ ಸಮಯದಲ್ಲಿ ಕಿರಣ್ ಶೆಟ್ಟಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಮುಸ್ತಫಾ ಮೇಲೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾನೆ. ತಕ್ಷಣ ಮುಸ್ತಾಫನನ್ನು ಕೆ.ಆರ್.ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಪೊಲೀಸರು ಜೈಲಿಗೆ ಭೇಟಿ ನೀಡಿ ಕಿರಣ್ ಶೆಟ್ಟಿಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.