ಬೆಂಗಳೂರು: ದೇಶದ ನಾಲ್ಕು ರಾಜ್ಯಗಳ ಪೈಕಿ ಕರ್ನಾಟಕ ಮಹಿಳೆಯರು ಭಾರತೀಯ ಉದ್ಯಮಕ್ಕೆ ಶೇ.51.9 ರಷ್ಟು ಕೊಡುಗೆ ನೀಡುತ್ತಿದ್ದಾರೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾ ಕುಮಾರ ಮಂಗಳಂ ತಿಳಿಸಿದ್ದಾರೆ.
ಥಿಂಕ್ ಬಿಗ್-2016 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ಪೋರೇಟ್ ವಲಯದಲ್ಲಿ ಬಂಡವಾಳ ಹೂಡುವುದು ಮಹಿಳೆಯರ ಜವಾಬ್ದಾರಿಯಾಗಿದೆ. ಶೇ, 80ರಷ್ಟು ಮಹಿಳ ಉದ್ಯೋಗಿಗಳಿದ್ದಾರೆ. ಅನೌಪಚಾರಿಕ ವಲಯದಲ್ಲಿ ಶೇ.90ರಷ್ಟು ಮಹಿಳೆಯರು ತೊಡಗಿಕೊಂಡಿದ್ದಾರೆ. ಹೆಚ್ಚಾಗಿ ಕೃಷಿ ವಲಯದಲ್ಲಿದ್ದಾರೆ ಎಂದು ಹೇಳಿದ್ದಾರೆ.
ಆದರೆ ಮಹಿಳೆಯರು ಕೇವಲ ಶೇ.ರಷ್ಟು ಮಾತ್ರ ಆಸ್ತಿ ಹೊಂದಿದ್ದಾರೆ. ಏಕೆಂದರೆ ಮಹಿಳೆಯರಿಗೆ ಬ್ಯಾಂಕ್ ಗಳು ಸಾಲ ನೀಡಲು ನಿರಾಕರಿಸುತ್ತವೆ ಎಂದು ಹೇಳಿದ್ದಾರೆ.
ಮಹಿಳೆಯರು ಕೆಲಸ ಮಾಡುವ ಕೇಂದ್ರಗಳು ಫೇವರ್ ಆಗಿಲ್ಲ, ಬೇರೆಯವರಿಗೆ ಹೊಸತೊಂದನ್ನು ತರಬೇತಿ ನೀಡುವುದರಿಂದ ಅದಕ್ಕಾಗಿ ಹಣ ಮತ್ತು ಸಮಯ ವ್ಯರ್ಥವಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ 2014-19ರ ಹೊಸ ಕೈಗಾರಿಕಾ ನೀತಿ ಮಹಿಳೆಯರಿಗೆ ಉದ್ಯಮದಲ್ಲಿ ಹೆಚ್ಚಿನ ಉತ್ತೇಜನ ನೀಡುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಹಾರೋಹಳ್ಳಿ, ರಾಮನಗರ, ಮತ್ತು ಹುಬ್ಬಳ್ಳಿ ಕೈಗಾರಿಕಾ ಕೇಂದ್ರಗಳು ಮಹಿಳೆಯರಿಗೆ ಜವಳಿ, ರತ್ನಗಳು ಮತ್ತು ಆಭರಣ ತಯಾರಿಕಾ ಉದ್ಯಮ ಮಹಿಳೆಯರಿಗೆ ಸಹಾಯವಾಗಲಿವೆ.