ದಾವಣಗೆರೆ: ತತ್ವಜ್ಞಾನಿಗಳು ಮತ್ತು ಸಂತರ ಜಯಂತಿ ಆಚರಣೆಗಳಿಗೆ ಸಾರ್ವಜನಿಕ ರಜೆ ನೀಡುವುದನ್ನು ಹಿಂತೆಗೆದುಕೊಳ್ಳುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಬೇಕೆಂದು ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದ್ದಾರೆ.
ದಾವಣಗೆರೆಯಲ್ಲಿ ನಿನ್ನೆ ಆಯೋಜಿಸಲಾಗಿದ್ದ ಕನಕ ಜಯಂತಿ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದ್ದಾರೆ.
ಸಂತರುಗಳಾದ ಬುದ್ಧ, ಬಸವ, ಕನಕ ಮತ್ತು ವಾಲ್ಮೀಕಿ ಜಯಂತಿ ಆಚರಣೆಗಳನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಬೇಕೆ ಹೊರತು ಸರ್ಕಾರಿ ರಜೆ ಕೊಡಬಾರದು.ಈ ಮೂಲಕ ಎಲ್ಲರೂ ಕೆಲಸ ಮಾಡಿ ರಾಜ್ಯದ ಆರ್ಥಿಕಾಭಿವೃದ್ಧಿಗೆ ಸಹಕರಿಸೋಣ. ಕೇಂದ್ರ ಸರ್ಕಾರ 500, 1000 ನೋಟುಗಳನ್ನು ನಿಷೇಧ ಮಾಡಿದ ನಂತರ ರಜಾ ದಿನಗಳಲ್ಲಿ ಕೂಡ ಬ್ಯಾಂಕ್ ನೌಕರರು ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಹೇಳಿದರು.